HOME » NEWS » Coronavirus-latest-news » LOCKDOWN OR CURFEW CONFUSED NETIZENS TAKE TO MEMES AS MAHARASHTRA IMPOSES NEW COVID 19 RULES STG SCT

ಲಾಕ್‌ಡೌನ್ ಅಥವಾ ಕರ್ಫ್ಯೂ?; ಟ್ರೋಲ್ ಆಯ್ತು ಮಹಾರಾಷ್ಟ್ರದ ಹೊಸ ಕೋವಿಡ್ - 19 ನಿಯಮಗಳು

ಮಹಾರಾಷ್ಟ್ರದ ಹೊಸ ಮಾರ್ಗಸೂಚಿಗಳ ಪ್ರಕಾರ, ಕಾರ್ಮಿಕರನ್ನು ಪಿಕ್‌ ಅಪ್‌ ಹಾಗೂ ಡ್ರಾಪ್‌ ಮಾಡಲು ಕೈಗಾರಿಕೆಗಳಿಗೆ ಅವಕಾಶವಿದೆ. ಅಗತ್ಯ ಸರಕು ಮತ್ತು ಸೇವೆಗಳನ್ನು ತಲುಪಿಸಲು ಇ-ಕಾಮರ್ಸ್ ಕ್ಷೇತ್ರಕ್ಕೆ ಅವಕಾಶ ನೀಡಲಾಗಿದೆ.

news18-kannada
Updated:April 16, 2021, 2:42 PM IST
ಲಾಕ್‌ಡೌನ್ ಅಥವಾ ಕರ್ಫ್ಯೂ?; ಟ್ರೋಲ್ ಆಯ್ತು ಮಹಾರಾಷ್ಟ್ರದ ಹೊಸ ಕೋವಿಡ್ - 19 ನಿಯಮಗಳು
ಉದ್ಧವ್ ಠಾಕ್ರೆ
  • Share this:
ಮುಂಬೈ (ಏ. 16): ಕೊರೊನಾ ವೈರಸ್‌ ಸಾಂಕ್ರಾಮಿಕದ ಎರಡನೇ ಅಲೆ ಭಾರತದಲ್ಲಿ ಮತ್ತೆ ಜೋರಾಗೇ ಇದೆ. ಅದರಲ್ಲೂ ಪ್ರಮುಖವಾಗಿ ಮಹಾರಾಷ್ಟ್ರ ವೈರಾಣುವಿನ ಹಾವಳಿಯಿಂದ ತತ್ತರಿಸುತ್ತಿದೆ. ಇದನ್ನು ತಡೆಗಟ್ಟಲು ಉದ್ಧವ್‌ ಠಾಕ್ರೆ ನೇತೃತ್ವದ ಸರ್ಕಾರ ಹರಸಾಹಸ ಪಡುತ್ತಿದೆ. ಇತ್ತೀಚೆಗಷ್ಟೇ, ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ ಕೊರೊನಾ ವೈರಸ್‌ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಲು ಅಂತಿಮವಾಗಿ ಮೇ 1, ಬೆಳಗ್ಗೆ 7 ಗಂಟೆಯವರೆಗೆ ರಾಜ್ಯಾದ್ಯಂತ ಕಠಿಣ ನಿರ್ಬಂಧಗಳನ್ನು ವಿಧಿಸಿತು. "ಲಾಕ್​ಡೌನ್ ತರಹದ" ನಿರ್ಬಂಧಗಳು ಜಾರಿಗೆ ಬರುವವರೆಗೆ ಕ್ರಿಮಿನಲ್ ಪ್ರೊಸೀಜರ್ ಕೋಡ್‌ ಸೆಕ್ಷನ್ 144 (ನಿಷೇಧಿತ ಆದೇಶಗಳು) ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ದೂರದರ್ಶನದ ಭಾಷಣದಲ್ಲಿ ತಿಳಿಸಿದ್ದಾರೆ. ಈ ಪೈಕಿ ಅಗತ್ಯ ಸೇವೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.

ಸಿಆರ್‌ಪಿಸಿಯ ಸೆಕ್ಷನ್ 144 ಅಡಿಯಲ್ಲಿ ಐದಕ್ಕೂ ಹೆಚ್ಚು ಜನರು ಸಭೆ ಸೇರುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಮಾನ್ಯ ಕಾರಣವಿಲ್ಲದೆ ಯಾರಿಗೂ ಸಾರ್ವಜನಿಕ ಸ್ಥಳಗಳಲ್ಲಿ ಹೋಗಲು ಅವಕಾಶ ನೀಡದಿರಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಆದರೆ, ಕಳೆದ ವರ್ಷ ಹೇರಿದಂತೆಯೇ ''ಸಂಪೂರ್ಣ ಲಾಕ್‌ಡೌನ್‌'' ಎಂದು ಮಾತ್ರ ಉದ್ಧವ್‌ ಠಾಕ್ರೆ ತಮ್ಮ ಭಾಷಣದ ವೇಳೆ ಹೇಳಲಿಲ್ಲ. ಈ ಹಿನ್ನೆಲೆ, ಇದು ಲಾಕ್‌ಡೌನ್‌ ಅಥವಾ ಕರ್ಫ್ಯೂ ಎಂದು ಜನರು ಗೊಂದಲಕ್ಕೊಳಗಾಗಿದ್ದಾರೆ.

ಈ ಹಿನ್ನೆಲೆ ಠಾಕ್ರೆ ಭಾಷಣದ ನಂತರ, ಟ್ವಿಟ್ಟರ್‌ನಲ್ಲಿ ಅವರ ಭಾಷಣಕ್ಕೆ ಪ್ರತಿಕ್ರಿಯೆಯಾಗಿ ಮೇಮ್ಸ್‌ಗಳಿಂದ ತುಂಬಿಹೋಗಿತ್ತು. ಭಾಷಣದ ಸಮಯದಲ್ಲಿ ಕ್ರಮಗಳನ್ನು ಘೋಷಿಸುವಲ್ಲಿನ ವಿಳಂಬದ ಬಗ್ಗೆ ಕೆಲವರು ಆಶ್ಚರ್ಯಪಟ್ಟರೆ, ಇತರರು 38 ನಿಮಿಷಗಳ ಭಾಷಣವನ್ನು ಕೇಳಿ ಗೊಂದಲಕ್ಕೊಳಗಾಗಿರುವುದಾಗಿ ಹೇಳಿದರು. ಗೊಂದಲವನ್ನು ವ್ಯಕ್ತಪಡಿಸಲು ಅನೇಕರು ಮೀಮ್ಸ್‌ಗಳ ಮೊರೆ ಹೋದರು.


ಹೊಸ ಮಾರ್ಗಸೂಚಿಗಳ ಪ್ರಕಾರ, ಕಾರ್ಮಿಕರನ್ನು ಪಿಕ್‌ ಅಪ್‌ ಹಾಗೂ ಡ್ರಾಪ್‌ ಮಾಡಲು ಕೈಗಾರಿಕೆಗಳಿಗೆ ಅವಕಾಶವಿದೆ. ಅಗತ್ಯ ಸರಕು ಮತ್ತು ಸೇವೆಗಳನ್ನು ತಲುಪಿಸಲು ಇ-ಕಾಮರ್ಸ್ ಕ್ಷೇತ್ರಕ್ಕೆ ಅವಕಾಶ ನೀಡಲಾಗಿದೆ. ಇನ್ನು, ಬೆಳಗ್ಗೆ 7 ರಿಂದ ರಾತ್ರಿ 8 ರವರೆಗೆ ರಸ್ತೆ ಬದಿಯ ಮಾರಾಟಗಾರರಿಗೆ ಸರ್ಕಾರ ಅವಕಾಶ ನೀಡುತ್ತಿದೆ.ಆದರೆ ಅಲ್ಲಿ ಯಾರೂ ತಿನ್ನಲು ಅವಕಾಶ ನೀಡುವುದಿಲ್ಲ, ಮೇ 1 ರವರೆಗೆ ಯಾವುದೇ ರೀತಿಯ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಅಥವಾ ರಾಜಕೀಯ ಕಾರ್ಯಗಳನ್ನು ರಾಜ್ಯದಲ್ಲಿ ಅನುಮತಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.ಆದರೂ, ಅನೇಕರು ಹೊಸ ನಿಯಮಗಳ ಬಗ್ಗೆ ಕಿರಿಕಿರಿ ಮತ್ತು ಗೊಂದಲಗಳನ್ನು ವ್ಯಕ್ತಪಡಿಸಿದ್ದಾರೆ. ಅವರ 38 ನಿಮಿಷಗಳ ಸುದೀರ್ಘ ಭಾಷಣ ವಿಫಲವಾಗಿದೆ, ಮತ್ತು ಪ್ರಮುಖ ವಿಷಯಕ್ಕೆ ಬರಲು ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ ಎಂದೂ ಕೆಲವರು ಪ್ರತಿಕ್ರಿಯಿಸಿದ್ದಾರೆ.ದೇಶದಲ್ಲಿ ಕೊರೊನಾ ಎರಡನೇ ಅಲೆ ರುದ್ರತಾಂಡವವಾಡುತ್ತಿದ್ದು, ಈ ಪೈಕಿ ಮಹಾರಾಷ್ಟ್ರ ಹೆಚ್ಚು ಪೀಡಿತ ರಾಜ್ಯವಾಗಿದೆ. ಏಪ್ರಿಲ್‌ 1 ರಿಂದ ಮಹಾರಾಷ್ಟ್ರದಲ್ಲಿ ದೈನಂದಿನ ಹೊಸ ಪ್ರಕರಣಗಳು 40,000 ಕ್ಕಿಂತ ಹೆಚ್ಚಾಗಿದೆ. ಬುಧವಾರ ಅಲ್ಲಿ 58,952 ಹೊಸ ಪ್ರಕರಣಗಳನ್ನು ವರದಿ ಮಾಡಿದೆ.ಭಾರತದಲ್ಲಿ ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಆರಂಭದಿಂದಲೂ ಮಹಾರಾಷ್ಟ್ರದಲ್ಲಿ ದೈನಂದಿನ ಹೊಸ ಸೋಂಕುಗಳು ಸ್ಥಿರವಾಗಿ ಹೆಚ್ಚಿದೆ. ಏಪ್ರಿಲ್ 1 ರಿಂದ ಆ ರಾಜ್ಯದಲ್ಲಿ ಕನಿಷ್ಠ 40,000 ಸೋಂಕುಗಳಿಗಿಂತ ಅಧಿಕವಾಗೇ ಇದೆ.
Published by: Sushma Chakre
First published: April 16, 2021, 2:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories