HOME » NEWS » Coronavirus-latest-news » MADHYA PRADESH 99 PERSENT KUMBH RETURNEES TEST POSITIVE KVD

ಕುಂಭಮೇಳದಿಂದ ವಾಪಸ್ ಆದ ಶೇ.99ರಷ್ಟು ಮಂದಿಗೆ ಪಾಸಿಟಿವ್; ಸೂಪರ್ ಸ್ಪ್ರೆಡರ್ ಆದ ಹರಿದ್ವಾರ!

ಕಳೆದ ವರ್ಷ ತಬ್ಲಿಘಿ ಜಮಾತ್​ನಿಂದ ಕೊರೋನಾ ಹರಡಿತ್ತು. ಆಗ ಕೊರೋನಾ ಬಗ್ಗೆ ತಿಳಿಯದೇ ಅವರೆಲ್ಲಾ ದೆಹಲಿಯಲ್ಲಿ ಒಂದೆಡೆ ಸೇರಿದ್ದರು. ಆದರೆ ಈ ಬಾರಿ ಕೊರೋನಾ ಬಗ್ಗೆ ತಿಳಿದಿದ್ದರೂ ಕುಂಭಮೇಳ ನಡೆಸಲಾಗುತ್ತಿದೆ. ತಬ್ಲಿಘಿ ಜಮಾತ್​ಗಿಂತ ದೊಡ್ಡ ಮಟ್ಟದಲ್ಲಿ ಕುಂಭಮೇಳ ಸೋಂಕನ್ನು ಹರಡಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

Kavya V | news18-kannada
Updated:May 2, 2021, 3:22 PM IST
ಕುಂಭಮೇಳದಿಂದ ವಾಪಸ್ ಆದ ಶೇ.99ರಷ್ಟು ಮಂದಿಗೆ ಪಾಸಿಟಿವ್; ಸೂಪರ್ ಸ್ಪ್ರೆಡರ್ ಆದ ಹರಿದ್ವಾರ!
ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದ ಸಾಧು ಸಂತರು.
  • Share this:
ಭೂಪಾಲ್​: ಕೊರೋನಾ 2ನೇ ಅಲೆಯಿಂದ ತತ್ತರಿಸುತ್ತಿರುವ ಭಾರತಕ್ಕೆ ಮತ್ತೊಂದು ಆಘಾತಕಾರಿ ಸುದ್ದಿ ಅಪ್ಪಳಿಸಿದೆ. ಕಳೆದು ತಿಂಗಳು ಉತ್ತಾರಖಂಡ್​ನ ಹರಿದ್ವಾರದಲ್ಲಿ ನಡೆದ ಕುಂಭಮೇಳ ಈಗ ಕೊರೋನಾ ಸೂಪರ್​​ ಸ್ಪ್ರೆಡರ್​​ ಆಗಿ ಪರಿಣಮಿಸಿದೆ. ಪವಿತ್ರ ಗಂಗಾ ಸ್ನಾನದಲ್ಲಿ (ಶಾಹಿ ಸ್ನಾನ್​)​ ಮಿಂದೆದ್ದ ಸಾವಿರಾರು ಮಂದಿಗೆ ಸೋಂಕು ಮೆತ್ತಿಕೊಂಡಿದೆ. ಹರಿದ್ವಾರದಿಂದ ಮಧ್ಯಪ್ರದೇಶಕ್ಕೆ ಹಿಂತಿರುಗಿದ ಶೇ.99ರಷ್ಟು ಮಂದಿಯ ಕೋವಿಡ್​ ರಿಪೋರ್ಟ್​ ಪಾಸಿಟಿವ್​ ಬಂದಿದೆ. ಕುಂಭ ಮೇಳದಲ್ಲಿ ಭಾಗಿಯಾಗಿ ರಾಜ್ಯಕ್ಕೆ ಮರಳಿದವರೆಲ್ಲರಿಗೂ 14 ದಿನಗಳ ಕಾಲ ಕ್ವಾರಂಟೈನ್​ಗೆ ಒಳಪಡಿಸಿ, ಕೋವಿಡ್​ ಪರೀಕ್ಷೆ ನಡೆಸಲಾಗಿದೆ.

ಕುಂಭಮೇಳದಿಂದ ಮಧ್ಯಪ್ರದೇಶಕ್ಕೆ ವಾಪಸ್​ ಆದರಲ್ಲಿ ಶೇ.99ರಷ್ಟು ಮಂದಿಗೆ ಕೊರೋನಾ ಬಂದಿದೆ. ಇನ್ನು 22 ಯಾತ್ರಾರ್ಥಿಗಳ ಸುಳಿವು ಸಿಕ್ಕಿಲ್ಲ. ಹೀಗಾಗಿ ಮಧ್ಯಪ್ರದೇಶದಲ್ಲಿ ಕೊರೋನಾ ಆತಂಕ ಹೆಚ್ಚಾಗಿದೆ. ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಕುಂಭಮೇಳದಲ್ಲಿ ಭಾಗಿಯಾಗಿದ್ದರು. ಹರಿದ್ವಾರದಿಂದ ಹಿಂತಿರುಗಿದವರಲ್ಲಿ ಬಹುತೇಕರಿಗೆ ಕೊರೋನಾ ಬಂದಿದ್ದು, ಕುಂಭಮೇಳವೇ ಕೊರೋನಾ ಸೂಪರ್​ ಸ್ಪ್ರೆಡರ್​ ಆಗಿರುವುದು ದೃಢಪಟ್ಟಿದೆ.

ಕೊರೋನಾ ಸಮಯದಲ್ಲಿ ಕುಂಭಮೇಳ ಬೇಕಿತ್ತಾ ಎಂಬ ಹಲವು ಟೀಕೆಗಳ ಮಧ್ಯೆಯೂ 4 ತಿಂಗಳುಗಳ ಕಾಲ ನಡೆಯುವ ಕುಂಭಮೇಳವನ್ನು 1 ತಿಂಗಳಿಗೆ ಮೊಟುಕುಗೊಳಿಸಲಾಗಿತ್ತು. ಆದರೆ ಕಳೆದ ತಿಂಗಳು ಏಪ್ರಿಲ್​ನಲ್ಲಿ ದೇಶಾದ್ಯಂತ ಕೊರೋನಾ 2ನೇ ಅಲೆ ಅಬ್ಬರಿಸುತ್ತಲೇ ಕುಂಭಮೇಳವನ್ನು ಸಾಂಕೇತಿಕವಾಗಿ ನಡೆಸುವಂತೆ ಮನವಿ ಮಾಡಿಕೊಳ್ಳಲಾಯಿತು. ಇನ್ನು ಕುಂಭಮೇಳದಲ್ಲಿ ಕೋವಿಡ್​ ನಿಯಮಗಳ ಕಟ್ಟುನಿಟ್ಟಿ ಕ್ರಮಕ್ಕೆ ಉತ್ತರಾಖಂಡ್​ ಹೈಕೋರ್ಟ್​ ಸೂಚಿಸಿತ್ತು. ಕುಂಭಮೇಳದಲ್ಲಿ ಭಾಗಿಯಾಗುವವರು 72 ಗಂಟೆಗಳ ಮೊದಲು ಕೋವಿಡ್​ ಪರೀಕ್ಷೆಗೆ ಒಳಗಾಗಿ ನೆಗೆಟಿವ್​ ರಿಪೋರ್ಟ್​​ ಇದ್ದರಷ್ಟೆ ಭಾಗಿಯಾಗಬೇಕು ಎಂದು ಷರತ್ತು ವಿಧಿಸಿತ್ತು.

ಇದನ್ನೂ ಓದಿ: ಮಸ್ಕಿಯಲ್ಲಿ ವರ್ಕೌಟ್ ಆಗಲಿಲ್ಲ ವಿಜಯೇಂದ್ರ ತಂತ್ರಗಾರಿಕೆ, ಬಿಜೆಪಿಯವರೇ ಮೋಸ ಮಾಡಿದರು ಎಂದ ಪ್ರತಾಪ್​​ಗೌಡ!

ಆದರೆ ಕಳೆದ ತಿಂಗಳ ನಡೆದ ಕುಂಭಮೇಳದಲ್ಲಿ ಕೋವಿಡ್​ ನಿಯಮಗಳ ಪಾಲನೆ ಕಂಡು ಬರಲಿಲ್ಲ. ನಾಗಸಾಧುಗಳು, ಭಕ್ತಾದಿಗಳು ಮಾಸ್ಕ್​ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದಿದ್ದು ಕಂಡು ಬಂತು. ಈ ಹಿನ್ನೆಲೆಯಲ್ಲಿ ದೆಹಲಿ, ಗುಜರಾತ್​ ಸೇರಿದಂತೆ ಕೆಲ ರಾಜ್ಯಗಳು ಕುಂಭಮೇಳದಲ್ಲಿ ಭಾಗಿಯಾಗಿ ವಾಪಸ್​ ಆದವರಿಗೆ ಕೋವಿಡ್​ ಟೆಸ್ಟ್​ ಕಡ್ಡಾಯಗೊಳಿಸಿತ್ತು. ಕುಂಭಮೇಳ ಟ್ರಾವೆಲ್​ ಹಿಸ್ಟರಿಯನ್ನು ಮುಚ್ಚಿಟ್ಟರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿತ್ತು.

ಮಧ್ಯಪ್ರದೇಶದಲ್ಲಿ ಸದ್ಯ ಕುಂಭಮೇಳದಿಂದ ವಾಪಸ್​ ಆದವರನ್ನು ಕ್ವಾರಂಟೈನ್​ನಲ್ಲಿ ಇಡಲಾಗಿದೆ. ನಾಪತ್ತೆಯಾಗಿರುವ 22 ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಕಳೆದ ವರ್ಷ ತಬ್ಲಿಘಿ ಜಮಾತ್​ನಿಂದ ಕೊರೋನಾ ಹರಡಿತ್ತು. ಆಗ ಕೊರೋನಾ ಬಗ್ಗೆ ತಿಳಿಯದೇ ಅವರೆಲ್ಲಾ ದೆಹಲಿಯಲ್ಲಿ ಒಂದೆಡೆ ಸೇರಿದ್ದರು. ಆದರೆ ಈ ಬಾರಿ ಕೊರೋನಾ ಬಗ್ಗೆ ತಿಳಿದಿದ್ದರೂ ಕುಂಭಮೇಳ ನಡೆಸಲಾಗುತ್ತಿದೆ. ತಬ್ಲಿಘಿ ಜಮಾತ್​ಗಿಂತ ದೊಡ್ಡ ಮಟ್ಟದಲ್ಲಿ ಕುಂಭಮೇಳ ಸೋಂಕನ್ನು ಹರಡಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇನ್ನು ಕುಂಭಮೇಳ ವಿಶ್ಚದಲ್ಲೇ ನಡೆಯುವ ಅತಿ ದೊಡ್ಡ ಧಾರ್ಮಿಕ ಸಮಾಗಮವಾಗಿದೆ. ಕೊರೋನಾ ಮಧ್ಯೆಯೂ ಈ ಬಾರಿ ಕುಂಭಮೇಳದಲ್ಲಿ 70 ಲಕ್ಷ ಮಂದಿ ಭಾಗಿಯಾಗಿದ್ದರು.
Published by: Kavya V
First published: May 2, 2021, 3:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories