ಖಜಾನೆ ಭರ್ತಿ ಮಾಡಲು ಮದ್ಯದಂಗಡಿಯೇ ಬೇಕಾ? ತಮಿಳುನಾಡು ಸರ್ಕಾರ ವಿರುದ್ಧ ರಜಿನೀಕಾಂತ್ ಗುಡುಗು

ರಾಜ್ಯಾದ್ಯಂತ ಆನ್​ಲೈನ್​ನಲ್ಲಿ ಮದ್ಯ ಮಾರಾಟ ಮತ್ತು ಸರಬರಾಜು ಸಾಧ್ಯವಿಲ್ಲ. ಮದ್ಯದಂಗಡಿಯಲ್ಲಿ ಮಾರಾಟಕ್ಕೆ ಅವಕಾಶ ಕೊಡಿ ಎಂಬುದು ತಮಿಳುನಾಡು ಸರ್ಕಾರದ ವಾದ.

ರಜಿನಿಕಾಂತ್

ರಜಿನಿಕಾಂತ್

 • Share this:
  ಚೆನ್ನೈ(ಮೇ 10): ತಮಿಳುನಾಡಿನಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಪ್ರಯತ್ನಿಸುತ್ತಿರುವ ತಮಿಳುನಾಡು ಸರ್ಕಾರದ ವಿರುದ್ಧ ಸೂಪರ್ ಸ್ಟಾರ್ ರಜಿನಿಕಾಂತ್ ಹರಿಹಾಯ್ದಿದ್ದಾರೆ. ಮದ್ಯದಂಗಡಿ ತೆರೆದರೆ ಪರಿಣಾಮ ನೆಟ್ಟಗಿರುವುದಿಲ್ಲ. ಎಐಎಡಿಎಂಕೆ ಪಕ್ಷ ಮುಂದೆ ಅಧಿಕಾರಕ್ಕೆ ಬರುವ ಕನಸನ್ನು ಮರೆತುಬಿಡಬೇಕಾಗುತ್ತದೆ ಎಂದು ರಜಿನೀಕಾಂತ್ ಎಚ್ಚರಿಕೆ ನೀಡಿದ್ದಾರೆ.

  ಈ ಸಂದರ್ಭದಲ್ಲಿ ಸರ್ಕಾರ TASMAC ಶಾಪ್​ಗಳನ್ನ ಮತ್ತೆ ತೆರೆದರೆ ಅಧಿಕಾರಕ್ಕೆ ಮರಳುವ ಕನಸು ಕೈಬಿಡಬೇಕಾಗುತ್ತದೆ. ಸರ್ಕಾರಕ್ಕೆ ಖಜಾನೆ ತುಂಬಿಸಲು ಮದ್ಯದಂಗಡಿಯೇ ಬೇಕಾ? ವರಮಾನಕ್ಕಾಗಿ ಬೇರೆ ಉತ್ತಮ ಮಾರ್ಗ ಹುಡುಕಿರಿ ಎಂದು ಸೂಪರ್ ಸ್ಟಾರ್ ತಾಕೀತು ಮಾಡಿದ್ದಾರೆ.

  ತಮಿಳುನಾಡಿನಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಅಲ್ಲಿನ ಸರ್ಕಾರ ತುದಿಗಾಲಲ್ಲಿದೆ. ಆದರೆ, ಕೊರೋನಾ ವೈರಸ್ ಸೋಂಕು ಹರಡುವಿಕೆಯ ಅಪಾಯವಿರುವುದರಿಂದ ಮತ್ತು ಮದ್ಯದಂಗಡಿಗಳಲ್ಲಿ ಸರಿಯಾದ ಕೋವಿಡ್ ನಿಯಮಾವಳಿಗಳು ಪಾಲನೆಯಾಗುತ್ತಿಲ್ಲದ ಹಿನ್ನೆಲೆಯಲ್ಲಿ ಮದ್ಯದಂಗಡಿ ಮುಚ್ಚಲು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ. ಈಗ ಸರ್ಕಾರವು ಹೈಕೋರ್ಟ್ ತೀರ್ಪಿಗೆ ತಡೆ ಕೋರಿ ನಿನ್ನೆಯಷ್ಟೇ ಸುಪ್ರೀಂಕೋರ್ಟ್​ನ ಮೆಟ್ಟಿಲೇರಿದೆ. ಲಿಕ್ಕರ್ ಶಾಪ್​ಗಳನ್ನ ಮುಚ್ಚಿರುವುದರಿಂದ ಸರ್ಕಾರದ ಆದಾಯಕ್ಕೆ ಸಂಪೂರ್ಣ ಖೋತಾ ಬಿದ್ದಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರಕ್ಕೆ ಹಣದ ಅಗತ್ಯ ಇದೆ. ಹೀಗಾಗಿ, ಮದ್ಯದಂಗಡಿ ತೆರೆಯಲು ಅವಕಾಶ ಮಾಡಿಕೊಡಿ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ತಮಿಳುನಾಡು ಸರ್ಕಾರ ಮನವಿ ಮಾಡಿದೆ.

  ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಹಣ್ಣಿನ ಟ್ರಕ್ ಪಲ್ಟಿ; 5 ಜನ ವಲಸೆ ಕಾರ್ಮಿಕರ ಸಾವು, 15 ಜನರ ಸ್ಥಿತಿ ಗಂಭೀರ!  ಮೂರನೇ ಹಂತದ ಲಾಕ್ ಡೌನ್​ನಲ್ಲಿ ಹಲವು ಸಡಿಲಿಕೆಗಳನ್ನ ನೀಡಲಾಗಿದೆ. ಅದರಂತೆ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಆದರೆ, ವೈನ್ ಶಾಪ್​ಗಳಲ್ಲಿ ಜನರು ಯಾವುದೇ ಎಚ್ಚರಿಕೆ ಇಲ್ಲದೇ ಸಾಮಾಜಿಕ ಅಂತರ ಇಲ್ಲದೆ ಮುಗಿಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ವೈನ್ ಶಾಪ್​ಗಳನ್ನು ಮುಚ್ಚಬೇಕೆಂದು ಆದೇಶಿಸಿತು. ಆದರೆ, ಆನ್​ಲೈನ್​ನಲ್ಲಿ ಬುಕ್ ಮಾಡಿದವರ ಮನೆಬಾಗಿಲಿಗೆ ಮದ್ಯ ತಲುಪಿಸುವುದಕ್ಕೆ ಮಾತ್ರ ಉಚ್ಚ ನ್ಯಾಯಾಲಯ ಅನುಮತಿಸಿದೆ.

  ಆದರೆ, ರಾಜ್ಯಾದ್ಯಂತ ಆನ್​ಲೈನ್​ನಲ್ಲಿ ಮದ್ಯ ಮಾರಾಟ ಮತ್ತು ಸರಬರಾಜು ಸಾಧ್ಯವಿಲ್ಲ. ಮದ್ಯದಂಗಡಿಯಲ್ಲಿ ಮಾರಾಟಕ್ಕೆ ಅವಕಾಶ ಕೊಡಿ ಎಂಬುದು ತಮಿಳುನಾಡು ಸರ್ಕಾರದ ವಾದ.

  First published: