• Home
  • »
  • News
  • »
  • coronavirus-latest-news
  • »
  • ರಾಯಚೂರಿನಲ್ಲಿ ಲಾಕ್​​ಡೌನ್​​​ ನಿಯಮ ಉಲ್ಲಂಘಿಸಿದ 745 ವಾಹನಗಳ ಜಪ್ತಿ

ರಾಯಚೂರಿನಲ್ಲಿ ಲಾಕ್​​ಡೌನ್​​​ ನಿಯಮ ಉಲ್ಲಂಘಿಸಿದ 745 ವಾಹನಗಳ ಜಪ್ತಿ

ರಾಯಚೂರು ಗಡಿ ಭಾಗದಲ್ಲಿ ವಾಹನಗಳ ತಪಾಸಣೆ ಮಾಡುತ್ತಿರುವ ಪೊಲೀಸರು.

ರಾಯಚೂರು ಗಡಿ ಭಾಗದಲ್ಲಿ ವಾಹನಗಳ ತಪಾಸಣೆ ಮಾಡುತ್ತಿರುವ ಪೊಲೀಸರು.

ಬೈಕ್ ಗಳ ವಶಕ್ಕೆ ತೆಗೆದುಕೊಳ್ಳುವ ಕಾರ್ಯ ಈಗ ನಿರಂತರವಾಗಿ ನಡೆಯುತ್ತಿದೆ, ನಾಕಾಬಂದಿಯಲ್ಲಿರುವ ಪೊಲೀಸರು ವ್ಯಕ್ತಿ ಅನಾವಶ್ಯಕವಾಗಿ ಹೊರಗಡೆ ಬಂದಿದ್ದಾರೆ ಎಂದು ಗೊತ್ತಾರೆ ಸಾಕು ಅವರ ಬೈಕ್ ಸೀಜ್ ಮಾಡಲಾಗುತ್ತಿದೆ.

  • Share this:

ರಾಯಚೂರು(ಏ.04): ಮಹಾಮಾರಿ ಕೊರೋನಾ ಇಡಿ ಜಗತ್ತನ್ನೆ ನಡುಗಿಸಿದೆ. ರಾಜ್ಯದಲ್ಲಿ ಕೊರೋನಾ 3ನೆಯ ಹಂತಕ್ಕೆ ಹೋಗದಂತೆ ಅನೇಕ ಕಟ್ಟು ನಿಟ್ಟಿನಲ್ಲಿ ಲಾಕ್ ಡೌನ್ ಮಾಡಲಾಗುತ್ತಿದೆ. ಆದರೂ ಜನ ಬೈಕ್ ಏರಿಕೊಂಡು ಸಿಟಿ ರೌಂಡ್​ ಹೊಡೆಯುತ್ತಿದ್ದಾರೆ. ಅನಾವಶ್ಯಕವಾಗಿ ತಿರುಗಾಡುವವರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಮಹಾಮಾರಿ ಕೊರೋನಾದಿಂದ ಭಾರತವು ಈಗ ತತ್ತರಿಸಿದೆ, ಈ ಹಿನ್ನೆಲೆ ಇಡೀ ದೇಶವನ್ನು ಲಾಕ್ ಡೌನ್ ಮಾಡಿ ಹತ್ತು ದಿನ ಕಳೆದಿದೆ, ಈಗ ಎಲ್ಲಿ ನೋಡಿದರೂ ಕೊರೊನಾ ಹರಡುವ ಬಗ್ಗೆ ಚರ್ಚೆ ಹಾಗು ಭಯ ಆವರಿಸಿದೆ. ಆದರೂ ಕೆಲವರು ಸುಮ್ಮನೆ ಒಂದು ಸುತ್ತು ಹೋಗೋಣ ಎಂದು ಬೈಕ್ ನಲ್ಲಿ ಹೋಗುತ್ತಿದ್ದಾರೆ. ಇಂಥವರನ್ನು ರಾಯಚೂರು ಪೊಲೀಸರು ಹಿಡಿದು ಅವರ ಬೈಕ್ ನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಲಾಕ್ ಡೌನ್ ಮುಗಿಯುವವರೆಗೂ ಅವರು ತಿರುಗಾಡದಂತೆ ಲಾಕ್ ಮಾಡುತ್ತಿದ್ದಾರೆ.

ಮೊದಲೆರಡು ದಿನ ಲಾಠಿ ಬೀಸಿ ಅನಾವಶ್ಯಕವಾಗಿ ತಿರುಗಾಡುವವರಿಗೆ ಲಾಠಿ ರುಚಿ ತೋರಿಸಿದರು, ಪಡ್ಡೆ ಹುಡುಗರು ಅನಾವಶ್ಯವಾಗಿ ತಿರುಗಾಡಬಾರದು ಎಂಬ‌ ಕಾರಣಕ್ಕೆ ಪೆಟ್ರೋಲ್ ಬಂಕ್ ಗಳಲ್ಲಿ 200ಕ್ಕಿಂತ ಅಧಿಕ ಮೌಲ್ಯದ ಪೆಟ್ರೋಲ್ ಹಾಕಿಸಿಕೊಳ್ಳಬೇಕೆಂಬ ನಿಯಮ ಮಾಡಿದರು, ಆದರೂ ತಿರುಗಾಡುವವರ ನಿಯಂತ್ರಣಕ್ಕೆ ಬರುತ್ತಿಲ್ಲ, ಇದರಿಂದ ಇಂಥ ತಿರುಗಾಡುವವರ ಬೈಕ್ ವಶಪಡಿಸಿಕೊಳ್ಳಲಾಗಿದೆ.

ಕಳೆದ ಮಾರ್ಚ 26 ರಿಂದ ಬೈಕ್ ಗಳನ್ನು ಸೀಜ್ ಮಾಡುತ್ತಿದ್ದಾರೆ. ಶುಕ್ರವಾರದವರೆಗೂ ಒಟ್ಟು 745 ಬೈಕ್ ಗಳನ್ನು ಸೀಜ್ ಮಾಡಲಾಗಿದೆ. ಬೈಕ್ ಗಳ ವಶಕ್ಕೆ ತೆಗೆದುಕೊಳ್ಳುವ ಕಾರ್ಯ ಈಗ ನಿರಂತರವಾಗಿ ನಡೆಯುತ್ತಿದೆ, ನಾಕಾಬಂದಿಯಲ್ಲಿರುವ ಪೊಲೀಸರು ವ್ಯಕ್ತಿ ಅನಾವಶ್ಯಕವಾಗಿ ಹೊರಗಡೆ ಬಂದಿದ್ದಾರೆ ಎಂದು ಗೊತ್ತಾರೆ ಸಾಕು ಅವರ ಬೈಕ್ ಸೀಜ್ ಮಾಡಲಾಗುತ್ತಿದೆ.

ಈ ಮಧ್ಯೆ ರಾಯಚೂರು ಜಿಲ್ಲೆಯಲ್ಲಿ ಅವಶ್ಯ ವಸ್ತುಗಳ ಕಾಯ್ದೆಯಡಿಯಲ್ಲಿ ಸುಮಾರು ೯ ಸಾವಿರ ಜನರಿಗೆ ಜಿಲ್ಲಾಡಳಿತದಿಂದ ಪಾಸ್ ನೀಡಲಾಗಿದೆ, ಈಗ ಹೊರಗೆ ಬರುವವರು ನನ್ನದು ಅವಶ್ಯ ಕೆಲಸಕ್ಕೆ ಬಂದಿದ್ದೆ ಎಂದು ಪಾಸ್ ತೋರಿಸಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇಲ್ಲವೇ ಮುಂಜಾನೆ ಹಾಲು, ತರಕಾರಿ, ದಿನಸಿ ಸಮಾನು ತರಲು ಬಂದಿದ್ದೆ ಎಂದು ಹೇಳಿ ಪಾರಾಗುತ್ತಿದ್ದಾರೆ.

ಇದನ್ನೂ ಓದಿ : ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ ಕೊರೋನಾ ಸೋಂಕಿತ ಮಹಿಳೆ

21 ದಿನ ಮನೆಯಲ್ಲಿ ಕಾಲ ಕಳೆಯಬೇಕಾದರು ಅನಾವಶ್ಯವಾಗಿ ಹೊರಗಡೆ ಬಂದು ಪೊಲೀಸರಿಗೆ ತಮ್ಮ ಬೈಕ್ ಒಪ್ಪಿಸಿ ಲಾಕ್ ಡೌನ್ ಆಗುವವರೆಗೂ ಮನೆಯಲ್ಲಿಯೇ ಕುಳಿತುಕೊಳ್ಳುವಂತಾಗಿದೆ. ಇದರಿಂದಾಗಿ ಒಮ್ಮೆ ತೀರಾ ಅವಶ್ಯಕತೆ ಇದ್ದರೂ ಬೈಕ್ ಸಿಗದೆ ಪರದಾಡುವಂತಾಗಿದೆ. ಅದಕ್ಕಾಗಿ ಅವಶ್ಯವಿದ್ದರೆ ಮಾತ್ರ ಹೊರ ಬನ್ನಿ ಇಲ್ಲದಿದ್ದರೆ ಮನೆಯಲ್ಲಿಯೇ ಇರಿ ಆರೋಗ್ಯವಾಗಿರಿ ಎಂದು ಪೊಲೀಸರು ಮನವಿ ಮಾಡಿಕೊಳ್ಳುತ್ತಿದ್ದಾರೆ.

First published: