ಮಧುರೈನ ಈ ರೆಸ್ಟೋರೆಂಟ್​ನಲ್ಲಿ ಸಿಗುತ್ತೆ ಮಾಸ್ಕ್​ ಪರೋಟ, ಕೊರೋನಾ ಬೊಂಡ-ರವೆ ದೋಸೆ

ಮಾಸ್ಕ್​ ಪರೋಟ ಮಾತ್ರವಲ್ಲದೇ, ರೆಸ್ಟೋರೆಂಟ್​ನಲ್ಲಿ ಕೊರೋನಾ ಬೊಂಡ ಮತ್ತು ಕೊರೋನಾ ರವೆ ದೋಸೆಯನ್ನು ಸಹ ಮಾಡಲಾಗುತ್ತಿದೆ. ಬೊಂಡ ಮತ್ತು ರವೆ ದೋಸೆ ದಕ್ಷಿಣ ಭಾರತದ ಜನಪ್ರಿಯ ಸ್ನ್ಯಾಕ್ಸ್​​ ಆಗಿವೆ.

news18-kannada
Updated:July 9, 2020, 4:01 PM IST
ಮಧುರೈನ ಈ ರೆಸ್ಟೋರೆಂಟ್​ನಲ್ಲಿ ಸಿಗುತ್ತೆ ಮಾಸ್ಕ್​ ಪರೋಟ, ಕೊರೋನಾ ಬೊಂಡ-ರವೆ ದೋಸೆ
ಮಾಸ್ಕ್ ಆಕಾರದ ಪರೋಟ
  • Share this:
ತಮಿಳುನಾಡು(ಜು.09): ಕೊರೋನಾ ಅಟ್ಟಹಾಸ ಶುರುವಾದಾಗಿನಿಂದ ಸರ್ಕಾರ ಜನರಿಗೆ ಹಲವಾರು ರೀತಿಯಲ್ಲಿ ಜಾಗೃತಿ ಮೂಡಿಸುತ್ತಾ ಬಂದಿದೆ. ಅದರಲ್ಲೂ ಕಡ್ಡಾಯವಾಗಿ ಮಾಸ್ಕ್​ ಧರಿಸುವಿಕೆ ಮತ್ತು ಸಾಮಾಜಿಕ ಅಂತರದ ಬಗ್ಗೆ ಜನರಿಗೆ ತಿಳಿ ಹೇಳಲಾಗುತ್ತಿದೆ. ಆದರೂ ಸಹ ಜನರು ಕೊರೋನಾ ವಿರೋಧಿ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ತಮಿಳುನಾಡಿನ ಮಧುರೈನಲ್ಲಿರುವ ಹೋಟೆಲ್ ಟೆಂಪಲ್ ಸಿಟಿಯ ಚೈನ್​​  ರೆಸ್ಟೋರೆಂಟ್​ ಮಾಸ್ಕ್ ಧರಿಸುವಿಕೆಯ ಮಹತ್ವದ ಬಗ್ಗೆ ಹೊಸದಾಗಿ ಅರಿವು ಮೂಡಿಸಲು ಮುಂದಾಗಿದೆ.

ಹೌದು, ಚೈನ್​ ರೆಸ್ಟೋರೆಂಟ್​ನಲ್ಲಿ ಮಾಸ್ಕ್​ ಆಕಾರದಲ್ಲಿ ರುಚಿಯಾದ ಪರೋಟ ತಯಾರಿಸಲಾಗುತ್ತಿದೆ. ಅಲ್ಲಿನ ಊಟದ ಮೆನುವಿನಲ್ಲಿ ಹೊಸದಾಗಿ ಮಾಸ್ಕ್​ ಪರೋಟ ಎಂದು ಸೇರಿಸಲಾಗಿದೆ. ಸರ್ಕಾರ ಮಾಸ್ಕ್​ ಧರಿಸುವಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಯತ್ನಿಸುವಾಗ, ನಾವು ಕೂಡ ಸಮಾಜಕ್ಕೆ ಈ ಬಗ್ಗೆ ಸಂದೇಶ ಕೊಡಲು ನಿರ್ಧರಿಸಿದೆವು ಎಂದು ಹಾಸ್ಪಿಟಾಲಿಟಿ ಮತ್ತು ರೆಸ್ಟೋರೆಂಟ್ ಚೈನ್​​ನ ಮಾಲೀಕ ಕೆ.ಎಲ್.ಕುಮಾರ್ ಹೇಳಿದರು.

ನಾವು ಮಾಸ್ಕ್ ಆಕಾರದಲ್ಲಿ ಪರೋಟ ತಯಾರಿಸಿ ಜನರಲ್ಲಿ ಯಾಕೆ ಜಾಗೃತಿ ಮೂಡಿಸಬಾರದು ಎಂಬ ಹೊಸ ಚಿಂತನೆ ನಮ್ಮಲ್ಲಿ ಹುಟ್ಟಿತು. ಹೀಗಾಗಿ ಒಂದು ಹೆಜ್ಜೆ ಮುಂದೆ ಹೋಗಿ ಮಾಸ್ಕ್​ ಆಕಾರದ ಪರೋಟ ಮಾಡಲು ಶುರು ಮಾಡಿದೆವು ಎಂದು ಹೇಳುತ್ತಾರೆ ಕುಮಾರ್.

ಬೆಂಗಳೂರಿನಲ್ಲಿ ಕೊರೋನಾ ಕೇಸ್​ ಹೆಚ್ಚಾಗಲು ಕಾರಣವೇನು ಗೊತ್ತೇ? - ಇಲ್ಲಿದೆ ಆತಂಕಕಾರಿ ಮಾಹಿತಿ

ಇಷ್ಟೇ ಅಲ್ಲದೇ, 2 ಪರೋಟಗೆ 50 ರೂಪಾಯಿಯಂತೆ ದರ ನಿಗದಿ ಮಾಡಿದ್ದೇವೆ. ಪರೋಟ ಜೊತೆ ಕೊರ್ಮ ಮತ್ತು ರಾಯ್ತ ಕೂಡ ನೀಡುತ್ತೇವೆ ಎಂದರು.

ಕೊರೋನಾ ಬೊಂಡ ಮತ್ತು ಕೊರೋನಾ ರವಾ ದೋಸೆ

ಮಾಸ್ಕ್​ ಪರೋಟ ಮಾತ್ರವಲ್ಲದೇ, ರೆಸ್ಟೋರೆಂಟ್​ನಲ್ಲಿ ಕೊರೋನಾ ಬೊಂಡ ಮತ್ತು ಕೊರೋನಾ ರವೆ ದೋಸೆಯನ್ನು ಸಹ ಮಾಡಲಾಗುತ್ತಿದೆ. ಬೊಂಡ ಮತ್ತು ರವೆ ದೋಸೆ ದಕ್ಷಿಣ ಭಾರತದ ಜನಪ್ರಿಯ ಸ್ನಾಕ್ಸ್​​ ಆಗಿವೆ.
ಕೊರೋನಾ ಬೊಂಡ


ಚೈನ್ ರೆಸ್ಟೋರೆಂಟ್​ನ ಮೆನು ಕಾರ್ಡ್​​ನಲ್ಲಿ ಕೊರೋನಾ ವೈರಸ್​ ಆಕೃತಿಯುಳ್ಳ ಬೊಂಡ ಮತ್ತು ರವೆ ದೋಸೆಯನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಇದೊಂದು ಟ್ರೆಂಡ್​ ಆಗಿ ಬದಲಾಗಿದೆ ಎನ್ನುತ್ತಾರೆ ಕುಮಾರ್.

ಕೊರೋನಾ ರವೆ ದೋಸೆ


ರಜನಿಕಾಂತ್ ಅವರ ಬಾಬಾ ಸಿನಿಮಾ ಬಿಡುಗಡೆಯಾದ ವೇಳೆ ಅಂದರೆ 2002ರಲ್ಲಿ ನಾನು ಬಾಬಾ ಪನೀರ್ ಮಸಾಲ ದೋಸೆ ಎಂದು ಹೊಸ ತಿಂಡಿಯನ್ನು ಪರಿಚಯಿಸಿದೆ. ಇದು ನನ್ನ ಮೊದಲ ದೋಸೆ ಸಂಶೋಧನೆಯಾಗಿತ್ತು.

ಇದು ಪ್ರಖ್ಯಾತಿಯಾದ ಬಳಿಕ 2012ರಲ್ಲಿ ಸಚಿನ್ ತೆಂಡೂಲ್ಕರ್ 100ನೇ ಅಂತರಾಷ್ಟ್ರೀಯ ಶತಕ ಬಾರಿಸಿದಾಗ , ತೆಂಡೂಲ್ಕರ್​ ದೋಸೆಯನ್ನು ಲಾಂಚ್ ಮಾಡಿದೆ. ಅದು ಕ್ರಿಕೆಟ್​ ಬ್ಯಾಟ್ ಆಕಾರದಲ್ಲಿ ಎಂದು ಕುಮಾರ್​ ತಮ್ಮ ಹಳೆಯ ಆವಿಷ್ಕಾರಗಳನ್ನು ನೆನಪಿಸಿಕೊಂಡರು.

ಈ ರೆಸ್ಟೋರೆಂಟ್​ನ ಕೊರೋನಾ ಬೊಂಡ, ಮಾಸ್ಕ್ ಪರೋಟ, ಕೊರೋನಾ ರವೆ ದೋಸೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗುತ್ತಿವೆ. 
Published by: Latha CG
First published: July 9, 2020, 3:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading