• ಹೋಂ
  • »
  • ನ್ಯೂಸ್
  • »
  • Corona
  • »
  • ಲಾಕ್​​ಡೌನ್​​ ಮೊದಲ ದಿನವೇ ತಗ್ಗಿದ ಸೋಂಕು, ಆದರೆ ಸಾವಿನ ಸಂಖ್ಯೆ 600ರ ಸಮೀಪ!

ಲಾಕ್​​ಡೌನ್​​ ಮೊದಲ ದಿನವೇ ತಗ್ಗಿದ ಸೋಂಕು, ಆದರೆ ಸಾವಿನ ಸಂಖ್ಯೆ 600ರ ಸಮೀಪ!

ಆರೋಗ್ಯ ಸಚಿವ ಕೆ ಸುಧಾಕರ್.

ಆರೋಗ್ಯ ಸಚಿವ ಕೆ ಸುಧಾಕರ್.

24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 596 ಮಂದಿ ಪ್ರಾಣಬಿಟ್ಟಿದ್ದಾರೆ. ಸಾವಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡು ಬಂದಿರುವುದು ಆತಂಕ ಸೃಷ್ಟಿಸಿದೆ.

  • Share this:

ಬೆಂಗಳೂರು: ಕೊರೋನಾ ಹರಡುವಿಕೆಯ ಸರಪಣಿಯನ್ನು ತುಂಡಾಗಿಸಲು ರಾಜ್ಯ ಸರ್ಕಾರ ಇಂದಿನಿಂದ 2 ವಾರಗಳ ಕಾಲ ರಾಜ್ಯದಲ್ಲಿ ಕಟ್ಟುನಿಟ್ಟಿನ ಲಾಕ್​ಡೌನ್​ ಜಾರಿಗೊಳಿಸಿದೆ. ಇದರ ಬೆನ್ನಲ್ಲೇ ಇಂದು ಕೊರೋನಾ ಪಾಸಿಟಿವ್​ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿದೆ. ಇಂದು ರಾಜ್ಯದಲ್ಲಿ 39,305 ಪಾಸಿಟಿವ್​ ಪ್ರಕರಣಗಳು ದಾಖಲಾಗಿವೆ. ಕಳೆದ ಕೆಲ ದಿನಗಳಿಂದ 50 ಸಾವಿರ ಆಸುಪಾಸಿನಲ್ಲೇ ದಾಖಲಾಗುತ್ತಿದ್ದ ಪಾಸಿಟಿವ್​  ಕೇಸ್​ಗಳ ಸಂಖ್ಯೆ ಇಂದು ತಗ್ಗಿದೆ. ನಿನ್ನೆಯಷ್ಟೇ 47,930 ಪಾಸಿಟಿವ್​ ಕೇಸ್​ಗಳ ದಾಖಲಾಗಿದ್ದವು, ನಿನ್ನೆಗಿಂತ ಇಂದು 8,625 ಕೇಸ್​ಗಳು ಕಡಿಮೆ ದಾಖಲಾಗಿವೆ. ನಿನ್ನೆ ಮತ್ತು ಇಂದಿನ ಸೋಂಕಿನ ಪ್ರಮಾಣದಲ್ಲಿ ಭಾರೀ ವ್ಯತ್ಯಾಸ ಕಂಡು ಬಂದಿರುವುದು ಆಶಾದಾಯಕವಾಗಿದೆ.


ಇದೇ ಆಶಾಭಾವನೆಯನ್ನು ಕೊರೋನಾ ಸಾವಿನ ವಿಚಾರದಲ್ಲಿ ಹೇಳುವಂತಿಲ್ಲ. ಇಂದು ಕರ್ನಾಟಕದಲ್ಲಿ ದಾಖಲೆಯ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ. 24 ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 596 ಮಂದಿ ಪ್ರಾಣಬಿಟ್ಟಿದ್ದಾರೆ. ಸಾವಿನ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡು ಬಂದಿರುವುದು ಆತಂಕ ಸೃಷ್ಟಿಸಿದೆ. ನಿನ್ನೆ ರಾಜ್ಯದಲ್ಲಿ 490 ಮಂದಿ ಸಾವನ್ನಪ್ಪಿದ್ದರು, ಇಂದು ಸಾವಿನ ಸಂಖ್ಯೆ ಆರು ನೂರರ ಸಮೀಪ ಸುಳಿದಿದೆ.


ರಾಜಧಾನಿ ಬೆಂಗಳೂರಿನಲ್ಲಿ ಇಂದು 16,747 ಮಂದಿಯ ಕೊರೋನಾ ರಿಪೋರ್ಟ್​ ಪಾಸಿಟಿವ್​ ಬಂದಿದೆ.  ಆಮೂಲಕ ಬೆಂಗಳೂರಲ್ಲಿ ಕೊರೋನಾ ಕೇಸ್​ಗಳ ಸಂಖ್ಯೆ 9,67,640ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 3,52,454 ಸಕ್ರಿಯ ಪ್ರಕರಣಗಳಿವೆ.  ಇನ್ನು ಬೆಂಗಳೂರಿನಲ್ಲಿ 24 ಗಂಟೆಗಳ ಅವಧಿಯಲ್ಲಿ 374 ಮಂದಿ ಸಾವನ್ನಪ್ಪಿದ್ದು, ಈವರೆಗೆ ನಗರದಲ್ಲಿ 8,431 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.


ಇನ್ನು ರಾಜ್ಯಾದ್ಯಂತ ಇಂದು  39,305 ಪಾಸಿಟಿವ್​ ಪ್ರಕರಣಗಳು ದಾಖಲಾಗುವ ಮೂಲಕ ಒಟ್ಟು ಕೊರೋನಾ ಕೇಸ್​ಗಳ ಸಂಖ್ಯೆ 19,73,682ಕ್ಕೆ ಏರಿಕೆಯಾಗಿದೆ. ಇನ್ನು ಸಾವಿನ ಸಂಖ್ಯೆ 596ರ ಮೂಲಕ ಒಟ್ಟು ಕೊರೋನಾ ಸೋಂಕಿತರ ಸಾವಿನ ಸಂಖ್ಯೆ 19,372ಕ್ಕೆ ಏರಿಕೆಯಾಗಿದೆ.  ಇದರ ಜೊತೆಗೆ ಇಂದು ರಾಜ್ಯಾದ್ಯಂತ 32,188 ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಸದ್ಯ ಒಟ್ಟು 5,71,006 ಸಕ್ರಿಯ ಪ್ರಕರಣಗಳಿವೆ.


ಬೆಂಗಳೂರು ನಂತರದಲ್ಲಿ ತುಮಕೂರು ಜಿಲ್ಲೆಯಿದ್ದು, ಇಂದು ಒಂದೇ ದಿನ 2,168 ಪಾಸಿಟಿವ್​ ಪ್ರಕರಣಗಳು ದಾಖಲಾಗಿವೆ.  ಹಾಸನದಲ್ಲಿ 1800, ಮೈಸೂರಲ್ಲಿ 1537, ದಕ್ಷಿಣ ಕನ್ನಡದಲ್ಲಿ 1175, ಮಂಡ್ಯದಲ್ಲಿ 1133 , ಧಾರವಾಡದಲ್ಲಿ 1006 ಪಾಸಿಟಿವ್​ ಪ್ರಕರಣಗಳು ದಾಖಲಾಗಿವೆ. ಉಳಿದ ಜಿಲ್ಲೆಗಳಲ್ಲಿ ಸಾವಿರಕ್ಕಿಂತ ಕಡಿಮೆ ಪಾಸಿಟಿವ್​ ಪ್ರಕರಣಗಳು ದಾಖಲಾಗಿವೆ.


ಇದನ್ನೂ ಓದಿ: ವಯಸ್ಕರೆಲ್ಲರು ಈ ಮಾತ್ರೆ ತೆಗೆದುಕೊಳ್ಳಿ ಎಂದ ಗೋವಾ ಸರ್ಕಾರ; ಕೊರೋನಾ ವಿರುದ್ಧ ಇದು ಪರಿಣಾಮಕಾರಿಯೇ?


ಇನ್ನು ಕೊರೋನಾ ಸಾವಿನ ಪ್ರಮಾಣದಲ್ಲಿ ಬೆಂಗಳೂರು ನಗರ ಜಿಲ್ಲೆ ನಂತರದಲ್ಲಿ ಬಳ್ಳಾರಿ ಜಿಲ್ಲೆಯಿದ್ದು, ಇಂದು ಒಂದೇ ದಿನ 26 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.  ಹಾಸನದಲ್ಲಿ 22, ತುಮಕೂರು-ಬಾಗಲಕೋಟೆಯಲ್ಲಿ ತಲಾ  15,  ಹಾವೇರಿ-ಮಂಡ್ಯದಲ್ಲಿ ತಲಾ 12,  ಶಿವಮೊಗ್ಗ-ವಿಜಯಪುರ ಜಿಲ್ಲೆಯಲ್ಲಿ ತಲಾ 11 ಮಂದಿ ಇಂದು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಸಾವಿನ ಸಂಖ್ಯೆ ಎರಡಂಕಿ ದಾಟಿಲ್ಲ ಎಂದು ಕರ್ನಾಟಕ ಆರೋಗ್ಯ ಇಲಾಖೆ ತನ್ನ ಪ್ರತಿದಿನದ ಹೆಲ್ತ್​ ಬುಲೆಟಿನ್​ನಲ್ಲಿ ಮಾಹಿತಿ ನೀಡಿದೆ.


ಇನ್ನು ರಾಜ್ಯದಲ್ಲಿ ಇಂದಿನಿಂದ ಕಟ್ಟುನಿಟ್ಟಿನ ಲಾಕ್​ಡೌನ್​ ಜಾರಿಗೆ ತರಲಾಗಿದ್ದು, ಅಂತರ್​ ಜಿಲ್ಲೆ ಸಂಚಾರಕ್ಕೆ ನಿರ್ಬಂಧವೇರಲಾಗಿದೆ. ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಹಾಲು, ತರಕಾರಿ, ದಿನಸಿ ಖರೀದಿಸಲು ಜನ ಹೊರ ಬರಲು ಅವಕಾಶ ಕಲ್ಪಿಸಲಾಗಿದೆ.

top videos
    First published: