HOME » NEWS » Coronavirus-latest-news » MAHARASHTRA GOVT REDUCED CORONAVIRUS LAB TESTING PRICE GNR

COVID-19 Test: ಕೊರೋನಾ ಪರೀಕ್ಷಾ ಶುಲ್ಕ ಇಳಿಕೆ ಮಾಡಿದ ಮಹಾರಾಷ್ಟ್ರ ಸರ್ಕಾರ

ದೇಶದ ಒಟ್ಟು ಕೋವಿಡ್ -19 ಪ್ರಕರಣಗಳ ಪೈಕಿ ಶೇ. 32 ರಷ್ಟು ಮಹಾರಾಷ್ಟ್ರದಿಂದಲೇ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಸುಮಾರು 1 ಲಕ್ಷ ಕೊರೋನಾ ಕೇಸ್​ ದಾಖಲಾಗಿವೆ. ಭಾರತದ ಶೇ.45ರಷ್ಟು ಕೋವಿಡ್-19 ಪ್ರಕರಣಗಳು ಮುಂಬೈನಿಂದಲೇ ದಾಖಲಾಗಿವೆ.

news18-kannada
Updated:June 13, 2020, 6:42 PM IST
COVID-19 Test: ಕೊರೋನಾ ಪರೀಕ್ಷಾ ಶುಲ್ಕ ಇಳಿಕೆ ಮಾಡಿದ ಮಹಾರಾಷ್ಟ್ರ ಸರ್ಕಾರ
ಕೊರೊನಾ ವೈರಸ್ ಪೀಡಿತರಿಗೆ ವೈದ್ಯರ ಚಿಕಿತ್ಸೆ
  • Share this:
ಮಂಬೈ(ಜೂ.13): ಖಾಸಗಿ ಪ್ರಯೋಗಾಲಯದಲ್ಲಿ ಕೋವಿಡ್​​​-19 ಪರೀಕ್ಷೆಗೆ ನಿಗದಿ ಮಾಡಲಾಗಿದ್ದ ಬೆಲೆ ಇಳಿಕೆ ಮಾಡಿ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಅಧಿಕೃತ ಮಾಹಿತಿ ನೀಡಿರುವ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ, ಇಲ್ಲಿಯತನಕ ಕೋವಿಡ್​​-19 ಚಿಕಿತ್ಸೆಗೆ ಲ್ಯಾಬ್​​ನಲ್ಲಿ 4,400 ರೂ. ತೆಗೆದುಕೊಳ್ಳಲಾಗುತ್ತಿತ್ತು. ಇನ್ಮುಂದೆ ಕೇವಲ 2,200 ರೂ.ಗೆ ಕೊರೋನಾ ಪರೀಕ್ಷೆ ಮಾಡಲಾಗುವುದು ಎಂದರು.

ಮಹಾರಾಷ್ಟ್ರ ಸರ್ಕಾರದ ತೆಗೆದುಕೊಂಡ ನಿರ್ಧಾರದಿಂದ ಕೊರೋನಾ ರೋಗಿಗಳಿಗೆ ಭಾರೀ ಸಹಾಯವಾಗಲಿದೆ. ಇನ್ಮುಂದೆ ಆಸ್ಪತ್ರೆಗಳಿಂದ ವೈರಲ್ ಟ್ರಾನ್ಸ್‌ಪೋರ್ಟ್ ಮೀಡಿಯಾ ಮೂಲಕ ಸ್ವ್ಯಾಬ್‌ ಸಂಗ್ರಹಿಸಲು 4,400 ಬದಲಿಗೆ 2,200 ರೂ. ವಿಧಿಸಲಾಗುವುದು. ಒಂದು ವೇಳೆ ಮನೆಯಿಂದಲೇ ಸ್ವ್ಯಾಬ್ ಸಂಗ್ರಹಿಸಬೇಕಾದರೇ 2,800 ರೂ. ವಿಧಿಸಲಾಗುವುದು ಎಂದರು ರಾಜೇಶ್​ ಟೋಪೆ.

ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇವರ ಖರ್ಚು ಭರಿಸಲು ಸಾಧ್ಯವಾಗದ ಕಾರಣ ಆರಂಭದಲ್ಲಿ ಸರ್ಕಾರ ಕೊವಿಡ್-19 ಪರೀಕ್ಷೆ ಶುಲ್ಕ 5200 ರೂ. ನಿಗದಿ ಮಾಡಿತ್ತು. ನಂತರ ಇದನ್ನು ಕಡಿಮೆ ಮಾಡಿ 4,400 ರೂ. ಮಾಡಲಾಯ್ತು. ಈಗ ಮತ್ತೆ 2,200 ರೂ.ಗೆ ಕೊರೋನಾ ಪರೀಕ್ಷಾ ಶುಲ್ಕ ಇಳಿಸಲಾಗಿದೆ.

ದೇಶದ ಒಟ್ಟು ಕೋವಿಡ್ -19 ಪ್ರಕರಣಗಳ ಪೈಕಿ ಶೇ. 32 ರಷ್ಟು ಮಹಾರಾಷ್ಟ್ರದಿಂದಲೇ ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಸುಮಾರು 1 ಲಕ್ಷ ಕೊರೋನಾ ಕೇಸ್​ ದಾಖಲಾಗಿವೆ. ಭಾರತದ ಶೇ.45ರಷ್ಟು ಕೋವಿಡ್-19 ಪ್ರಕರಣಗಳು ಮುಂಬೈನಿಂದಲೇ ದಾಖಲಾಗಿವೆ.

ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿರುವ ಈ ಮಾರಕ ಕೊರೋನಾ ವೈರಸ್ ಪ್ರಕರಣ ಹೆಚ್ಚಾಗಿರುವ ದೇಶಗಳ ಪೈಕಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಒಟ್ಟು ಸೋಂಕಿತರ ಸಂಖ್ಯೆ 308, 993 ಆಗಿದ್ದು, ಅಮೆರಿಕಾ, ಬ್ರೆಜಿಲ್ ಮತ್ತು ರಷ್ಯಾ ದೇಶಕ್ಕಿಂತ ಹಿಂದಿದೆ.
First published: June 13, 2020, 6:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading