ಆಗ ಕೂಲಿಕಾರ್ಮಿಕರಿಗೆ ಆಪದ್ಬಾಂಧವ; ಈಗ ಪೊಲೀಸರಿಗೆ ಧೈರ್ಯ; ಎಸಿಪಿ ಕರಿಬಸವನಗೌಡಗೆ ಮೆಚ್ಚುಗೆಯ ಮಹಾಪೂರ

ಎಸಿಪಿ ಕರಿಬಸವನಗೌಡ ಅವರು ಈ ಹಿಂದೆ ಲಾಕ್ ಡೌನ್ ಆಗಿದ್ದ ವೇಳೆ ಸುಮಾರು 15 ಸಾವಿರ ಕೂಲಿ ಕಾರ್ಮಿಕರನ್ನು ಅವರ ರಾಜ್ಯಕ್ಕೆ ಕಳುಹಿಸಿ ಕೊಡುವ ಜವಾಬ್ದಾರಿ ವಹಿಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದರು.

news18-kannada
Updated:June 30, 2020, 9:41 PM IST
ಆಗ ಕೂಲಿಕಾರ್ಮಿಕರಿಗೆ ಆಪದ್ಬಾಂಧವ; ಈಗ ಪೊಲೀಸರಿಗೆ ಧೈರ್ಯ; ಎಸಿಪಿ ಕರಿಬಸವನಗೌಡಗೆ ಮೆಚ್ಚುಗೆಯ ಮಹಾಪೂರ
ಎಸಿಪಿ ಕರಿಬಸವನಗೌಡ
  • Share this:
ಬೆಂಗಳೂರು(ಜೂನ್ 30): ಎಸಿಪಿಯೊಬ್ಬರು ಇಡೀ ರಾಜ್ಯದ ಪೊಲೀಸರಿಗೆ ಮಾದರಿಯಾಗಿದ್ದಾರೆ. ಮಡಿವಾಳ ಉಪವಿಭಾಗದ ಎಸಿಪಿ ಕರಿಬಸವನಗೌಡ ಅವರು ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಕೈಗೊಳ್ಳುತ್ತಿರುವ ಸೇವೆಗಳಿಗೆ ಈಗ ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಪಡೆದಿದ್ದಾರೆ.

ಈ ಹಿಂದೆಯೂ ಕೊರೊನಾ ಆರಂಭದ ದಿನಗಳಲ್ಲಿ ಬಡ ಜನರ, ಕೂಲಿ ಕಾರ್ಮಿಕ, ವಲಸೆ ಕಾರ್ಮಿಕರಿಗೆ ಸಹಾಯಹಸ್ತ ನೀಡಿ ಸುದ್ದಿಯಾಗಿದ್ದ ಕರಿಬಸವನಗೌಡ ಅವರು ಈಗ ಕೊರೋನಾ ಪಾಸಿಟಿವ್ ಆದ ಪೊಲೀಸರ ಕುಟುಂಬಗಳಿಗೆ ನೆರವಾಗುತ್ತಾ ಇದ್ದಾರೆ.

ಎಸಿಪಿ ಕರಿಬಸವನಗೌಡ ಅವರ ವ್ಯಾಪ್ತಿಯಲ್ಲಿ ನಾಲ್ಕು ಪೊಲೀಸ್ ಸ್ಟೇಷನ್​ಗಳು ಬರುತ್ತವೆ. ಅದರಲ್ಲಿ ಮಡಿವಾಳ ಪೊಲೀಸ್ ಸ್ಟೇಷನ್​ನಲ್ಲಿ ಮೂವರು ಪೊಲೀಸರಿಗೆ ಪಾಸಿಟಿವ್ ಆಗಿತ್ತು. ಉಳಿದಂತೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಓರ್ವ ಪೊಲೀಸ್ ಕಾನ್ಸ್​ಟೆಬಲ್​ಗೆ ಪಾಸಿಟಿವ್ ಆಗಿತ್ತು. ಇತ್ತ ಪೊಲೀಸರಿಗೆ ಪಾಸಿಟಿವ್ ಅಂತ ಗೊತ್ತಾಗಿದ ಕೂಡಲೇ ಅವರ ಮನೆಗಳಿಗೆ ತೆರಳಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ. ಜೊತೆಗೆ ಅವರಿಗೆ ಸುಮಾರು 10 ಸಾವಿರದಷ್ಟು ಹಣವನ್ನು ವೈಯಕ್ತಿಕವಾಗಿ ನೀಡಿ ಸುಮಾರು 15 ದಿನಗಳಿಗೆ ಬೇಕಾಗುವಷ್ಟು ದಿನಸಿಯನ್ನು ನೀಡಿದ್ದಾರೆ. ಒಂದು ವೇಳೆ ಕುಟುಂಬಸ್ಥರಿಗೆ ಏನೇ ಎಮರ್ಜೆನ್ಸಿ ಇದ್ರೂ ಮೊಬೈಲ್ ನಂಬರ್ ಕೊಟ್ಟು ಕರೆ ಮಾಡುವಂತೆಯೂ ಹೇಳಿದ್ದಾರೆ.

food kit
ಕೋವಿಡ್ ಸಂಕಷ್ಟದಲ್ಲಿರುವವರಿಗೆ ಆಹಾರ ಕಿಟ್ ಒದಗಿಸಿದ ಎಸಿಪಿ ಕರಿಬಸವನಗೌಡ


ಇದಿಷ್ಟೇ ಅಲ್ಲದೆ ಈಗ ಕೊರೊನಾ ಚೆಕಪ್​ಗೆ ಈಗ ಐದು ಸಾವಿರ ಹಣ ಆಗುತ್ತಿದ್ದು ಅವರ ಕುಟುಂಬಸ್ಥರಿಗೂ ಸ್ವಂತ ಹಣದಲ್ಲಿಯೇ ಕೊರೋನಾ ತಪಾಸಣೆ ಮಾಡಿಸಿದ್ದಾರೆ. ಇದಿಷ್ಟೇ ಅಲ್ಲದೆ ಅವರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಿಬ್ಬಂದಿಗೂ ಹಣದ ಕೊರತೆ ಇದ್ದರೆ ನಾನೇ ತಪಾಸಣೆ ಮಾಡಿಸುತ್ತೇನೆ ಅನ್ನೋ ಭರವಸೆಯ ಮಾತನ್ನೂ ಹೇಳಿದ್ದಾರೆ. ಇದರಿಂದ ಮಡಿವಾಳ ಉಪವಿಭಾಗದ ಪೊಲೀಸರಿಗೆ ಈಗ ಎಸಿಪಿ ಕರಿಬಸವನಗೌಡ ಅವರ ಧೈರ್ಯ ಆಗಿದ್ದಾರೆ.‌

ಇದನ್ನೂ ಓದಿ: ಜುಲೈ 31ರವರೆಗೆ ಅನ್​ಲಾಕ್ 2: ಏನಿದೆ ಮಾರ್ಗಸೂಚಿ? ಯಾವ್ಯಾವುದಕ್ಕಿಲ್ಲ ಅವಕಾಶ?

ಎಸಿಪಿ ಕರಿಬಸವನಗೌಡ ಅವರು ಈ ಹಿಂದೆ ಲಾಕ್ ಡೌನ್ ಆಗಿದ್ದ ವೇಳೆ ಸುಮಾರು 15 ಸಾವಿರ ಕೂಲಿ ಕಾರ್ಮಿಕರನ್ನು ಅವರ ರಾಜ್ಯಕ್ಕೆ ಕಳುಹಿಸಿ ಕೊಡುವ ಜವಾಬ್ದಾರಿ ವಹಿಸಿಕೊಂಡು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದರು. 4 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ಕೊಡಿಸಿ ಅವರ ಹಸಿವನ್ನು ನೀಗಿಸಿದ್ದು ಜನರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.

ಒಟ್ಟಿನಲ್ಲಿ ಕೊರೊನಾ ವೇಳೆ ಬಡ ಕುಟುಂಬಗಳಿಗೆ ಆಧಾರವಾಗಿದ್ದ ಎಸಿಪಿ ಈಗ ಪೊಲೀಸರ ಬೆನ್ನಿಗೂ ನಿಂತಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮೆಚ್ಚುಗೆಗೆ ಕಾರಣಕರ್ತರಾಗಿದ್ದಾರೆ.ಇಂತಹ ಹಿರಿಯ ಪೊಲೀಸ್ ಅಧಿಕಾರಿಗೆ ನ್ಯೂಸ್ 18 ಕಡೆಯಿಂದಲೂ ಧನ್ಯವಾದಗಳು.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading