ಮಹಾರಾಷ್ಟ್ರದಲ್ಲಿ ಪತ್ರಕರ್ತರ ಬೆನ್ನಲ್ಲೀಗ ಪೊಲೀಸರಿಗೂ ತಟ್ಟಿದ ಕೊರೋನಾ ಬಿಸಿ: 96 ಮಂದಿಗೆ ಸೋಂಕು

ಇನ್ನು, ಶಿವಸೇನೆ ಸರ್ಕಾರದ ಪ್ರಕಾರ, 6,817 ಸೋಂಕಿತರ ಪೈಕಿ 957 ಮಂದಿ ಕೊರೋನಾದಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಆದ್ದರಿಂದ ಇದೀಗ 5,559 ಮಂದಿ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ ಸುಮಾರು 1,02,189 ಮಂದಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮುಂಬೈ(ಏ.25): ಭಾರತದಲ್ಲಿ ಕೊರೋನಾ ಆರ್ಭಟವೂ ಮುಂದುವರಿದಿದೆ. ದೆಹಲಿ, ಉತ್ತರಪ್ರದೇಶ, ಕರ್ನಾಟಕ, ಕೇರಳ, ರಾಜಸ್ಥಾನ, ತಮಿಳು ನಾಡು, ಪಂಜಾಬ್​​, ಬಿಹಾರ್​ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಕೊರೋನಾ ಸೋಂಕಿಗೆ ದಿನದಿಂದ ದಿನಕ್ಕೆ ಬಲಿಯಾಗುವವರ ಸಂಖ್ಯೆ ಏರುತ್ತಲೇ ಇದೆ. ಹಾಗೆಯೇ ಮಹಾರಾಷ್ಟ್ರದಲ್ಲಿಯೂ ಪತ್ರಕರ್ತರ ಬೆನ್ನಲ್ಲೀಗ ಕೊರೋನಾ ವಿರುದ್ಧ ಹೋರಾಡುತ್ತಿರುವ ಪೊಲೀಸರಿಗೆ ಸೋಂಕು ತಗುಲಿದೆ. 96 ಮಂದಿಗೆ ಕೊರೋನಾ ಬಂದಿದ್ದು, ಈ ಪೈಕಿ 15 ಜನ ಅಧಿಕಾರಿಗಳು ಇದ್ದಾರೆ.

  ಇನ್ನು, ಮುಂಬೈನ ಧಾರಾವಿ ಸ್ಲಂನಲ್ಲಿ 24ರ ಮಂದಿಗೆ ಕೊರೋನಾ ತಗುಲಿದೆ. 95 ಮಂದಿ ಪೊಲೀಸರು ಸೇರಿದಂತೆ ಒಟ್ಟು ಇದುವರೆಗೂ ಮಹಾರಾಷ್ಟ್ರದಲ್ಲಿ 6817 ಮಂದಿಗೆ ಕೋವಿಡ್​-19 ಪಾಸಿಟಿವ್​ ಧೃಡಪಟ್ಟಿದೆ. ಜತೆಗೆ ಕಳೆದ 24 ಗಂಟೆಗಳಲ್ಲಿ ಸುಮಾರು 18 ಮಂದಿಯನ್ನು ಈ ಮಾರಕ ಕೊರೋನಾ ಬಲಿ ತೆಗೆದುಕೊಂಡಿದೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಕೊರೋನಾದಿಂದ ಸಾವನ್ನಪ್ಪಿದ್ದವರ ಸಂಖ್ಯೆ 301ಕ್ಕೆ ಏರಿಕೆಯಾಗಿದೆ.

  ಇನ್ನು, ಶಿವಸೇನೆ ಸರ್ಕಾರದ ಪ್ರಕಾರ, 6,817 ಸೋಂಕಿತರ ಪೈಕಿ 957 ಮಂದಿ ಕೊರೋನಾದಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಆದ್ದರಿಂದ ಇದೀಗ 5,559 ಮಂದಿ ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ ಸುಮಾರು 1,02,189 ಮಂದಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.

  ಇದನ್ನೂ ಓದಿ: ರಾಜ್ಯದಲ್ಲಿಂದು 26 ಮಂದಿಗೆ ಕೊರೋನಾ: 500ರ ಗಡಿ ದಾಟಿದ ಸೋಂಕಿತರ ಸಂಖ್ಯೆ

  ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 59 ಮಂದಿ ಸಾವನ್ನಪ್ಪಿರುವ ಕಾರಣ ಮೃತರ ಸಂಖ್ಯೆ 779ಕ್ಕೇರಿರುವುದು ಆತಂಕಕಾರಿಯಾಗಿದೆ. ಮತ್ತೊಂದಡೆ 25,000ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಇದುವರೆಗಿನ ಅಧಿಕೃತ ವರದಿ ಪ್ರಕಾರ, ಡೆಡ್ಲಿ ವೈರಸ್ ಈವರೆಗೆ ದೇಶಾದ್ಯಂತ 779 ಜನರನ್ನು ಬಲಿ ಪಡೆದಿದ್ದು, ಸೋಂಕಿತರ ಸಂಖ್ಯೆ 25,000ಕ್ಕೇರಿದೆ.
  First published: