• Home
 • »
 • News
 • »
 • coronavirus-latest-news
 • »
 • ರಾಮನಗರದಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ, 88 ವಾಹನಗಳು ಸೀಜ್, ಎಸ್ಪಿ ಕಾರ್ಯವೈಖರಿಗೆ ಪ್ರಶಂಸೆ

ರಾಮನಗರದಲ್ಲಿ ಲಾಕ್ ಡೌನ್ ನಿಯಮ ಉಲ್ಲಂಘನೆ, 88 ವಾಹನಗಳು ಸೀಜ್, ಎಸ್ಪಿ ಕಾರ್ಯವೈಖರಿಗೆ ಪ್ರಶಂಸೆ

ರಾಯಚೂರು ಗಡಿ ಭಾಗದಲ್ಲಿ ವಾಹನಗಳ ತಪಾಸಣೆ ಮಾಡುತ್ತಿರುವ ಪೊಲೀಸರು.

ರಾಯಚೂರು ಗಡಿ ಭಾಗದಲ್ಲಿ ವಾಹನಗಳ ತಪಾಸಣೆ ಮಾಡುತ್ತಿರುವ ಪೊಲೀಸರು.

ರಸ್ತೆಗೆ ಬಂದ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿ ಜಿಲ್ಲೆಯಾದ್ಯಂತ ಒಟ್ಟು 83 ಬೈಕ್, 4 ಆಟೋ, 1 ಕಾರ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

 • Share this:

  ರಾಮನಗರ(ಏ.03) : ಕೊರೋನಾ ಭೀತಿಯಿಂದಾಗಿ ಲಾಕ್​ ಡೌನ್​ ಆದ ದಿನದಿಂದ   ಜಿಲ್ಲಾ ಪೊಲೀಸರು ಹೊರ ಊರುಗಳಿಂದ ಬರುವ ವಾಹನಗಳನ್ನ ವಾಪಸ್ ಕಳುಹಿಸುತ್ತಿದ್ದಾರೆ. ಇಷ್ಟೆಲ್ಲಾ ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ರಸ್ತೆಯಲ್ಲಿ ಓಡಾಡುವ ಜನರ  ವಾಹನಗಳನ್ನ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ರಾಮನಗರ ಜಿಲ್ಲೆಯ ಎಸ್ಪಿ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತವಾಗಿದೆ. 


  ಕೊರೋನಾ ತಡೆಗಟ್ಟಿ ದೇಶದ ಜನರ ಪ್ರಾಣ ರಕ್ಷಣೆ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಭಾರತ ಲಾಕ್​ ಡೌನ್ ಆದೇಶ ಮಾಡಿದ್ದರು. ಈ  ಸಂಬಂಧ ಜನರು ಮನೆಯಿಂದ ಯಾರು ಹೊರಬರಬಾರದೆಂದು ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೂ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕೆಲವು ಸೂಚನೆಗಳನ್ನ ಕೊಟ್ಟಿತ್ತು.


  ಈ ಬೆನ್ನಲ್ಲೆ ರಾಮನಗರ ಜಿಲ್ಲೆಯ ಪೊಲೀಸರು ಸಹ ಫುಲ್ ಅಲರ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ರಾಮನಗರ ಎಸ್ಪಿ ಡಾ.ಅನೂಪ್ ಎ ಶೆಟ್ಟಿ ಅವರು ಕೆಳ ಹಂತದ ಅಧಿಕಾರಿಗಳಿಗೆ ಅನಾವಶ್ಯಕವಾಗಿ ಓಡಾಡುವ  ವಾಹನಗಳನ್ನ ಜಪ್ತಿ ಮಾಡಬೇಕು ಎಂದು ಆದೇಶ ಮಾಡಿದ್ದರು. ಪೊಲೀಸರು ಏನ್ ಮಾಡುತ್ತಾರೆ ಎಂದು ಧೈರ್ಯ ಮಾಡಿ ರಸ್ತೆಗೆ ಬಂದ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿ ಜಿಲ್ಲೆಯಾದ್ಯಂತ ಒಟ್ಟು 83 ಬೈಕ್, 4 ಆಟೋ, 1 ಕಾರ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


  ಕೊರೋನಾ ತಡೆಗಟ್ಟಲು ಸಾಮಾಜಿಕ ಅಂತರ ಹಾಗೂ ಮನೆಯಲ್ಲಿ ಇರುವುದು ಅತ್ಯಅವಶ್ಯಕ. ಆದರೇ ಜನರು ಅದ್ಯಾವುದನ್ನು ಪಾಲನೆ ಮಾಡುತ್ತಿಲ್ಲ. ಇನ್ನು ಲಾಕ್ ​ಡೌನ್ ಹಿನ್ನೆಲೆಯಲ್ಲಿ ತುರ್ತಾಗಿ ಬೇಕಾಗಿರುವ ಸೇವೆಗಳನ್ನ ಹೊರೆತು ಪಡಿಸಿ ಯಾವುದೇ ಅಂಗಡಿ ಮುಂಗಟ್ಟುಗಳನ್ನ ತೆಗೆಯಬಾರದು ಎಂದು ಸರ್ಕಾರ ಆದೇಶ ಮಾಡಿದೆ. ಆದರೂ, ಕೆಲವು ಅಂಗಡಿ ಮಾಲೀಕರು ಅಂಗಡಿಗಳನ್ನ ಓಪನ್ ಮಾಡಿಕೊಂಡು ವ್ಯಾಪಾರ ವಹಿವಾಟುಗಳನ್ನ ನಡೆಸಿದ್ದಾರೆ.


  ಸರ್ಕಾರಿ ಆದೇಶ ಉಲ್ಲಂಘನೆ ಸಂಬಂಧ ಟೀ ಅಂಗಡಿ ಹಾಗೂ ಬಿಡದಿಯ ಸಲೂನ್​ ಶಾಪ್ ಹಾಗೂ ಸೈಬರ್ ಸೆಂಟರ್ ಮಾಲೀಕರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. ಇನ್ನು ಹೋಮ್ ಕ್ವಾರೆಂಟೈನ್​ನಲ್ಲಿ ಇದ್ದ ಮುಸ್ಲಿಂ ವ್ಯಕ್ತಿ ಚನ್ನಪಟ್ಟಣದ ಎಂ.ಜಿ ರಸ್ತೆಯಲ್ಲಿ ಓಡಾಡುತ್ತಿದ್ದ ಸಂಬಂಧ ಆತನ ವಿರುದ್ಧವೂ ಪ್ರಕರಣ​ ದಾಖಲಿಸಿದ್ದಾರೆ. ಲಾಕ್ ಡೌನ್ ನಡುವೆ ಗ್ರಾಮೀಣ ಭಾಗದಲ್ಲಿ ಜೂಜಾಟ ಜಾಸ್ತಿಯಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ.


  ಇದನ್ನೂ ಓದಿ : ಕೊರೋನಾ ಸಂದಿಗ್ಧ ಪರಿಸ್ಥಿತಿ; ಸ್ಟೇಥಸ್ಕೋಪ್​​ ಹಿಡಿಯಲು ಸಿದ್ದರಾದ ರಾಜ್ಯದ ಇಬ್ಬರು ಶಾಸಕರು.!


  ಒಟ್ಟಾರೆಯಾಗಿ, ಎಸ್ಪಿ ಅನೂಪ್​ ಶೆಟ್ಟಿ ತುರ್ತಾಗಿ ಓಡಾಡುವ ಜನರಿಗೆ ಯಾವುದೇ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಲಾಟಿ ಮುಟ್ಟಬಾರದು ಎಂದು ಪೊಲೀಸ್ ಸಿಬ್ಬಂದಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಆದರೆ, ಜಿಲ್ಲೆಯ ಪೊಲೀಸರು ಸೈಲೆಂಟಾಗಿ ಕೆಲಸ ಮಾಡುತ್ತಿದ್ದಾರೆಂದು ಬಾಲಬಿಚ್ಚುವ ಕೆಲವರ ಮೇಲೆ ಖಡಕ್​ ಆಗಿಯೇ ಪ್ರಕರಣ ದಾಖಲು ಮಾಡುತ್ತಿದ್ದಾರೆ. ಲಾಕ್​ ಡೌನ್​ ಮುಗಿಯುವವರೆಗೂ ಸುಖ ಸುಮ್ಮನೆ ರಸ್ತೆಗಿಳಿದು
  ಓಡಾಡಬೇಡಿ ಎಂಬುದು ನಮ್ಮ ಕಾಳಜಿ. ಜಿಲ್ಲೆಯಾದ್ಯಂತ ಒಟ್ಟು 8 ಪ್ರಮುಖ ಚೆಕ್ ಪೋಸ್ಟ್ ಇರುವುದಾಗಿ ಮಾಹಿತಿ ಸಿಕ್ಕಿದೆ. ಎಸ್ಪಿ ಕಾರ್ಯವೈಖರಿಗೆ ಸಾರ್ವಜನಿಕವಾಗಿ ಪ್ರಶಂಸೆ ವ್ಯಕ್ತವಾಗಿದೆ.


  (ವರದಿ : ಎ.ಟಿ.ವೆಂಕಟೇಶ್ )

  Published by:G Hareeshkumar
  First published: