COVID-19: ಖಾಸಗಿ ಆಸ್ಪತ್ರೆಗಳ ಶೇ.80ರಷ್ಟು ಬೆಡ್​ಗಳು ಕೊರೋನಾಗೆ ಮೀಸಲಿಟ್ಟ ಮಹಾರಾಷ್ಟ್ರ

ಇನ್ನೊಂದೆಡೆ ಕೊರೋನಾ ಸೋಂಕು ಪೀಡಿತರಿಗೆ ಚಿಕಿತ್ಸೆ ಕೊಡಲು, ಪರೀಕ್ಷೆ ಹೆಚ್ಚಿಸಲು ಆಸ್ಪತ್ರೆಗಳು, ಆರೋಗ್ಯ ಸೇವಾ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಅದಕ್ಕಾಗಿ ಎಲ್ಲಾ ಖಾಸಗಿ ಆಸ್ಪತ್ರೆಗಳ ಶೇಕಡಾ 80ರಷ್ಟು ಕೊರೊನಾ ರೋಗಿಗಳಿಗೆ ಮೀಸಲಿಡುವಂತೆ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ. ಮುಂಬೈವೊಂದರಲ್ಲೇ 4,400 ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ‌ ಕೊರೋನಾಗೆ ಮೀಸಲಿಟ್ಟಿದೆ.

news18-kannada
Updated:May 23, 2020, 8:39 AM IST
COVID-19: ಖಾಸಗಿ ಆಸ್ಪತ್ರೆಗಳ ಶೇ.80ರಷ್ಟು ಬೆಡ್​ಗಳು ಕೊರೋನಾಗೆ ಮೀಸಲಿಟ್ಟ ಮಹಾರಾಷ್ಟ್ರ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ
  • Share this:
ನವದೆಹಲಿ(ಮೇ.23): ಮಹಾರಾಷ್ಟ್ರದಲ್ಲಿ ನೆಲೆಸಿದ್ದ ಕರ್ನಾಟಕದ ಜನ ಈಗ ರಾಜ್ಯಕ್ಕೆ ಓಡೋಡಿ ಬರಲು ಅಲ್ಲಿ ಕೊರೋನಾ ವೈರಸ್ ಶರವೇಗದಲ್ಲಿ ಹರಡುತ್ತಿರುವುದೇ ಕಾರಣ. ಇಡೀ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರದ ಪಾಲು ಶೇಕಡಾ 32ರಷ್ಟಿದೆ. ಆದುದರಿಂದ ಕಂಗಾಲಾಗಿರುವ ಮಹಾರಾಷ್ಟ್ರ ಸರ್ಕಾರ ಕೊರೋನಾ ಪರಿಸ್ಥಿತಿ ನಿಭಾಯಿಸಲು ಪರದಾಡುತ್ತಿದೆ.

ಹೌದು, ಒಂದು ತಿಂಗಳಿನಿಂದ ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಸಾವಿರಗಟ್ಟಲೆ ಹೆಚ್ಚಾಗುತ್ತಿದೆ.‌ ನಿನ್ನೆ ಒಂದೇ ದಿನ ಮಹಾರಾಷ್ಟ್ರದಲ್ಲಿ 2,940 ಜನರಿಗೆ ಸೋಂಕು ತಗುಲಿದೆ.‌ ಮುಂಬೈ ಒಂದರಲ್ಲೇ ಸಾವಿರಕ್ಕೂ ಹೆಚ್ಚು ಜನ‌‌ ಸೋಂಕು ಪೀಡಿತರಾಗಿದ್ದಾರೆ. ಇದು‌ ನಿನ್ನೆಯ ಕಥೆ ಮಾತ್ರವಲ್ಲ, ಹತ್ತದಿನೈದು ದಿನಗಳಿಂದ ಪರಿಸ್ಥಿತಿ ಹೀಗೇ ಇದೆ.

ಇನ್ನೊಂದೆಡೆ ಕೊರೋನಾ ಸೋಂಕು ಪೀಡಿತರಿಗೆ ಚಿಕಿತ್ಸೆ ಕೊಡಲು, ಪರೀಕ್ಷೆ ಹೆಚ್ಚಿಸಲು ಆಸ್ಪತ್ರೆಗಳು, ಆರೋಗ್ಯ ಸೇವಾ ಸಿಬ್ಬಂದಿಯ ಕೊರತೆ ಕಾಡುತ್ತಿದೆ. ಅದಕ್ಕಾಗಿ ಎಲ್ಲಾ ಖಾಸಗಿ ಆಸ್ಪತ್ರೆಗಳ ಶೇಕಡಾ 80ರಷ್ಟು ಕೊರೊನಾ ರೋಗಿಗಳಿಗೆ ಮೀಸಲಿಡುವಂತೆ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ. ಮುಂಬೈವೊಂದರಲ್ಲೇ 4,400 ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ‌ ಕೊರೋನಾಗೆ ಮೀಸಲಿಟ್ಟಿದೆ.

ಇದನ್ನೂ ಓದಿ: ಭಾರತದಲ್ಲಿ ಕೋವಿಡ್​​-19 ಪ್ರಕರಣ: ಹೀಗಿದೆ ರಾಜ್ಯವಾರು ದಾಖಲಾದ ಸೋಂಕಿತರ ವಿವರ

ಇದಲ್ಲದೆ ಆರೋಗ್ಯ ಸೇವೆಯವರ ಕೊರತೆ ನೀಗಿಸಿಕೊಳ್ಳಲು ಖಾಸಗಿಯಾಗಿ ಕ್ಲಿನಿಕ್ ನಡೆಸುತ್ತಿರುವ ವೈದ್ಯರು ಮತ್ತು ಅರೇ ವೈದ್ಯಕೀಯ ಸಿಬ್ಬಂದಿಗಳು ಕಡ್ಡಾಯವಾಗಿ ಸರ್ಕಾರ ನಿಯೋಜಿಸಿದ ಆಸ್ಪತ್ರೆಗಳಲ್ಲಿ ಕೆಲಸ ಮಾಡಬೇಕೆಂದು ಮತ್ತೊಂದು ಆದೇಶ ಮಾಡಿದೆ‌. ಯಾರಾದರೂ ಈ ನಿಯಮ ಉಲ್ಲಂಘಿಸಿದರೆ ಅಂತಹ  ಕ್ಲಿನಿಕ್ ಗಳ ಪರವಾನಿಗೆ ರದ್ದುಗೊಳಿಸುವುದಾಗಿ ಎಚ್ಚರಿಸಿದೆ.

First published:May 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading