ಕೊರೋನಾ ಎಫೆಕ್ಟ್: ಪ್ರಯಾಣಿಕರಲ್ಲಿ ನಿರುತ್ಸಾಹ; ಕಳೆಗುಂದಿದ ದೇಶಿ ವಿಮಾನಯಾನ ಸೇವೆ

ಬೆಂಗಳೂರಿನಿಂದ ಹೊರ ಹೋದ ವಿಮಾನಗಳ ಸಂಖ್ಯೆ ಹೆಚ್ಚಿದ್ದು,  ಹೊರ ರಾಜ್ಯಗಳಿಂದ ಬೆಂಗಳೂರಿಗೆ  ಬರುವ ವಿಮಾನ  ಸಂಖ್ಯೆ  ಕಡಿಮೆಯಾಗಿದೆ. ಬಹುತೇಕ ವಿಮಾನಗಳಲ್ಲಿ ಕೇವಲ 10, 15, 20 ಪ್ರಯಾಣಿಕರು ಮಾತ್ರ ಪ್ರಯಾಣಿಕರಿದ್ದಾರೆ. 

news18-kannada
Updated:May 30, 2020, 4:07 PM IST
ಕೊರೋನಾ ಎಫೆಕ್ಟ್: ಪ್ರಯಾಣಿಕರಲ್ಲಿ ನಿರುತ್ಸಾಹ; ಕಳೆಗುಂದಿದ ದೇಶಿ ವಿಮಾನಯಾನ ಸೇವೆ
ಸಾಂದರ್ಭಿಕ ಚಿತ್ರ
  • Share this:
ದೇವನಹಳ್ಳಿ(ಮೇ 30): ಕೊರೋನಾದಿಂದ ಜಾರಿಯಾದ  ಲಾಕ್ ಡೌನ್ ನಿಂದಾಗಿ  ವಿಮಾನಗಳ ಹಾರಾಟವನ್ನು  ಬಂದ್ ಮಾಡಲಾಗಿತ್ತು. ಎರಡು ತಿಂಗಳ ನಂತರ ದೇಶಿ ವಿಮಾನಯಾನ ಸೇವೆ  ಆರಂಭವಾಗಿದೆ. ಆದರೆ  ವಿಮಾನಯಾನಕ್ಕೆ ಪ್ರಯಾಣಿಕರ ಕೊರತೆ ಕಂಡು ಬಂದಿದ್ದು, ಕೊನೆ ಕ್ಷಣದಲ್ಲಿ ವಿಮಾನ ಹಾರಾಟ  ರದ್ದಾಗುತ್ತಿದೆ.

ದೇವನಹಳ್ಳಿ  ಕೆಂಪೇಗೌಡ  ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಮೇ 25 ರಿಂದ ದೇಶಿಯ ವಿಮಾನಯಾನ ಸೇವೆ ಪ್ರಾರಂಭವಾಗಿದೆ,. ವಿಮಾನಗಳ ಹಾರಾಟ  ಶುರುವಾದಾಗ ಪ್ರಯಾಣಿಕರು ತೋರಿದ ಉತ್ಸಾಹ  ದಿನೇ ದಿನೇ ಕಡಿಮೆಯಾಗುತ್ತಿದೆ. ಕೊರೋನಾ ಭಯ ಮತ್ತು ಕ್ವಾರಂಟೈನ್​ಗೆ ಒಳಗಾಗಬೇಕೆನ್ನುವ ಭಯದಿಂದ  ಪ್ರಯಾಣಿಕರು ವಿಮಾನಯಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇದರ ಜೊತೆಗೆ ಕೊರೊನಾ ವೈರಸ್ ತೀವ್ರವಾಗಿರುವ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನದಿಂದ ಬೆಂಗಳೂರಿಗೆ ಬರುವ ವಿಮಾನಗಳ ಸಂಖ್ಯೆ ಕಡಿತಗೊಳಿಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ರಾಜ್ಯ  ಸರ್ಕಾರ  ಮನವಿ ಮಾಡಿದೆ. ಇದು ಸಹ ವಿಮಾನಯಾನದ ಬಗ್ಗೆ  ಪ್ರಯಾಣಿಕರು ನಿರುತ್ಸಾಹ ತೋರಲು ಕಾರಣವಾಗಿದೆ.

ಮೇ 25ರ ಸೋಮವಾರ ಒಟ್ಟು ಬುಕ್ ಆಗಿದ್ದು 193  ವಿಮಾನಗಳು,  ಆದರೆ  ಹಾರಾಟ ಮಾಡಿದ್ದು 97 ಮಾತ್ರ, 96 ವಿಮಾನಗಳ  ಹಾರಾಟ  ರದ್ದಾಗಿದೆ. ಮೇ 26ರ ಮಂಗಳವಾರ ಬುಕ್ ಆಗಿದ್ದ ವಿಮಾನಗಳ ಸಂಖ್ಯೆ  180. ಇದರಲ್ಲಿ ಹಾರಾಟ ನಡೆಸಿದ್ದು 77 ವಿಮಾನಗಳು. ರದ್ದಾಗಿದ್ದು 103 ವಿಮಾನ. ಮೇ 27ರ ಬುಧವಾರ ಒಟ್ಟು 174  ವಿಮಾನ  ಬುಕ್ ಆಗಿದ್ದು, ಹಾರಾಟ ಮಾಡಿದ್ದು ಕೇವಲ 56. ರದ್ದಾಗಿದ್ದು 118  ವಿಮಾನ. ಮೇ 28ರ ಗುರುವಾರ ಬುಕ್ ಆಗಿದ್ದು 195, 130 ವಿಮಾನಗಳ ಹಾರಾಟ  ರದ್ದಾಗಿದ್ದಾರೆ, ಕೇವಲ 65 ವಿಮಾನಗಳ ಹಾರಾಟವಾಗಿದೆ.

ಮೋದಿ 20 ಲಕ್ಷ ಕೋಟಿ ಪ್ಯಾಕೇಜ್ ದೊಡ್ಡ ಜೋಕ್; ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರಿನಿಂದ ಹೊರ ಹೋದ ವಿಮಾನಗಳ ಸಂಖ್ಯೆ ಹೆಚ್ಚಿದ್ದು,  ಹೊರ ರಾಜ್ಯಗಳಿಂದ ಬೆಂಗಳೂರಿಗೆ  ಬರುವ ವಿಮಾನ  ಸಂಖ್ಯೆ  ಕಡಿಮೆಯಾಗಿದೆ. ಬಹುತೇಕ ವಿಮಾನಗಳಲ್ಲಿ ಕೇವಲ 10, 15, 20 ಪ್ರಯಾಣಿಕರು ಮಾತ್ರ ಪ್ರಯಾಣಿಕರಿದ್ದಾರೆ.  ರದ್ದಾದ ವಿಮಾನಗಳಲ್ಲಿ ಶೇಕಡಾ  80% ಟಿಕೆಟ್ ಕ್ಯಾನ್ಸಲ್ ಮಾಡಿಕೊಳ್ಳುತ್ತಿದ್ದಾರೆ  ಪ್ರಯಾಣಿಕರು. ರಾಜ್ಯದಲ್ಲಿ ಕಟ್ಟುನಿಟ್ಟಿನ  ನಿಯಮ ಜಾರಿಯಲ್ಲಿರುವುದರಿಂದ ಬೆಂಗಳೂರಿಗೆ ಬರಲು ಪ್ರಯಾಣಿಕರು ಒಲವು ತೋರುತ್ತಿಲ್ಲ.

ರೆಡ್ ಝೋನ್ ರಾಜ್ಯ ಗಳಿಂದ ಬರುವ ಪ್ರಯಾಣಿಕರಿಗೆ  7 ದಿನಗಳ  ಕಡ್ಡಾಯ ಕ್ವಾರಂಟೈನ್,   ಗ್ರೀನ್ ಝೋನ್ ರಾಜ್ಯಗಳ ಪ್ರಯಾಣಿಕರಿಗೆ 7 ದಿನ ಕಡ್ಡಾಯ ಹೋಂ ಕ್ವಾರೆಂಟೈನ್​ಗೆ ಒಳಪಡಿಸಲಾಗುತ್ತಿದೆ.  ಸ್ವಾಬ್ ಟೆಸ್ಟ್, ಥರ್ಮಲ್ ಸ್ಕ್ರೀನಿಂಗ್, ಎಲ್ಲಾ ಪ್ರಯಾಣಿಕರಿಗೆ ಕ್ವಾರಂಟೈನ್​ ಸೀಲ್  ಹಾಕಲಾಗುತ್ತಿದ್ದು ಗ್ರೀನ್ ಝೋನ್ 'ಜಿ' ಮತ್ತು ರೆಡ್ ಝೋನ್ 'ಆರ್' ಸೀಲ್ ಹಾಕಲಾಗುತ್ತಿದೆ. ಇದೆಲ್ಲದರ ನಿಯಮಗಳು ಪ್ರಯಾಣಿಕರ ನಿರುತ್ಸಾಹಕ್ಕೆ ಕಾರಣವಾಗಿ ಬುಕ್ ಆಗಿದ್ದ ಟಿಕೆಟ್  ಕ್ಯಾನ್ಸಲ್  ಮಾಡಿಕೊಳ್ಳುತ್ತಿದ್ದಾರೆ.
First published: May 30, 2020, 4:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading