HOME » NEWS » Coronavirus-latest-news » LOCKDOWN OR NO LOCKDOWN DECISION LIES WITH PEOPLE AND THEIR BEHAVIOR SAYS BBMP CHIEF GAURAV GUPTA SKTV

ಲಾಕ್​ಡೌನ್ ಬೇಕಾ, ಬೇಡ್ವಾ? ನಿಮ್ಮ ಮೇಲಿದೆ ಸರ್ಕಾರದ ನಿರ್ಧಾರ: ಬಿಬಿಎಂಪಿ ಆಯುಕ್ತರ ಎಚ್ಚರಿಕೆ !

ಕರ್ಫ್ಯೂ, ಲಾಕ್​ಡೌನ್ ಇದ್ಯಾವ್ದೂ ಬೇಡ ಎನ್ನುವುದಾದರೆ ಜನ ಮನೆಯಲ್ಲೇ ಇರಬೇಕು. ಸದ್ಯ ಸರ್ಕಾರದ ನಿರ್ದೇಶನಕ್ಕೆ ಪಾಲಿಕೆ ಬದ್ಧವಾಗಿದೆ. ಈಗಂತೂ ಯುಗಾದಿ ಹಬ್ಬ ಕೂಡಾ ಹತ್ತಿರ ಬರ್ತಿದೆ. ಹಬ್ಬ ಹರಿದಿನ ಅಂತ ಓಡಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ ಕಾರ್ಯಪ್ರವೃತ್ತವಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

news18-kannada
Updated:April 12, 2021, 12:19 PM IST
ಲಾಕ್​ಡೌನ್ ಬೇಕಾ, ಬೇಡ್ವಾ? ನಿಮ್ಮ ಮೇಲಿದೆ ಸರ್ಕಾರದ ನಿರ್ಧಾರ: ಬಿಬಿಎಂಪಿ ಆಯುಕ್ತರ ಎಚ್ಚರಿಕೆ !
ಸಾಂಧರ್ಭಿಕ ಚಿತ್ರ
  • Share this:
ಬೆಂಗಳೂರು (ಏಪ್ರಿಲ್ 12): ಸದ್ಯ ಕರ್ನಾಟಕ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಈಗಾಗಲೇ ನೈಟ್​ ಕರ್ಫ್ಯೂ ಜಾರಿಯಲ್ಲಿದೆ. ಇದರ ಜೊತೆಗೇ ಲಾಕ್​ಡೌನ್ ಮಾಡುವ ಬಗ್ಗೆಯೂ ಆತಂಕವಿದೆ. ಲಾಕ್ ಡೌನ್ ಆಗುತ್ತಾ ಅಥವಾ ಇಲ್ವಾ ಎನ್ನುವ ಬಗ್ಗೆ ಜನರಲ್ಲಿ ಸಾಕಷ್ಟು ಅನುಮಾನಗಳಿವೆ. ಈ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಗೌರವ್ ಗುಪ್ತಾ ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಕರ್ಫ್ಯೂ, ಲಾಕ್​ಡೌನ್ ಇದ್ಯಾವ್ದೂ ಬೇಡ ಎನ್ನುವುದಾದರೆ ಜನ ಮನೆಯಲ್ಲೇ ಇರಬೇಕು. ಸದ್ಯ ಸರ್ಕಾರದ ನಿರ್ದೇಶನಕ್ಕೆ ಪಾಲಿಕೆ ಬದ್ಧವಾಗಿದೆ. ಈಗಂತೂ ಯುಗಾದಿ ಹಬ್ಬ ಕೂಡಾ ಹತ್ತಿರ ಬರ್ತಿದೆ. ಹಬ್ಬ ಹರಿದಿನ ಅಂತ ಓಡಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ ಕಾರ್ಯಪ್ರವೃತ್ತವಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಉಚಿತವಾಗಿ ಲಸಿಕೆ ನೀಡುತ್ತಿದ್ದರೂ ಅನೇಕರು ಇನ್ನೂ ಲಸಿಕೆ ಪಡೆದಿಲ್ಲ. ಲಸಿಕೆ ಪಡೆಯದವರಿಗೆ ರಕ್ಷಣೆ ಇಲ್ಲ, ಹಾಗಾಗಿ ತಪ್ಪದೇ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು ಎಂದು ಜನರಲ್ಲಿ ಮನವಿ ಮಾಡಿದರು. ಇನ್ನು ಬಿಬಿಎಂಪಿ ಆಪ್ತ ಮಿತ್ರ ಹೆಲ್ಪ್ ಲೈನ್ ಮೂಲಕ ಲಸಿಕೆ ಬಗ್ಗೆ ಅಭಿಯಾನ ಹೆಚ್ಚಿಸಲಾಗಿದೆ. ಸದ್ಯಕ್ಕೆ ಕೊರೋನಾ ನಿಯಂತ್ರಣ ಬದಲಾಗಿ ಕೊರೋನಾ ಬಂದಾಗ ಏನ್ ಮಾಡಬೇಕು ಎನ್ನುವ ಬಗ್ಗೆ ಆಲೋಚಿಸಬೇಕಾಗಿದೆ.

ಯುವ ಜನತೆ ಎಚ್ಚರವಾಗಿರಬೇಕು. ಪ್ರತಿನಿತ್ಯ ಕೊರೊನಾ ಲೆಕ್ಕ ಭಯ ಹುಟ್ಟಿಸುವಂತಿದೆ. 20ರಿಂದ 40 ವರ್ಷದವರಿಗೆ ಕೊರೋನಾ ಕಾಟ ಜಾಸ್ತಿ ಇದೆ. ಇದರೊಂದಿಗೆ ಕೋವಿಡ್ ಕೇರ್ ಸೆಂಟರ್ ಗಳ ಸಂಖ್ಯೆ ಕೂಡಾ ಹೆಚ್ಚಿಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಸದ್ಯ ಹಾಸಿಗೆಗಳ ಅಭಾವವವಿದ್ದು ಸೆಂಟ್ರಲ್ ಬೆಡ್ ಅಲಾಟ್ ಮೆಂಟ್ ಸಿಸ್ಟಂ ಮೂಲಕ ಬೆಡ್ ನಿಯೋಜನೆ ಮಾಡಲಾಗುವುದು. ಸರ್ಕಾರ ಸುವರ್ಣ ಕರ್ನಾಟಕ ಸ್ವಾಸ್ತ್ಯ ಯೋಜನೆ ಮೂಲಕ ಇದರ ಖರ್ಚು ಭರಿಸಲಿದೆ.

ಸದ್ಯ ಬೆಡ್ ಗಳ ಅಭಾವವಿದ್ದು ಶೇ.50 ರಷ್ಟು ಬೆಡ್ ಗಳ ಮೀಸಲಾತಿ ಇದೆ. ಮ್ಯಾಥಮೆಟಿಕಲ್ ಟೀಂ ಏಪ್ರಿಲ್ ಅಂತ್ಯಕ್ಕೆ 10 ಸಾವಿರ ಕ್ಕೂ ಅಧಿಕ ಕೇಸ್ ಬರಲಿದೆ ಎಂಬ ಎಚ್ಚರಿಕೆ ನೀಡಿದ್ದಾರೆ ಎಂದು ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

ರಾಜ್ಯದಲ್ಲಿ ಮತ್ತಷ್ಟು ಹೆಚ್ಚಿನ ಲಸಿಕೆಗಳ ಅವಶ್ಯಕತೆ ಇದೆ. ನಿನ್ನೆ 3 ಲಕ್ಷ ವ್ಯಾಕ್ಸಿನ್ ಬದಲು 2 ಲಕ್ಷ ವ್ಯಾಕ್ಸಿನ್ ಬಂದಿದೆ. ಹಲವೆಡೆ ವ್ಯಾಕ್ಸಿನ್ ಕೊರತೆ ಕಂಡು ಬಂದಿದೆ. ಆದರೆ ರಾಜ್ಯ ಮಟ್ಟದ ಆರೋಗ್ಯ ಅಧಿಕಾರಿಗಳು ಇಂದು ಸರಿಪಡಿಸುವ ಬಗ್ಗೆ ಆಶ್ವಾಸನೆ ನೀಡಿದ್ದಾರೆ. ಲಾಕ್​ಡೌನ್ ನಿರ್ಧಾರ ಸರ್ಕಾರದ್ದು, ತಜ್ಞರ ಶಿಫಾರಸ್ಸಿನಂತೆ ಸರ್ಕಾರ ಈ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಚೈನ್ ಲಿಂಕ್ ಬ್ರೇಕ್ ಆಗಬೇಕು ಅಂದ್ರೆ  ಜನ ತಮ್ಮ ತಮ್ಮ ಮನೆಯಲ್ಲಿ ಇರಬೇಕು. ಅಗತ್ಯ ಕೆಲಸ ಇದ್ದಾಗ ಮಾತ್ರ ಮನೆಯಿಂದ ಹೊರೆಗೆ ಬರಬೇಕು. ಶೇಕಡಾ 20ರಷ್ಟು ರೋಗಿಗಳು ಆಸ್ಪತ್ರೆಗೆ ದಾಖಲಾಗ್ತಿದ್ದಾರೆ. ಈ ಎಲ್ಲಾ ಅಪಾಯ ತಪ್ಪಿಸೋಕೆ ಜನರಿಂದ ಮಾತ್ರವೇ ಸಾಧ್ಯ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
Published by: Soumya KN
First published: April 12, 2021, 12:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories