ಸೆಕ್ಸ್ ಮಾಡೋಕೆ ಜನರಿಗೆ ಸಿಕ್ತು ಸಿಕ್ಕಾಪಟ್ಟೆ ಪುರುಸೊತ್ತು; ಲಾಕ್ ಡೌನ್ ವೇಳೆ ಕಾಂಡೋಮ್​ಗೆ ಹೆಚ್ಚಾಯ್ತು ಡಿಮ್ಯಾಂಡ್

ಯುದ್ಧ ಮತ್ತು ಮಹಾರೋಗಗಳ ಸಂದರ್ಭದಲ್ಲಿ ಜನರು ಹೆಚ್ಚು ಕಾಮಾಸಕ್ತರಾಗಿರುತ್ತಾರೆ ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ.

news18
Updated:March 26, 2020, 7:42 PM IST
ಸೆಕ್ಸ್ ಮಾಡೋಕೆ ಜನರಿಗೆ ಸಿಕ್ತು ಸಿಕ್ಕಾಪಟ್ಟೆ ಪುರುಸೊತ್ತು; ಲಾಕ್ ಡೌನ್ ವೇಳೆ ಕಾಂಡೋಮ್​ಗೆ ಹೆಚ್ಚಾಯ್ತು ಡಿಮ್ಯಾಂಡ್
ಕಾಂಡೋಮ್
  • News18
  • Last Updated: March 26, 2020, 7:42 PM IST
  • Share this:
ಕೊರೋನಾ ವೈರಸ್ ಹರಡಬಾರದೆಂದು ಮುನ್ನೆಚ್ಚರಿಕೆಯಾಗಿ ಭಾರತ ಸರ್ಕಾರ ದೇಶಾದ್ಯಂತ 21 ದಿನ ಲಾಕ್ ಡೌನ್ ಮಾಡಿದೆ. ಕೆಲಸ ಕಾರ್ಯಗಳಲ್ಲೇ ಮುಳುಗಿ ಹೋಗುತ್ತಿದ್ದ ಜನರಿಗೆ ಈ ಮೂರು ವಾರ ಅವಧಿ ವಿಚಿತ್ರ ಅನುಭವಕ್ಕೆ ದಾರಿ ಮಾಡಿಕೊಡುತ್ತಿದೆ. ಕೆಲವರು ಮನೆಯಲ್ಲಿ ಮೂರು ಹೊತ್ತೂ ಟಿವಿ ನೋಡುತ್ತಾ ಕಾಳ ಕಳೆದರೆ, ಮತ್ತೆ ಕೆಲವರು ಮನೆಯಲ್ಲಿ ಮೂಲೆಗೆ ಬಿದ್ದಿದ್ದ ಪುಸ್ತಕಗಳನ್ನ ಹೆಕ್ಕಿ ಧೂಳು ಒರೆಸಿ ಓದಲು ಅಣಿಯಾಗುತ್ತಿದ್ಧಾರೆ. ಮತ್ತೆ ಕೆಲವರು ತಮ್ಮ ಪ್ರೀತಿ ಪಾತ್ರರ ಜೊತೆ ರೋಮ್ಯಾನ್ಸ್​ನಲ್ಲಿ ಮುಳುಗಿ ಹೋಗುತ್ತಿದ್ದಾರೆ. ತಮ್ಮ ಜೋಡಿಯ ಜೊತೆ ರತಿಕ್ರೀಡೆಯಾಡಲು ಇನ್ನಿಲ್ಲದ ಸಮಯಾವಕಾಶ ಸಿಕ್ಕಿದೆ. ಕೆಲಸದ ಒತ್ತಡಗಳಿಂದ ಮಾಸಿಹೋಗಿದ್ದ ಪ್ರೀತಿ, ಪ್ರೇಮಕ್ಕೆ ಚೇತರಿಕೆ ಕೊಡಲು ಜನರು ತುದಿಗಾಲಲ್ಲಿ ನಿಂತಿದ್ಧಾರೆ.

ಇದು ಉತ್​ಪ್ರೇಕ್ಷೆಯ ಮಾತಲ್ಲ. ಇದಕ್ಕೆ ಇಂಬು ನೀಡುವಂತೆ ಭಾರತದಾದ್ಯಂತ ಕಾಂಡೋಮ್​ಗಳ ಮಾರಾಟದಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದು ವರದಿಯೊಂದು ಬಂದಿದೆ. ಮೆಡಿಕಲ್ ಸ್ಟೋರ್ ಮತ್ತು ಇ-ಕಾಮರ್ಸ್ ಔಷಧಿ ಮಳಿಗೆಗಳಲ್ಲಿ ಕಾಂಡೋಮ್ ಮತ್ತು ಗರ್ಭನಿರೋಧಕ ಗುಳಿಗೆಗಳ ಮಾರಾಟ ಹೆಚ್ಚಾಗಿದೆಯಂತೆ.

ಇದನ್ನೂ ಓದಿ: Covid-19 | ಅತ್ತರೆ ಕೊರೊನಾ ಬರಲ್ಲ, ಅಳಲು ಅಡ್ಡಿಯಿಲ್ಲ

“ಮಾಸ್ಕ್​ಗಳಿಗೆ ವಿಪರೀತ ಬೇಡಿಕೆ ಇದೆ. ಕೊರೋನಾ ಚಿಕಿತ್ಸೆಗೆ ಬಳಕೆ ಮಾಡುವ ಕ್ಲೋರೋಕ್ವಿನ್ ಸಲ್ಫೇಟ್​ಗೂ ಬೇಡಿಕೆ ಇದೆ. ಜನರು ವಿಟಮಿನ್ ಸಿ ಅನ್ನೂ ಹೆಚ್ಚು ಕೇಳುತ್ತಿದ್ದಾರೆ. ಕಾಂಡೂಮ್ ಮಾರಾಟವೂ ಹೆಚ್ಚಾಗಿದೆ” ಎಂದು ಕೆಲ ಫಾರ್ಮಸಿ ಮಾಲೀಕರು ಹೇಳುತ್ತಿದ್ಧಾರೆ.

ಯುದ್ಧ ಮತ್ತು ಮಹಾರೋಗಗಳ ಸಂದರ್ಭದಲ್ಲಿ ಜನರು ಹೆಚ್ಚು ಕಾಮಾಸಕ್ತರಾಗಿರುತ್ತಾರೆ ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ.

“ಜನರು ಆತಂಕಗೊಂಡು ಮನೆಯಲ್ಲಿ ಉಳಿದುಕೊಂಡಿದ್ದಾರೆ. ತಮ್ಮ ವೃತ್ತಿ ಬದುಕಿನ ಧಾವಂತದಲ್ಲಿ ಮುಳುಗಿಹೋಗಿದ್ದ ವಿವಾಹಿತ ಅಥವಾ ಅವಿವಾಹಿತ ಜೋಡಿಗಳಿಗೆ ಈಗ ಜೊತೆಯಲ್ಲಿರಲು, ನಿಕಟವಾಗಿರಲು ಸಮಯ ಬಂದಿದೆ. ಯುದ್ಧದ ಸಂದರ್ಭದಲ್ಲಿ ಪ್ರೇಮ ಸಲ್ಲಾಪ ಹೆಚ್ಚಾಗುವಂತೆ ಈಗ ಆಗುತ್ತಿದೆ. ಈಗ ಯುದ್ಧದಂಥ ಸಂದರ್ಭವೇ ಬಂದಿದೆ” ಎಂದು ಮನೋವೈದ್ಯ ರಾಜೀವ್ ಮೆಹ್ತಾ ಅಭಿಪ್ರಾಯಪಡುತ್ತಾರೆ.

ಬಿಡುವಿಲ್ಲದ ವೃತ್ತಿ ಜೀವನದಲ್ಲಿ ಬಳಲಿಹೋಗುವುದರಿಂದ ವಿವಾಹಿತ ಜೋಡಿಗಳು ಹೆಚ್ಚಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಈಗ ಜನರು ಸಹಜ ಲೈಂಗಿಕ ಜೀವನಕ್ಕೆ ಮರಳುವ ಅವಕಾಶ ಸಿಕ್ಕಿದೆ. ಆದರೆ, ತೀರಾ ನಿಕಟವಾಗಿಬಿಟ್ಟರೆ ಜಗಳ ಕೂಡ ಹೆಚ್ಚಾಗಬಹುದು ಎಂದು ಮೆಹ್ತಾ ಎಚ್ಚರಿಸುತ್ತಾರೆ.
First published: March 26, 2020, 7:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading