ನೋಟ್ ಬ್ಯಾನ್‌-ಜಿಎಸ್‌ಟಿ ನಂತರ ನೇಕಾರಿಕೆ ಉದ್ಯಮಕ್ಕೆ ದೊಡ್ಡ ಹೊಡೆತ ಕೊಟ್ಟ ಲಾಕ್‌ಡೌನ್

ನೇಕಾರರಿಗೆ ಹೆಸ್ಕಾಂ ಸಿಬ್ಬಂದಿ ಬಿಲ್ ಕಟ್ಟಲು ಒತ್ತಾಯ ಮಾಡುತ್ತಿದ್ದು, ಇದು ನೇಕಾರರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಇನ್ನೂ ನೇಕಾರರ ಮಗ್ಗದಲ್ಲಿ ಕೆಲಸ ಮಾಡೋ ಕೂಲಿ ಕಾರ್ಮಿಕರು ಸಹ ಇದೀಗ ಅತಂತ್ರಾಗಿದ್ದಾರೆ. ಇತಂಹ ಕಷ್ಟದ ಸಂದರ್ಭದಲ್ಲಿ ಸರ್ಕಾರ ನೇಕಾರರ ನೆರವಿಗೆ ಧಾವಿಸಬೇಕು.

ಕೆಲಸ ಸ್ಥಗಿತಗೊಳಿಸಿರುವ ಬೆಳಗಾವಿಯ ನೇಕಾರರು.

ಕೆಲಸ ಸ್ಥಗಿತಗೊಳಿಸಿರುವ ಬೆಳಗಾವಿಯ ನೇಕಾರರು.

  • Share this:
ಬೆಳಗಾವಿ(24)- ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದೇಶ್ಯಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಲಾಕ್ ಡೌನ್ ನಿಂದ ಅನೇಕ ಉದ್ಯಮಗಳಿಗೆ ಭಾರೀ ನಷ್ಟ ಉಂಟಾಗಿದೆ. ಈ ಪೈಕಿ ನೇಕಾರಿಕೆ ಉದ್ಯಮವೂ ಹೊರತಾಗಿಲ್ಲ. ಹೀಗಾಗಿ ಉದ್ಯಮವನ್ನೇ ನಂಬಿ ಬದುಕು ನಡೆಸುತ್ತಿದ್ದ ನೇಕಾರರಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ಸದ್ಯ ಸರ್ಕಾರದಿಂದ  ಸಹಾಯ ಸಿಗಲಿದೇ ಎಂಬ ನಿರೀಕ್ಷೆಯಲ್ಲಿ ನೇಕಾರ ಸಮೂದಾಯವಿದೆ. 

ಬೆಳಗಾವಿ ಜಿಲ್ಲೆಯಲ್ಲಿ 22,000 ಹೆಚ್ಚು ವಿದ್ಯುತ್ ಮಗ್ಗಗಳು ಇದ್ದು, ಇದನ್ನು ನಂಬಿಕೊಂಡು  35,000 ಕುಟುಂಬಗಳು ಜೀವನ ನಡೆಸುತ್ತಿವೆ. ಇದೀಗ ಲಾಕ್ ಡೌನ್ ನಿಂದ ನೇಕಾರಿಗೆ ಉದ್ಯಮಕ್ಕೆ ತೀವ್ರ ಸಂಕಷ್ಟ ಎದುರಾಗಿದೆ.

ಇಲ್ಲಿನ ನೇಕಾರರು ಸೀರೆಗಳ ತಯಾರಿಕೆಗೆ ಗುಜರಾತ್, ಮಹಾರಾಷ್ಟ್ರದ ಕಚ್ಚಾ ವಸ್ತುಗಳನ್ನು ನಂಬಿಕೊಂಡಿದ್ದರು. ಆದರೇ ಲಾಕ್ ಡೌನ್ ನಿಂದ ಯಾವುದೇ ಕಚ್ಚಾ ವಸ್ತುಗಳ ಪೂರೈಕೆ ಆಗುತ್ತಿಲ್ಲ. ನೇಕಾರರು ತಮ್ಮ ಮಗ್ಗಗಳನ್ನು ಸ್ಥಗಿತಗೊಳಿಸಿದ್ದಾರೆ. ಲಾಕ್ ಡೌನ್ ಮೊದಲು ನೂರಾರು ಸೀರೆಗಳನ್ನು ಚಿಲ್ಲರೆ, ಸಗಟು ವ್ಯಾಪರಿಗಳಿಗೆ ಪೂರೈಕೆ ಮಾಡಿದ್ದಾರೆ. ಸದ್ಯ ಈ ಹಣ ಸಹ ನೇಕಾರರ ಕೈ ಸೇರಿಲ್ಲ. ಸೀರೆಗಳ ಮಾರಾಟವೇ ಆಗಲ್ಲ ನಿಮಗೆ ಎಲ್ಲಿಂದ ಹಣ ಕೊಡೊದು ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

ಮಾರಾಟವಾಗದೇ ಉಳಿದಿರೋ ಸೀರೆಗಳು ವಾಪಸ್ ಆಗೋ ಆತಂಕ ಕೂಡ ನೇಕಾರರಿಗೆ ಇದೆ. ಸಿದ್ದಗೊಂಡಿರೋ ಸಾವಿರರು ಸೀರೆಗಳನ್ನು ಮನೆಯಲ್ಲಿ ಇಟ್ಟುಕೊಂಡು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಹೆಚ್ಚಾಗಿ ಮದುವೆ ಸಂಭ್ರಮಗಳ ನಡೆಯುತ್ತವೆ. ಇಂದಹ ಸಂದರ್ಭದಲ್ಲಿ ಲಾಕ್ ಡೌನ್ ಆಗಿದ್ದು ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಸ್ಥಗೀತಗೊಂಡಿದೆ.

ನೇಕಾರರಿಗೆ ಹೆಸ್ಕಾಂ ಸಿಬ್ಬಂದಿ ಬಿಲ್ ಕಟ್ಟಲು ಒತ್ತಾಯ ಮಾಡುತ್ತಿದ್ದು, ಇದು ನೇಕಾರರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಇನ್ನೂ ನೇಕಾರರ ಮಗ್ಗದಲ್ಲಿ ಕೆಲಸ ಮಾಡೋ ಕೂಲಿ ಕಾರ್ಮಿಕರು ಸಹ ಇದೀಗ ಅತಂತ್ರಾಗಿದ್ದಾರೆ. ಇತಂಹ ಕಷ್ಟದ ಸಂದರ್ಭದಲ್ಲಿ ಸರ್ಕಾರ ನೇಕಾರರ ನೆರವಿಗೆ ಧಾವಿಸಬೇಕು. ರಾಜ್ಯದಲ್ಲಿ ಸೀರೆ ಬ್ಯಾಂಕ್ ತೆಗೆಯಬೇಕು. ಜತೆಗೆ ಬಡ ನೇಕಾರರ ಕುಟುಂಬಗಳಿಗೆ ನಿರ್ವಹಣೆಗೆ ಹಣ ನೀಡಬೇಕು ಎಂದು ಬೆಳಗಾವಿ ನೇಕಾರರ ಸಂಘದ ಅಧ್ಯಕ್ಷ ಪರುಶುರಾಮ್ ಡಾಗೆ ಆಗ್ರಹಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ನೇಕಾರರ ಸಮಸ್ಯೆ ಬಗ್ಗೆ ಸಚಿವ ಶ್ರೀಮಂತ ಪಾಟೀಲ್ ಸಹ ನ್ಯೂಸ್ 18 ಕನ್ನಡ ಜತೆಗೆ ಮಾತನಾಡಿದ್ದಾರೆ. "ಈಗಾಗಲೇ ನೇಕಾರರ ಸಮಸ್ಯೆ ಬಗ್ಗೆ ಸಭೆ ನಡೆಸಿ ಸಿಎಂ ಬಿ. ಎಸ್ ಯಡಿಯೂರಪ್ಪ ಭೇಟಿ ಮಾಡಿ ಗಮನಕ್ಕೆ ತರಲಾಗಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಜತೆಗೆ ಸಹ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಇಡೀ ದೇಶದಲ್ಲಿ ಟೆಕ್ಸ್ ಟೈಲ್ ಉದ್ಯಮ ನಷ್ಟದಲ್ಲಿದೆ.

ಕೇಂದ್ರ ಸರ್ಕಾರ ಒಂದು ಪ್ಯಾಕೆಜ್ ನೀಡಲು ಸಿದ್ದತೆ ಮಾಡಲು ತಯಾರಿಯಲ್ಲಿ ಇದೆ. ರಾಜ್ಯದ ವಿವಿಧ ಇಲಾಖೆಗಳಿಂದ ಸಮವಸ್ತ್ರಗಳನ್ನು ವಿತರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆ, ಪೊಲೀಸ್ ಹಾಗೂ ಪೌರ ಕಾರ್ಮಿಕರು ಸೇರಿಗೆ ಅನೇಕರಿಗೆ ಸಮವಸ್ತ್ರ ನೀಡಲಾಗುತ್ತಿದೆ. ಇದನ್ನು ನಮ್ಮ ನೇಕಾರರ ಬಳಿಯಿಂದಲೇ ವಿತರಣೆ ಮಾಡಲು ಚಿಂತನೆ ಮಾಡಿದೆ. ಈ ಮೂಲಕ ನೇಕಾರರಿಗೆ ನೇರವಾಗಲು ಸರ್ಕಾರ ಚಿಂತನೆ ನಡೆಸಿದೆ" ಎಂದು ಶ್ರೀಮಂತ ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ : ಟ್ರಾವೆಲ್ ಪಾಸ್‌ ನೀಡಲು ರೆಫ್ರಿಜರೇಟರ್‌ ಅನ್ನು ಲಂಚವಾಗಿ ಪಡೆದ ತೆಲಂಗಾಣ ಎಸಿಪಿ ವರ್ಗಾವಣೆ
First published: