ಕೊರೋನಾ ಸ್ಕ್ರೀನಿಂಗ್‌ಗೆ ಮುಂದಾದ ವೈದ್ಯರ ಮೇಲೆ ಹಲ್ಲೆ; ಕಲ್ಲೆಸೆದು ಪ್ರತಿರೋಧಿಸಿರುವ ಮಧ್ಯಪ್ರದೇಶದ ಜನ

ದೇಶದಲ್ಲಿ ದಿನೇ ದಿನೇ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಅಧಿಕವಾಗುತ್ತಲೇ ಇದೆ. ಮೃತಪಟ್ಟವರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮಧ್ಯಪ್ರದೇಶದಲ್ಲಿ ಈಗಾಗಲೇ 99 ಜನರಿಗೆ ಈ ಸೋಂಕು ತಗುಲಿದ್ದು ಈ ಪೈಕಿ 76 ಜನ ಇಂದೂರ್ ನಗರಕ್ಕೆ ಸೇರಿದವರು. 19 ಜನಕ್ಕೆ ಕೊರೋನಾ ಪಾಸಿಟಿವ್ ಆಗಿದೆ.

news18-kannada
Updated:April 2, 2020, 10:27 AM IST
ಕೊರೋನಾ ಸ್ಕ್ರೀನಿಂಗ್‌ಗೆ ಮುಂದಾದ ವೈದ್ಯರ ಮೇಲೆ ಹಲ್ಲೆ; ಕಲ್ಲೆಸೆದು ಪ್ರತಿರೋಧಿಸಿರುವ ಮಧ್ಯಪ್ರದೇಶದ ಜನ
ಸಾರ್ವಜನಿಕವಾಗಿ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಮಧ್ಯಪ್ರದೇಶದ ಜನ.
  • Share this:
ಮಧ್ಯಪ್ರದೇಶ (ಏಪ್ರಿಲ್ 02); ಕೊರೋನಾ ಸೋಂಕು ಪೀಡಿತರನ್ನು ಪರೀಕ್ಷೆಗೆ ಆಗಮಿಸಿದ್ದ ವೈದ್ಯರ ಮೇಲೆ ಸ್ಥಳೀಯರು, ಸಾರ್ವಜನಿಕರು ಕಲ್ಲು ತೂರಾಟ ನಡೆಸಿ ಹಲ್ಲೆ ಮಾಡಿರುವ  ಘಟನೆ ಮಧ್ಯಪ್ರದೇಶದ ಇಂದೂರ್‌ನಲ್ಲಿ ನಡೆದಿದೆ.

ದೇಶದಲ್ಲಿ ದಿನೇ ದಿನೇ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಅಧಿಕವಾಗುತ್ತಲೇ ಇದೆ. ಮೃತಪಟ್ಟವರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮಧ್ಯಪ್ರದೇಶದಲ್ಲಿ ಈಗಾಗಲೇ 99 ಜನರಿಗೆ ಈ ಸೋಂಕು ತಗುಲಿದ್ದು ಈ ಪೈಕಿ 76 ಜನ ಇಂದೂರ್ ನಗರಕ್ಕೆ ಸೇರಿದವರು. 19 ಜನಕ್ಕೆ ಕೊರೋನಾ ಪಾಸಿಟಿವ್ ಆಗಿದೆ.

ಹೀಗಾಗಿ ಈ ನಗರದಲ್ಲಿ ಅಗತ್ಯಕ್ಕಿಂತ ಹೆಚ್ಚು ಎಚ್ಚರಿಕೆ ವಹಿಸಿರುವ ಅಲ್ಲಿನ ಸರ್ಕಾರ ನಗರದ ಎಲ್ಲರನ್ನೂ ಸ್ಕ್ರೀನಿಂ ಮಾಡುವ ಮೂಲಕ ಕೊರೋನಾ ಪರೀಕ್ಷೆಗೆ ಒಳಪಡಿಸಲು ಮುಂದಾಗಿದೆ. ಇದೇ ಕಾರಣಕ್ಕೆ ಇಂದು ಆರೋಗ್ಯ ಇಲಾಖೆ ಅಧಿಕಾರಿಗಳು ಜನರನ್ನು ಪರಿಶೀಲಿಸಲು ಮುಂದಾಗಿದ್ದಾರೆ. ಆದರೆ, ಈ ವೇಳೆ ಸ್ಥಳೀಯರು ವೈದ್ಯರ ಮೇಲೆ ಕಲ್ಲು ತೂರಾಟ ನಡೆಸಿ ಹಲ್ಲೆಗೆ ಮುಂದಾಗಿದ್ದಾರೆ. ಪರಿಣಾಮ ವೈದ್ಯರು ಹೆದರಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಈ ಕುರಿತು ದೂರು ದಾಖಲಿಸಿಕೊಂಡಿರುವ ಮಧ್ಯಪ್ರದೇಶದ ಪೊಲೀಸರು ಹಲ್ಲೆ ನಡೆಸಿದವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.

ಇದನ್ನೂ ಓದಿ : ಅಮೆರಿಕದಲ್ಲಿ ಮುಂದುವರಿದ ಕೊರೋನಾ ಆರ್ಭಟ; ಒಂದೇ ದಿನ 884 ಸಾವು, ಸೋಂಕಿತರ ಸಂಖ್ಯೆ 2.15 ಲಕ್ಷಕ್ಕೆ ಏರಿಕೆ

First published:April 2, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading