HOME » NEWS » Coronavirus-latest-news » MADGAON MANGALORE INTERCITY EXPRESS CANCELLED FROM MARCH 19TH GNR

ಕೊರೋನಾ ವೈರಸ್​: ನಾಳೆಯಿಂದ ಮಂಗಳೂರು-ಮಡಗಾಂವ್ ರೈಲು ಸಂಚಾರ ರದ್ದು

ಇನ್ನು, ಮಂಗಳೂರಿನಲ್ಲಿ ಕೊರೋನಾ ತಡೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ. ಹಾಗಾಗಿಯೇ ಜಿಲ್ಲಾಧಿಕಾರಿಗಳು ಮಾಲ್​​ಗಳು, ಕ್ಲಬ್​ಗಳು ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳ ನಿಷೇಧ ಹೇರಲಾಗಿದೆ. ಹೀಗೆಯೇ ಇಲ್ಲಿ ರೈಲುಗಳ ಸಂಚಾರವೂ ರದ್ದುಗೊಳಿಸಿದ್ದಾರೆ.


Updated:March 18, 2020, 7:00 AM IST
ಕೊರೋನಾ ವೈರಸ್​: ನಾಳೆಯಿಂದ ಮಂಗಳೂರು-ಮಡಗಾಂವ್ ರೈಲು ಸಂಚಾರ ರದ್ದು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಮಾ.18): ಕೊರೋನಾ ವೈರಸ್​​ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್​​ ಮತ್ತು ಮಡಗಾಂವ್ ನಡುವಿನ ರೈಲುಗಳ ಸಂಚಾರವನ್ನು ಮಾ.19ರಿಂದ 31ರವರೆಗೂ ಸಂಪೂರ್ಣ ರದ್ದುಗೊಳಿಸಲಾಗಿದೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಂ.ಕೆ. ಗೋಪಿನಾಥ್, ಮಂಗಳೂರು ಸೆಂಟ್ರಲ್- ಮಡಗಾಂವ್ ಇಂಟರ್‌ ಸಿಟಿ ಎಕ್ಸ್‌ಪ್ರೆಸ್ (ಟ್ರೇನ್ ನಂ.22636) ರೈಲು ರದ್ದುಗೊಳಿಸಲಾಗಿದೆ. ಜತೆಗೆ ಮಡಗಾಂವ್‌ನಿಂದ ಮಂಗಳೂರು ಸೆಂಟ್ರಲ್‌ಗೆ ಆಗಮಿಸುವ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲ್‌ನ್ನು (22635) ಕೂಡ ರದ್ದು ಮಾಡಲಾಗಿದೆ ಎಂದು ತಿಳಿಸಿದ್ಧಾರೆ.

ಚೀನಾದಲ್ಲಿ ಪತ್ತೆಯಾದ ಕೊರೋನಾ ವೈರಸ್​​ ಭಾರತದಲ್ಲೂ ವ್ಯಾಪಕವಾಗಿ ಹರಡುತ್ತಿದೆ. ಇಲ್ಲಿಯವರೆಗೂ ಈ ಮಾರಕ ರೋಗಕ್ಕೆ ಸಿಲುಕಿ 100ಕ್ಕೂ ಅಧಿಕ ಭಾರತೀಯರು ನರಳುತ್ತಿದ್ದಾರೆ. ಮಹಾರಾಷ್ಟ್ರದಂತೆ ಕರ್ನಾಟಕದ ವಾತವರಣವೂ ಹದಗೆಟ್ಟಿದೆ. ಮೊದಲಿಗೆ ನಿರಾತಂಕವಾಗಿದ್ದ ಕರ್ನಾಟಕದಲ್ಲೂ ಈಗ ಕೊರೊನಾ ಕೋಲಾಹಲ ಸೃಷ್ಟಿಸಿದ ಪರಿಣಾಮ 11 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತರ ಸಂಪರ್ಕದಲ್ಲಿ ಇರುವವರ ವೈದ್ಯಕೀಯ ತಪಾಸಣೆಗೆ ತೀವ್ರ ಕಾರ್ಯಾಚರಣೆ ನಡೆಯುತ್ತಿದೆ.

ಕರ್ನಾಟಕದ ಕಲಬುರಗಿಯಲ್ಲಿ ಕೊರೊನಾ ವೈರಸ್ ಗೆ 76 ವರ್ಷದ ಮೊಹ್ಮದ್ ಹುಸೇನ್ ಸಿದ್ದಿಕಿ ಬಲಿಯಾದರು. ಇವರ ನಂತರ ದೆಹಲಿಯಲ್ಲಿ 68 ವರ್ಷದ ಮತ್ತೋರ್ವ ವ್ಯಕ್ತಿ ಈ ಮಾರಕಕ್ಕೆ ಮೃತರಾದರು. ಇದೀಗ ಮುಂಬೈನಲ್ಲಿ 64 ವರ್ಷದ ಮತ್ತೊಬ್ಬ ವ್ಯಕ್ತಿ ಕೊರೊನಾದಿಂದ ಅಸುನೀಗಿದ್ದಾನೆ. ಈ ಮಧ್ಯೆಯೇ ಕರ್ನಾಟಕ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿ ಎಷ್ಟು ಮಂದಿ ಕೊರೋನಾದಿಂದ ನರಳುತ್ತಿದ್ದಾರೆ ಎಂಬ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ: 60 ಮಂದಿ ಕೊರೋನಾ ಶಂಕಿತರಿಗೆ ಮನೆ ನಿಗಾದಿಂದ ಮುಕ್ತಿ; ವಿಜಯಪುರ ಜಿಲ್ಲಾಧಿಕಾರಿ ವೈ ಎಸ್​​ ಪಾಟೀಲ್​​

ಇದರಿಂದ ರಾಜ್ಯದ ಜನ ಆತಂಕಕ್ಕೀಡಾಗಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೇ ಖುದ್ದು ನಿಂತು ಕಾಯಿಲೆ ತಡೆಗಟ್ಟುವ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ, ಬಹುತೇಕ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ರಾಜಕಾರಣಿಗಳು ತಮ್ಮ ಜಿಲ್ಲೆಗಳಿಗೆ ಭೇಟಿಯೇ ನೀಡುತ್ತಿಲ್ಲ.

ಇನ್ನು, ಮಂಗಳೂರಿನಲ್ಲಿ ಕೊರೋನಾ ತಡೆಗೆ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ. ಹಾಗಾಗಿಯೇ ಜಿಲ್ಲಾಧಿಕಾರಿಗಳು ಮಾಲ್​​ಗಳು, ಕ್ಲಬ್​ಗಳು ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳ ನಿಷೇಧ ಹೇರಲಾಗಿದೆ. ಹೀಗೆಯೇ ಇಲ್ಲಿ ರೈಲುಗಳ ಸಂಚಾರವೂ ರದ್ದುಗೊಳಿಸಿದ್ದಾರೆ.
First published: March 18, 2020, 7:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories