ಲಾಕ್​ಡೌನ್​ ಸಡಿಲ ಹಿನ್ನೆಲೆ ಬೆಂಗಳೂರಲ್ಲಿ ಪೊಲೀಸ್​ ಕಣ್ಗಾವಲು; ಯಶವಂತಪುರ ಮಾರ್ಕೆಟ್ ಓಪನ್

Bengaluru Lockdown: ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರ್ಕೆಟ್ ಓಪನ್ ಆಗಿದೆ. ಬೆಳಗ್ಗೆ ತರಕಾರಿ, ಹೂ, ಹಣ್ಣು ಮಂಡಿಗಳನ್ನು ತೆರೆಯಲಾಗಿದ್ದು, 10 ಗಂಟೆ ನಂತರ ದಿನಸಿ ಮಂಡಿಗಳ ಬಾಗಿಲು ತೆರೆಯಲಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಏ. 23): ರಾಜ್ಯದಲ್ಲಿ ಕೊರೋನಾ ತೀವ್ರತೆ ಕಡಿಮೆಯಾಗುತ್ತಿರುವ ಕಾರಣ ರಾಜ್ಯ ಸರ್ಕಾರ ಇಂದಿನಿಂದ ಲಾಕ್​ಡೌನ್​ ಸಡಿಲಗೊಳಿಸಿದೆ. ಹೀಗಾಗಿ, ಇಂದಿನಿಂದ ವಾಹನ ಸಂಚಾರ ಹೆಚ್ಚಾಗುವ ಸಾಧ್ಯತೆಯಿದ್ದು, ಬೆಂಗಳೂರು ಪೊಲೀಸರು ಬೆಳಗ್ಗೆಯಿಂದಲೇ ಅಲರ್ಟ್​ ಆಗಿದ್ದಾರೆ.

2 ದಿನಗಳಿಂದ ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆ ಕಂಡುಬಂದಿತ್ತು. ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 2015 ವಾಹನಗಳನ್ನು ಸೀಜ್ ಮಾಡಲಾಗಿತ್ತು. ಇಂದಿನಿಂದ ರಾಜ್ಯದಲ್ಲಿ ಲಾಕ್​ಡೌನ್​ ಸಡಿಲಗೊಳಿಸಿರುವುದರಿಂದ ವಾಹನ ಸಂಚಾರ ಇನ್ನಷ್ಟು ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ, ಮೈಸೂರು ರಸ್ತೆಯಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯಿಂದ ತಪಾಸಣೆ‌ ನಡೆಸಲಾಗುತ್ತಿದೆ. ಒನ್ ವೇ ಆಗಿದ್ದ ಮೈಸೂರು ರಸ್ತೆಯನ್ನು ಈಗ ಟುವೇ ಮಾಡಲಾಗಿದೆ.

ಇದನ್ನೂ ಓದಿ: ಇಂದು ಮಧ್ಯರಾತ್ರಿಯಿಂದಲೇ ಲಾಕ್​​ಡೌನ್‌ ಸಡಿಲಿಕೆ: ಯಾವ ಕ್ಷೇತ್ರಗಳಿಗೆ ವಿನಾಯಿತಿ? ಇಲ್ಲಿದೆ ಡೀಟೆಲ್ಸ್​

ನಗರದ್ಯಾಂತ ಪೊಲೀಸರು ಪ್ರತಿಯೊಂದು ವಾಹನಗಳನ್ನು ತಡೆದು ಪರಿಶೀಲನೆ ಮಾಡುತ್ತಿದ್ದಾರೆ. ಅನವಶ್ಯಕವಾಗಿ ರಸ್ತೆಗಿಳಿಯುತ್ತಿರುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ರಸ್ತೆಯಲ್ಲಿ ಓಡಾಡುತ್ತಿರುವ ಪ್ರತಿಯೊಬ್ಬರ ಪಾಸ್ ತಪಾಸಣೆ ಮಾಡಲಾಗುತ್ತಿದೆ. ಪಾಸ್ ದುರ್ಬಳಕೆ ಕಂಡು ಬಂದರೆ ಕೂಡಲೇ ವಾಹನ್ ಸೀಜ್ ಮಾಡಲಾಗುತ್ತಿದೆ. ಟ್ರಾಫಿಕ್ ಪೊಲೀಸರು ಇಂದು ಬೆಳಗ್ಗೆಯಿಂದ ಓಡಾಡುತ್ತಿರುವ ಪ್ರತಿಯೊಂದು ವಾಹನದ ಸಂಖ್ಯೆ, ಪಾಸ್ ಸಂಖ್ಯೆ ನೋಂದಣಿ ಮಾಡಿಕೊಂಡು, ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಕೊರೋನಾ ಕಂಟಕ: ಪಪ್ಪಾಯಿ ಮಾರಾಟವಾಗದೆ ಲಕ್ಷಾಂತರ ರೂಪಾಯಿ ನಷ್ಟ; ಅನ್ನದಾತ ಕಂಗಾಲು!

ಯಶವಂತಪುರ ಮಾರ್ಕೆಟ್ ಓಪನ್:
ಲಾಕ್ ಡೌನ್ ಕೊಂಚ ರಿಲೀಫ್ ಹಿನ್ನೆಲೆ ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರ್ಕೆಟ್ ಓಪನ್ ಆಗಿದೆ. ಬೆಳಗ್ಗೆ ತರಕಾರಿ, ಹೂ, ಹಣ್ಣು ಮಂಡಿಗಳನ್ನು ತೆರೆಯಲಾಗಿದ್ದು, 10 ಗಂಟೆ ನಂತರ ದಿನಸಿ ಮಂಡಿಗಳ ಬಾಗಿಲು ತೆರೆಯಲಿವೆ. ತರಕಾರಿ ಖರೀದಿಸಲು ಮಾರುಕಟ್ಟೆಗೆ ಬರುತ್ತಿರುವ ಸಣ್ಣಪುಟ್ಟ ವ್ಯಾಪಾರಿಗಳು ಟೊಮೋಟಾ, ಆಲೂಗಡ್ಡೆ, ವಿವಿಧ ಹಣ್ಣುಗಳನ್ನು ವಾಹನದಲ್ಲಿ ತುಂಬಿಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂದಿತು.
First published: