ಕಾರ್ಖಾನೆಗಳಲ್ಲಿ 8 ಗಂಟೆ ಬದಲಿಗೆ 12ಗಂಟೆಗಳ ಶಿಫ್ಟ್; ಅನುಮತಿ ನೀಡಿದ ಮಹಾರಾಷ್ಟ್ರ ಸರ್ಕಾರ

Maharashtra News: ಕಳೆದ 6 ವಾರಗಳಿಂದ ರಾಷ್ಟ್ರದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಹೀಗಾಗಿ ಕಾರ್ಖಾನೆಗಳನ್ನು ಮುಚ್ಚಲ್ಪಟ್ಟಿದ್ದು ಉತ್ಪಾದನಾ ವಲಯ ಬಹುತೇಕ ಸ್ಥಗಿತವಾಗಿದೆ. ಹೀಗಾಗಿ ಲಾಕ್‌ಡೌನ್ ಅವಧಿ ಮುಗಿದ ನಂತರ ಕಾರ್ಮಿಕರನ್ನು 8 ಗಂಟೆ ಬದಲಿಗೆ 12 ಗಂಟೆ ದುಡಿಸಿಕೊಳ್ಳಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು.

ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು (ಸಾಂದರ್ಭಿಕ ಚಿತ್ರ)

ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು (ಸಾಂದರ್ಭಿಕ ಚಿತ್ರ)

  • Share this:
ಮುಂಬೈ (ಮೇ 07); ಲಾಕ್‌ಡೌನ್‌ನಿಂದ ಉಂಟಾಗಿರುವ ಉತ್ಪಾದನೆ ಮತ್ತು ಕಾರ್ಮಿಕರ ಕೊರೆತೆಯನ್ನು ನೀಗಿಸುವ ಸಲುವಾಗಿ ಕಾರ್ಮಿಕರನ್ನು ಕಾರ್ಖಾನೆಗಳಲ್ಲಿ 8 ಗಂಟೆ ಬದಲಿಗೆ 12 ಗಂಟೆ ದುಡಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ಇಂದು ಅನುಮತಿ ನೀಡಿದೆ. ಕಳೆದ 6 ವಾರಗಳಿಂದ ರಾಷ್ಟ್ರದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ. ಹೀಗಾಗಿ ಕಾರ್ಖಾನೆಗಳನ್ನು ಮುಚ್ಚಲ್ಪಟ್ಟಿದ್ದು ಉತ್ಪಾದನಾ ವಲಯ ಬಹುತೇಕ ಸ್ಥಗಿತವಾಗಿದೆ. ಹೀಗಾಗಿ ಲಾಕ್‌ಡೌನ್ ಅವಧಿ ಮುಗಿದ ನಂತರ ಕಾರ್ಮಿಕರನ್ನು 8 ಗಂಟೆ ಬದಲಿಗೆ 12 ಗಂಟೆ ದುಡಿಸಿಕೊಳ್ಳಬೇಕು ಎಂಬ ಮಾತುಗಳು ಕೇಳಿ ಬಂದಿದ್ದವು.

ಈ ನಡುವೆ ದೇಶದ ನಾನಾ ಮೂಲೆಯಲ್ಲಿದ್ದ ವಲಸೆ ಕಾರ್ಮಿಕರು ಅವರವರ ರಾಜ್ಯಗಳಿಗೆ ಹಿಂದಿರುಗಿದ್ದು, ಇದೀಗ ಕಾರ್ಮಿಕರ ಕೊರತೆಯೂ ಉಂಟಾಗಿರುವುದರಿಂದ ಮಹಾರಾಷ್ಟ್ರ ಸರ್ಕಾರ ಬೇರೆ ದಾರಿ ಕಾಣದೆ ಕಾರ್ಮಿಕರನ್ನು 8 ಗಂಟೆ ಬದಲಿಗೆ 12 ಗಂಟೆ ಶಿಫ್ಟ್‌ನಲ್ಲಿ ದುಡಿಸಿಕೊಳ್ಳಲು ಅನುಮತಿ ನೀಡಿದೆ.

ಆದರೆ, ಸರ್ಕಾರದ ಈ ನಿರ್ಧಾರಕ್ಕೆ ಕಾರ್ಮಿಕ ಸಂಘಗಳು ವಿರೋಧ ವ್ಯಕ್ತಪಡಿಸಿವೆ. ಇದರಿಂದ ಮತ್ತಷ್ಟು ಉದ್ಯೋಗ ಕಡಿತ ಆಗಲಿದೆ ಎಂದು ಸರ್ಕಾರದ ಬಳಿ ತಮ್ಮ ಆತಂಕವನ್ನು ತೋಡಿಕೊಂಡಿದ್ದಾರೆ. ಆದರೆ, ಇದ್ಯಾವುದಕ್ಕೂ ಕ್ಯಾರೆ ಎನ್ನದ ಮಹಾರಾಷ್ಟ್ರ ಸರ್ಕಾರ ಕಾರ್ಮಿಕರ ಕೊರತೆಯಿಂದ ಶಿಫ್ಟ್ ಅವದಿ ಹೆಚ್ಚಿಸಲು ಕಾರ್ಖಾನೆಗಳ ಮಾಲೀಕರ ಮನವಿ ಮೇರೆಗೆ ಶಿಫ್ಟ್ ಅವಧಿ ಹೆಚ್ಚಿಸಲಾಗಿದೆ ಎಂದು ಕಾರ್ಮಿಕ ಸಂಘಟನೆಗಳಿಗೆ ಸ್ಪಷ್ಟೀಕರಣ ನೀಡಿದೆ.

ಇದನ್ನೂ ಓದಿ : ವಿಮಾನ ಸೇವೆ ಆರಂಭಿಸಿದ ಏರ್‌ ಇಂಡಿಯಾ; ಮೇ 14ರವರೆಗಿನ ಪ್ರಯಾಣಕ್ಕೆ ಟಿಕೆಟ್ ‌ಬುಕಿಂಗ್ ಆರಂಭ
First published: