Covid-19: ಪೋಷಕರೇ ಗಮನಿಸಿ, ಸೋಂಕಿತ ಮಕ್ಕಳಲ್ಲಿ ಕೋವಿಡ್ ಎರಡು ತಿಂಗಳ ಕಾಲ ಇರಬಹುದಂತೆ

ಕಳೆದ ಗುರುವಾರದಂದು ಲಾನ್ಸೆಟ್ ಚೈಲ್ಡ್ ಆಂಡ್ ಅಡೋಲ್ಸೆಂಟ್ ಹೆಲ್ತ್ ಜರ್ನಲ್ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, SARS-CoV-2 ವೈರಾಣುವಿನಿಂದ ಸೋಂಕಿತರಾದ ಮಕ್ಕಳಲ್ಲಿ ಕೋವಿಡ್ ಲಕ್ಷಣಗಳು ಏನಿಲ್ಲವೆಂದರೂ ಕನಿಷ್ಠ ಎರಡು ತಿಂಗಳುಗಳ ಕಾಲವಾದರೂ ಇರುವುದಾಗಿ ತಿಳಿದು ಬಂದಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕಳೆದ ಗುರುವಾರದಂದು ಲಾನ್ಸೆಟ್ ಚೈಲ್ಡ್ ಆಂಡ್ ಅಡೋಲ್ಸೆಂಟ್ ಹೆಲ್ತ್ ಜರ್ನಲ್ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, SARS-CoV-2 ವೈರಾಣುವಿನಿಂದ ಸೋಂಕಿತರಾದ ಮಕ್ಕಳಲ್ಲಿ (Children) ಕೋವಿಡ್ ಲಕ್ಷಣಗಳು ಏನಿಲ್ಲವೆಂದರೂ ಕನಿಷ್ಠ ಎರಡು ತಿಂಗಳುಗಳ ಕಾಲವಾದರೂ ಇರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ನಡೆಸಲಾಗಿರುವ ದೊಡ್ಡ ಸಂಶೋಧನಾ ಅಧ್ಯಯನದಲ್ಲಿ (Research Study) ಡೆನ್ಮಾರ್ಕ್ ದೇಶದಲ್ಲಿರುವ 0-14 ಪ್ರಾಯದವರೆಗಿನ ಮಕ್ಕಳ ಸ್ಯಾಂಪ್ಲಿಂಗ್ ಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಪಡೆದುಕೊಂಡು ಅದನ್ನು ನಿಯಂತ್ರಿತ ಗುಂಪಿನಲ್ಲಿರುವ ಕೋವಿಡ್ (Covid) ಇತಿಹಾಸವಿರದ ಆದರೆ ಕೋವಿಡ್ ಧನಾತ್ಮಕವಾಗಿರುವ ಪ್ರಕರಣಗಳೊಂದಿಗೆ ಮ್ಯಾಚ್ ಮಾಡಿ ಹಲವು ಅಂಶಗಳನ್ನು ದಾಖಲಿಸಲಾಗಿದೆ.

"ನಮ್ಮ ಅಧ್ಯಯನದ ಒಟ್ಟಾರೆ ಗುರಿಯು ಮಕ್ಕಳು ಮತ್ತು ಶಿಶುಗಳಲ್ಲಿ ಅವರ ಜೀವನದ ಗುಣಮಟ್ಟ ಮತ್ತು ಶಾಲೆ ಅಥವಾ ಡೇ ಕೇರ್‌ ಗಳ ಅನುಪಸ್ಥಿತಿಯಲ್ಲಿ, ಅವರಲ್ಲಿ ದೀರ್ಘಕಾಲದ ರೋಗಲಕ್ಷಣಗಳ ಹರಡುವಿಕೆಯ ಅಥವಾ ಉಪಸ್ಥಿತಿಯ ಬಗ್ಗೆ ತಿಳಿಯುವುದಾಗಿತ್ತು" ಎಂದು ಡೆನ್ಮಾರ್ಕ್‌ನ ಕೋಪನ್‌ಹೇಗನ್ ಯೂನಿವರ್ಸಿಟಿ ಆಸ್ಪತ್ರೆಯ ಪ್ರೊಫೆಸರ್ ಸೆಲಿನಾ ಕಿಕೆನ್‌ಬೋರ್ಗ್ ಬರ್ಗ್ ಅಧ್ಯಯನದ ಕುರಿತಂತೆ ಹೇಳಿದ್ದಾರೆ.

"ಈ ಹಿಂದೆ ಕೋವಿಡ್ -19 ಆಗಿರುವ ಇತಿಹಾಸವಿರುವ ಮಕ್ಕಳು ಕೋವಿಡ್-19 ಇತಿಹಾಸ ಹೊಂದಿರದ ಮಕ್ಕಳಿಗಿಂತ ದೀರ್ಘಕಾಲೀನ ರೋಗಲಕ್ಷಣಗಳನ್ನು ಅನುಭವಿಸುವ ಸಾಧ್ಯತೆ ಹೆಚ್ಚಾಗಿದೆ ಎಂದು ನಮ್ಮ ಫಲಿತಾಂಶಗಳು ಬಹಿರಂಗಪಡಿಸುತ್ತವೆ, ಈ ಸಾಂಕ್ರಾಮಿಕವು ಎಲ್ಲಾ ಯುವಜನರ ಜೀವನದ ಪ್ರತಿಯೊಂದು ಘಟ್ಟಗಳ ಮೇಲೆ ಪ್ರಭಾವ ಬೀರಿದೆ" ಎಂದು ಬರ್ಗ್ ಹೇಳಿದ್ದಾರೆ.

ಎಲ್ಲಾ ಮಕ್ಕಳ ಮೇಲೆ ಸಾಂಕ್ರಾಮಿಕ ರೋಗದ ದೀರ್ಘಕಾಲೀನ ಪರಿಣಾಮಗಳ ಕುರಿತು ಹೆಚ್ಚಿನ ಸಂಶೋಧನೆ ನಡೆದರೆ ಮುಂದೆ ಅದು ಪ್ರಮುಖವಾಗಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಯುವಜನರಲ್ಲಿ ದೀರ್ಘವಾದ ಕೋವಿಡ್ ನ ಕುರಿತಾದ ಹೆಚ್ಚಿನ ಅಧ್ಯಯನಗಳು ಹದಿಹರೆಯದವರ ಮೇಲೆ ಕೇಂದ್ರೀಕರಿಸಿವೆ. ಶಿಶುಗಳು ಮತ್ತು ಸಣ್ಣ ಹುಡುಗರನ್ನು ಕುರಿತು ಮಾಡಲಾದಾಧ್ಯಯನಗಳು ಬಲು ವಿರಳವಾಗಿವೆ.

ಪ್ರಸ್ತುತ ನಡೆಸಲಾಗಿರುವ ಅಧ್ಯಯನದಲ್ಲಿ, ಜನವರಿ 2020 ಮತ್ತು ಜುಲೈ 2021 ರ ನಡುವೆ ಕೋವಿಡ್-19 ಧನಾತ್ಮಕ ಫಲಿತಾಂಶ ಹೊಂದಿದ್ದ 0-14 ವರ್ಷಗಳ ನಡುವಿನ ಮಕ್ಕಳ ತಾಯಿ ಅಥವಾ ಪೋಷಕರಿಗೆ ಸಮೀಕ್ಷೆಗಳನ್ನು ಕಳುಹಿಸಲಾಗಿದೆ.

ಒಟ್ಟಾರೆಯಾಗಿ, ಕೋವಿಡ್-19 ಇತಿಹಾಸ ಹೊಂದಿರುವ ಸುಮಾರು 11,000 ಮಕ್ಕಳ ಸ್ಯಾಂಪ್ಲಿಂಗ್ ಗಳನ್ನು ಸ್ವೀಕರಿಸಲಾಗಿದ್ದು ಅದನ್ನು ವಯಸ್ಸು, ಲಿಂಗಗಳ ಆಧಾರದ ಮೇಲೆ ಕೋವಿಡ್ -19 ಇತಿಹಾಸ ಹೊಂದಿರದ 33,000 ಕ್ಕೂ ಹೆಚ್ಚು ಮಕ್ಕಳೊಂದಿಗೆ ಹೋಲಿಸಿ ನೋಡಲಾಗಿದೆ.

ಈ ಸಂಶೋಧನೆಗೆ ಸಂಬಂಧಿಸಿದಂತೆ ನಡೆಸಲಾಗಿದ್ದ ಸಮೀಕ್ಷೆಯಲ್ಲಿ ಭಾಗವಹಿಸಿದ್ದವರಿಗೆ ವಿಶ್ವ ಆರೋಗ್ಯ ಸಂಸ್ಥೆಯು ತಿಳಿಸಿರುವ ದೀರ್ಘಾವಧಿಯ ಕೋವಿಡ್ ಲಕ್ಷಣಗಳನ್ನು ಪಟ್ಟಿ ಮಾಡಿ ಅದರಂತೆ 23 ಸಾಮಾನ್ಯ ಗುಣಲಕ್ಷಣಗಳ ಬಗ್ಗೆ ಕೇಳಲಾಗಿತ್ತು. ಈ ಬಗ್ಗೆ ಸ್ವೀಕರಿಸಲಾದ ಪ್ರತಿಕ್ರಿಯೆಯಯಲ್ಲಿ ಗಮನಾರ್ಹವಾಗಿ ಕಂಡುಬಂದ ಅಂಶವೆಂದರೆ

0-3 ವರ್ಷ ವಯಸ್ಸಿನ ಮಕ್ಕಳಲ್ಲಿ ಸಾಮಾನ್ಯವಾಗಿ ವರದಿ ಮಾಡಲಾದ ರೋಗಲಕ್ಷಣಗಳು. ಆ ಲಕ್ಷಣಗಳೆಂದರೆ ಮೂಡ್ ಬದಲಾವಣೆಗಳು, ದದ್ದುಗಳು ಮತ್ತು ಹೊಟ್ಟೆ ನೋವು.

ಇನ್ನು, 4-11 ವರ್ಷ ವಯಸ್ಸಿನವರಲ್ಲಿ ಸಾಮಾನ್ಯವಾಗಿ ವರದಿಯಾದ ರೋಗಲಕ್ಷಣಗಳೆಂದರೆ ಮೂಡ್ ಸ್ವಿಂಗ್, ನೆನಪಿಡುವ ಅಥವಾ ಕೇಂದ್ರೀಕರಿಸುವಲ್ಲಿ ತೊಂದರೆ, ಮತ್ತು ದದ್ದುಗಳು, ಹಾಗೂ 12-14 ವರ್ಷ ವಯಸ್ಸಿನವರಲ್ಲಿ ಕಂಡುಬಂದ ಸಾಮಾನ್ಯ ಗುಣ ಲಕ್ಷಣಗಳೆಂದರೆ ಆಯಾಸ, ಮನಸ್ಥಿತಿ ಬದಲಾವಣೆಗಳು ಮತ್ತು ನೆನಪಿಟ್ಟುಕೊಳ್ಳಲು ಅಥವಾ ಕೇಂದ್ರೀಕರಿಸುವಲ್ಲಿ ತೊಂದರೆ.

ಎಲ್ಲಾ ವಯಸ್ಸಿನ ಗುಂಪುಗಳಲ್ಲಿ ಕೋವಿಡ್ -19 ಇತಿಹಾಸ ಹೊಂದಿದ ಮಕ್ಕಳು ಇತಿಹಾಸ ಹೊಂದಿರದ ಮಕ್ಕಳಿಗಿಂತ ಎರಡು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಕನಿಷ್ಠ ಒಂದು ರೋಗಲಕ್ಷಣವನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಅಧ್ಯಯನದ ಫಲಿತಾಂಶಗಳು ಕಂಡುಕೊಂಡಿವೆ.

0-3 ವರ್ಷ ವಯಸ್ಸಿನ ಗುಂಪಿನಲ್ಲಿ ಶೇ. 27ರಷ್ಟು ಕೋವಿಡ್ ಇತಿಹಾಸ ಹೊಂದಿರದ ಮಕ್ಕಳ ಎದುರು ಕೋವಿಡ್ -19 ಇತಿಹಾಸವಿರುವ ಶೇಕಡಾ 40 ರಷ್ಟು ಮಕ್ಕಳು (1,194 ಮಕ್ಕಳಲ್ಲಿ 478) ಎರಡು ತಿಂಗಳಿಗಿಂತ ಹೆಚ್ಚು ಕಾಲ ರೋಗಲಕ್ಷಣಗಳನ್ನು ಅನುಭವಿಸಿದ್ದಾರೆ.

4-11 ವರ್ಷ ವಯಸ್ಸಿನವರಿಗೆ ಅನುಪಾತವು ಶೇ. 38 ರಷ್ಟು ಕೋವಿಡ್ ಇತಿಹಾಸವುಳ್ಳವರದ್ದಾಗಿದ್ದರೆ ಶೇ. 34 ರಷ್ಟು ಕೋವಿಡ್ ಇತಿಹಾಸ ಹೊಂದಿಲದವರಾಗಿದ್ದರು ಹಾಗೂ ಕೊನೆಯದಾಗಿ 12-14 ವರ್ಷ ವಯಸ್ಸಿನವರಲ್ಲಿ, ಶೇ. 41ರಷ್ಟು ಕೋವಿಡ್ ಇತಿಹಾಸ ಹೊಂದಿರದ ಮಕ್ಕಳ ಎದುರು 46 ಪ್ರತಿಶತ ಪ್ರಕರಣಗಳು (2,857 ಮಕ್ಕಳಲ್ಲಿ 1,313) ಕೋವಿಡ್ ಇತಿಹಾಸ ಹೊಂದಿದವರಾಗಿದ್ದು ಹೆಚ್ಚು ಕಾಲ ಕೋವಿಡ್ ಲಕ್ಷಣಗಳನ್ನು ಅನುಭವಿಸಿದ್ದರು ಎಂದು ಅಧ್ಯಯನದಿಂದ ತಿಳಿದುಬಂದಿದೆ.

ದೀರ್ಘವಾದ ಕೋವಿಡ್ ನೊಂದಿಗೆ ಸಂಬಂಧಿಸಿರುವ ನಿರ್ದಿಷ್ಟವಲ್ಲದ ರೋಗಲಕ್ಷಣಗಳ ಪ್ರಕಾರಗಳನ್ನು ಸಾಮಾನ್ಯವಾಗಿ ಆರೋಗ್ಯವಂತ ಮಕ್ಕಳು ಅನುಭವಿಸುತ್ತಾರೆ ಎಂದು ಸಹ ಇದರಲ್ಲಿ ಕಂಡುಕೊಳ್ಳಲಾಗಿದೆ. ಉದಾಹರಣೆಗೆ ತಲೆನೋವು, ಮೂಡ್ ಸ್ವಿಂಗ್‌ಗಳು, ಹೊಟ್ಟೆ ನೋವು ಮತ್ತು ಆಯಾಸ ಇವೆಲ್ಲವೂ ಮಕ್ಕಳು ಅನುಭವಿಸುವ ಸಾಮಾನ್ಯ ಕಾಯಿಲೆಗಳ ಲಕ್ಷಣಗಳಾಗಿವೆ. ಇವು ಕೋವಿಡ್ -19 ಕ್ಕೆ ಸಂಬಂಧಿಸಿಲ್ಲ.

ಆದಾಗ್ಯೂ, ಕೋವಿಡ್ -19 ಧನಾತ್ಮಕತೆಯ ಇತಿಹಾಸ ಹೊಂದಿರುವ ಮಕ್ಕಳು ಎಂದಿಗೂ ಕೋವಿಡ್ ಇತಿಹಾಸ ಹೊಂದಿರದ ಮಕ್ಕಳಿಗಿಂತ ದೀರ್ಘಕಾಲೀನ ರೋಗಲಕ್ಷಣಗಳನ್ನು ಅನುಭವಿಸುವ ಸಾಧ್ಯತೆಯಿದೆ ಎಂದು ಅಧ್ಯಯನವು ಬಹಿರಂಗಪಡಿಸಿದೆ.

Story Link: https://www.ndtv.com/world-news/long-covid-in-infected-kids-can-last-at-least-2-months-lancet-report-3092263#pfrom=home-coronavirus_coronavirus-lateststories_live

Vijaykumar M
Published by:Ashwini Prabhu
First published: