ಲಾಕ್​ಡೌನ್​ನಿಂದಾಗಿ ರಾಜ್ಯದ ಸಾರಿಗೆ ನಿಗಮಗಳಿಗೆ ಆರ್ಥಿಕ ಸಂಕಷ್ಟ; 1.25 ಲಕ್ಷ ನೌಕರರಿಗಿಲ್ಲ ವೇತನ?

Karnataka Lockdown Effect: ಬಿಎಂಟಿಸಿ ಒಂದರಲ್ಲೇ ಸಂಬಳ ನೀಡಲು ತಿಂಗಳಿಗೆ 65 ಕೋಟಿ ರೂ. ಬೇಕು. ನಾಲ್ಕು ನಿಗಮಕ್ಕೆ ಸಂಬಳ ನೀಡಲು 130 ಕೋಟಿ ರೂ. ಹಣ ಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಏ. 16): ಲಾಕ್​ಡೌನ್​ನಿಂದಾಗಿ ದೇಶದ ಖಾಸಗಿ ಸಂಸ್ಥೆಗಳು, ಸರ್ಕಾರದ ಇಲಾಖೆಗಳು, ಸಾರಿಗೆ ಸಂಸ್ಥೆಗಳು, ಅಂಗಡಿಗಳು ಭಾರೀ ನಷ್ಟವನ್ನು ಅನುಭವಿಸುತ್ತಿವೆ. ಇದಕ್ಕೆ ಕರ್ನಾಟಕವೂ ಹೊರತಾಗಿಲ್ಲ. ರಾಜ್ಯದ ಸಾರಿಗೆ ಸಂಸ್ಥೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು, 1 ತಿಂಗಳಿಗೆ ಸಂಬಳ ನೀಡಲು 130 ಕೋಟಿ ರೂ. ಬೇಕು. ಇಷ್ಟು ದೊಡ್ಡ ಮೊತ್ತವಿಲ್ಲದ ಕಾರಣ  ಸಾರಿಗೆ ನಿಗಮಗಳ ನೌಕಕರಿಗೆ ಸಂಬಳ ನೀಡುವುದು ಕಷ್ಟಕರವಾಗಿದೆ.

ಈ ಹಿನ್ನೆಲೆಯಲ್ಲಿ ಕೆಎಸ್​ಆರ್​ಟಿಸಿ, ಬಿಎಂಟಿಸಿ, ಎನ್​ಇಕೆಆರ್​ಟಿಸಿ, ಎನ್​ಡಬ್ಲುಕೆಆರ್​ಟಿಸಿ ಸಾರಿಗೆ ನಿಗಮನಗಳ 1.25 ಲಕ್ಷ ನೌಕರರಿಗೆ ಸಂಬಳ ಸಿಗುವುದು ಅನುಮಾನ ಎಂಬ ಮಾತುಗಳೂ ಕೇಳಿಬರುತ್ತಿವೆ. ಆರ್ಥಿಕ ಹೊಡೆತದಿಂದ ಈ ನಾಲ್ಕು ನಿಗಮಗಳ ನೌಕರರಿಗೆ ಸಂಬಳ ನೀಡಲು ಪರದಾಟ ನಡೆಸಲಾಗುತ್ತಿದೆ.

ಬಿಎಂಟಿಸಿ ಒಂದರಲ್ಲೇ ಸಂಬಳ ನೀಡಲು ತಿಂಗಳಿಗೆ 65 ಕೋಟಿ ರೂ. ಬೇಕು. ನಾಲ್ಕು ನಿಗಮಕ್ಕೆ ಸಂಬಳ ನೀಡಲು 130 ಕೋಟಿ ರೂ.ನಷ್ಟು ಹಣ ಬೇಕು. ಈಗಾಗಲೇ ಈ ಬಗ್ಗೆ ಸರ್ಕಾರಕ್ಕೆ ಕೆಎಸ್​ಆರ್​ಟಿಸಿ ಅಧಿಕಾರಿಗಳು ಪತ್ರ ಬರೆದಿದ್ದಾರೆ. ಸರ್ಕಾರ ಹಣ ಕೊಡದಿದ್ದರೆ ಈ ತಿಂಗಳ ಸಂಬಳ ನೀಡುವುದು ಕಷ್ಟವಾದ್ದರಿಂದ ರಾಜ್ಯ ಸಾರಿಗೆ ನೌಕರರು ಆತಂಕದಲ್ಲಿದ್ದಾರೆ.

ಇದನ್ನೂ ಓದಿ: ಬದಲಾದ ಬಿಬಿಎಂಪಿ ಆದೇಶ: ಬೆಂಗಳೂರಿನಲ್ಲಿ 32 ವಾರ್ಡ್​​ಗಳನ್ನು ಹಾಟ್​ಸ್ಪಾಟ್​​​ ಎಂದು ಮತ್ತೆ ಘೋಷಣೆ

ರಾಜ್ಯ ಸರ್ಕಾರ ಹಣ ಕೊಟ್ಟರೆ ಮಾತ್ರ ಸಾರಿಗೆ ನೌಕರರಿಗೆ ಈ ಸಂಬಳ ನೀಡಲು ಸಾಧ್ಯ. ಇಲ್ಲದಿದ್ದರೆ ನಿಗಮದಲ್ಲಿ ಅಷ್ಟು ದೊಡ್ಡ ಮೊತ್ತದ ಹಣ ಇಲ್ಲದ ಕಾರಣ ನೌಕರರಿಗೆ ಸಂಬಳ ಸಿಗುವುದು ಅನುಮಾನ ಎನ್ನಲಾಗುತ್ತಿದೆ. ಪ್ರಯಾಣಿಕರಿಂದ ಬರುವ ಟಿಕೆಟ್ ಹಣವನ್ನೇ ನಂಬಿಕೊಂಡು ಇದುವರೆಗೂ ಸಾರಿಗೆ ನಿಗಮಗಳು ನೌಕರರಿಗೆ ಸಂಬಳ ನೀಡುತ್ತಿದ್ದವು. ಈಗ ಒಂದು ತಿಂಗಳಿನಿಂದ ಟಿಕೆಟ್ ಕಲೆಕ್ಷನ್ ಆಗಿಲ್ಲ. ಪ್ರತಿ ನಿತ್ಯ ನಾಲ್ಕು ನಿಗಮಗಳಿಂದ 1 ಕೋಟಿ ಪ್ರಯಾಣಿಕರು ಓಡಾಡುತ್ತಿದ್ದರು ಕೊರೋನಾ ಲಾಕ್​ಡೌನ್ ಹಿನ್ನೆಲೆ ಪ್ರಯಾಣಿಕರ ಸಂಚಾರವಿಲ್ಲದೆ ಟಿಕೆಟ್ ಸಂಗ್ರಹವೂ ನಿಂತುಹೋಗಿದೆ.

 
First published: