HOME » NEWS » Coronavirus-latest-news » MAHARASHTRA MAY HAVE OVER 2000 CASES OF BLACK FUNGUS MINISTER MAK

Black Fungus: ಕೊರೋನಾ ಭೀತಿಯ ನಡುವೆ ಹೆಚ್ಚುತ್ತಿದೆ ಬ್ಲಾಕ್ ಫಂಗಸ್​ ವೈರಸ್; ಮಹಾರಾಷ್ಟ್ರದಲ್ಲಿ 2,000 ಜನರಿಗೆ ಸೋಂಕು!

ಮಹಾರಾಷ್ಟ್ರದಲ್ಲಿ ಬ್ಲಾಕ್ ಫಂಗಸ್ ಸೋಂಕಿನಿಂದ ಹೆಚ್ಚಿನ ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದ್ದು, ರಾಜ್ಯದಲ್ಲಿ 2,000 ಪ್ರಕರಣಗಳು ಇರಬಹುದು. ಕೊರೋನಾ ಪ್ರಕರಣಗಳ ಏರಿಕೆ ಜೊತೆಗೆ ಬ್ಲಾಕ್ ಫಂಗಸ್ ಸೋಂಕಿತರು ಏರಿಕೆಯಾಗಬಹುದು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.

news18-kannada
Updated:May 12, 2021, 6:05 PM IST
Black Fungus: ಕೊರೋನಾ ಭೀತಿಯ ನಡುವೆ ಹೆಚ್ಚುತ್ತಿದೆ ಬ್ಲಾಕ್ ಫಂಗಸ್​ ವೈರಸ್; ಮಹಾರಾಷ್ಟ್ರದಲ್ಲಿ 2,000 ಜನರಿಗೆ ಸೋಂಕು!
ಬ್ಲಾಕ್​ ಫಂಗಸ್.
  • Share this:
ಮುಂಬೈ (ಮೇ 12); ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಅಧಿಕವಾಗುತ್ತಲೇ ಇದೆ. ಲಾಕ್​ಡೌನ್ ನಡುವೆಯೂ ಸೋಂಕು ನಿಯಂತ್ರಣಕ್ಕೆ ಸಿಗುತ್ತಿಲ್ಲ, ದಿನವೊಂದಕ್ಕೆ 4.5 ಲಕ್ಷಕ್ಕೂ ಅಧಿಕ ಜನ ಸೋಂಕಿಗೆ ತುತ್ತಾಗುತ್ತಿದ್ದಾರೆ. ಸಾವಿನ ಸಂಖ್ಯೆಯೂ ಏರುತ್ತಲೇ ಇದೆ. ಕೊರೋನಾ ಸೋಂಕನ್ನು ನಿಯಂತ್ರಿ ಸುವುದು ಸರ್ಕಾರಕ್ಕೆ ಸವಾಲಿನ ಕೆಲಸವಾಗಿದೆ.   ಕೊರೋನಾ ಪ್ರಕರಣಗಳ ಏರಿಕೆ, ಸಾವುಗಳು, ಆರೋಗ್ಯ ಸೌಕರ್ಯಗಳ ಅಲಭ್ಯತೆ ನಡುವೆ ದೇಶವೇ ಜರ್ಜರಿತವಾಗಿದೆ. ಇದರ ನಡುವೆ ಬ್ಲಾಕ್ ಫಂಗಸ್ ಸೋಂಕು ಜನರಲ್ಲಿ ಮತ್ತಷ್ಟು ಆತಂಕ ಉಂಟುಮಾಡುತ್ತಿದೆ. ಮಹಾರಾಷ್ಟ್ರದಲ್ಲೇ 2000 ಮಂದಿ ಸೋಂಕಿತರು ಇದ್ದಾರೆ ಎಂದು ಸರ್ಕಾರ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಬ್ಲಾಕ್ ಫಂಗಸ್ ಸೋಂಕಿನಿಂದ ಹೆಚ್ಚಿನ ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದ್ದು, ರಾಜ್ಯದಲ್ಲಿ 2,000 ಪ್ರಕರಣಗಳು ಇರಬಹುದು. ಕೊರೋನಾ ಪ್ರಕರಣಗಳ ಏರಿಕೆ ಜೊತೆಗೆ ಬ್ಲಾಕ್ ಫಂಗಸ್ ಸೋಂಕಿತರು ಏರಿಕೆಯಾಗಬಹುದು ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದಾರೆ.

ವೈದ್ಯಕೀಯ ಕಾಲೇಜುಗಳೊಂದಿಗಿರುವ ಆಸ್ಪತ್ರೆಗಳನ್ನು ಬ್ಲಾಕ್ ಫಂಗಸ್ ಸೋಂಕು ಚಿಕಿತ್ಸಾ ಕೇಂದ್ರಗಳಾಗಿ ಬಳಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ ಎಂದು ಸಚಿವ ರಾಜೇಶ್ ಟೋಪೆ ತಿಳಿಸಿದ್ದಾರೆ. ಬುಧವಾರ (ಮೇ 12) ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್‌ನಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಜೊತೆಗೆ ಥಾಣೆಯಲ್ಲಿ ಇತರ ಆರು ರೋಗಿಗಳು ಈ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎರಡು ದಿನಗಳ ಹಿಂದೆ ಒಡಿಶಾ ರಾಜ್ಯದಲ್ಲಿ ಮೊದಲ ಬ್ಲಾಕ್ ಫಂಗಸ್ ಪ್ರಕರಣವನ್ನು ವರದಿಯಾಗಿದೆ. ಒಡಿಶಾದ ಜಜ್ಪುರ್ ಜಿಲ್ಲೆಯ 71 ವರ್ಷದ ಕೊರೊನಾ ರೋಗಿಯಲ್ಲಿ ಸೋಂಕು ಕಂಡು ಬಂದಿದ್ದು, ಅವರು ಅನಿಯಂತ್ರಿತ ಮಧುಮೇಹವನ್ನು ಸಹ ಹೊಂದಿದ್ದಾರೆ. ಇತ್ತ ದೆಹಲಿ, ಗುಜರಾತ್ ಮತ್ತು ಇತರ ಕೆಲವು ರಾಜ್ಯಗಳಲ್ಲಿ ಈ ಸೋಂಕಿನ ಈಗಾಗಲೇ ಆತಂಕ ಉಂಟುಮಾಡುತ್ತಿದೆ.

ಕಳೆದ 12 ಗಂಟೆಗಳಲ್ಲಿ ಜೈಪುರದಲ್ಲಿ ಬ್ಲಾಕ್ ಫಂಗಸ್ ಸೋಂಕಿನ 14 ರೋಗಿಗಳು ಕಂಡು ಬಂದಿದ್ದಾರೆ. ರಾಂಚಿಯಿಂದ ಇಬ್ಬರು, ರಾಜಸ್ಥಾನದಿಂದ ನಾಲ್ಕು ಮಂದಿ, ಉತ್ತರ ಪ್ರದೇಶದ ಐವರು ಮತ್ತು ದೆಹಲಿ-ಎನ್‌ಸಿಆರ್‌ನಿಂದ ಇಬ್ಬರು ಸೋಂಕಿತರು ಪತ್ತೆಯಾಗಿದ್ದಾರೆ. ಈ ಸೋಂಕಿತರಲ್ಲಿ ಹಲವರು ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಮಧ್ಯೆ ಗುಜರಾತ್‌ನಲ್ಲಿ ಅತಿ ಹೆಚ್ಚು ಬ್ಲಾಕ್ ಫಂಗಸ್ ಪ್ರಕರಣಗಳು ವರದಿಯಾಗಿವೆ. ಗುಜರಾತ್ ಸರ್ಕಾರವು ಅಂತಹ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್‌ಗಳನ್ನು ಸ್ಥಾಪಿಸಲು ಪ್ರಾರಂಭಿಸಿದೆ ಮತ್ತು ಅದರ ಚಿಕಿತ್ಸೆಯಲ್ಲಿ ಬಳಸುವ 5,000 ಔಷಧದ ಬಾಟಲುಗಳನ್ನು ಸಂಗ್ರಹಿಸಿದೆ. ಗುಜರಾತ್ ಇದುವರೆಗೆ 100 ಕ್ಕೂ ಹೆಚ್ಚು ಪ್ರಕರಣಗಳನ್ನು ವರದಿ ಮಾಡಿದ್ದು, ಇದು ಅನೇಕ ರೋಗಿಗಳನ್ನು ಕುರುಡನನ್ನಾಗಿ ಮಾಡಿದೆ.

ಈ ಸೋಂಕಿನಿಂದ ಬಳಲುತ್ತಿರುವ ರೋಗಿಗಳ ಮೇಲೆ ಬಳಸಲಾಗುತ್ತಿರುವ ಆಂಫೊಟೆರಿಸಿನ್ ಬಿ (Amphotericin B) ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೆಚ್ಚುವರಿ ಆಮದು ಮತ್ತು ದೇಶೀಯ ಉತ್ಪಾದನೆಯಲ್ಲಿ ಹೆಚ್ಚಳದೊಂದಿಗೆ ಔಷಧಿ ಪೂರೈಕೆ ಸುಧಾರಿಸುವ ನಿರೀಕ್ಷೆಯಿದೆ ಎಂದು ಕೇಂದ್ರ ತಿಳಿಸಿದೆ.ಇದನ್ನೂ ಓದಿ: ಮಾನಗೆಟ್ಟ ಬಿಜೆಪಿಗರೇ ನಿಮ್ಮವರೇ ನಿಮ್ಮ ಮುಖಕ್ಕೆ ಉಗಿಯುತ್ತಿದ್ದಾರಲ್ಲ ಕೊಂಚವೂ ನಾಚಿಕೆ ಎನಿಸುತ್ತಿಲ್ಲವೇ?; ಕಾಂಗ್ರೆಸ್​ ಕಿಡಿ!

ಬ್ಲಾಕ್ ಫಂಗಸ್ ಸೋಂಕಿನ ಲಕ್ಷಣಗಳು ತಲೆನೋವು, ಜ್ವರ, ಕಣ್ಣುಗಳ ಕೆಳಗೆ ನೋವು, ಮೂಗಿನ ಅಥವಾ ಸೈನಸ್ ದಟ್ಟಣೆ ಮತ್ತು ದೃಷ್ಟಿ ಭಾಗಶಃ ನಷ್ಟ. ಕೆಲವರು ಕೆಮ್ಮು, ಉಸಿರಾಟದ ತೊಂದರೆ, ರಕ್ತಸಿಕ್ತ ವಾಂತಿ ಮತ್ತು ಬದಲಾದ ಮಾನಸಿಕ ಸ್ಥಿತಿ ಕಂಡುಬರುತ್ತದೆ.
Youtube Video

ಕೊರೊನಾ ರೋಗಿಗಳಲ್ಲಿ ಅನಿಯಂತ್ರಿತ ಮಧುಮೇಹ ಮತ್ತು ದೀರ್ಘಕಾಲದ ತೀವ್ರ ನಿಗಾ ಘಟಕ (ಐಸಿಯು) ವಾಸ್ತವ್ಯದಲ್ಲಿ ಈ ಸೋಂಕು ಕಂಡುಬಂದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಬ್ಲಾಕ್ ಫಂಗಸ್ ಸೋಂಕು ಹೊಸದಲ್ಲ ಆದರೆ ಕೊರೊನಾ ಸೋಂಕಿತ ರೋಗಿಗಳಲ್ಲಿ ಹೆಚ್ಚುತ್ತಿದೆ ಎಂದು ತಜ್ಞರು ಹೇಳಿದ್ದಾರೆ. ಏಕೆಂದರೆ ಸ್ಟೀರಾಯಡ್‌ಗಳ ಬಳಕೆಯು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಕೆಲವು ಔಷಧಿಗಳು ರೋಗಿಗಳ ರೋಗನಿರೋಧಕ ಶಕ್ತಿಯನ್ನು ಕಡಿಮೆಗೊಳಿಸುತ್ತವೆ ಎಂದು ತಜ್ಞರು ಹೇಳಿದ್ದಾರೆ.
Published by: MAshok Kumar
First published: May 12, 2021, 6:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories