HOME » NEWS » Coronavirus-latest-news » LOCKDOWN EFFECT UBER LAYS OFF 3700 EMPLOYEES ON ZOOM VIDEO CALL SCT

Uber: ಕೊರೋನಾ ಸಂಕಷ್ಟ; ಜೂಮ್ ಕಾಲ್​ ಮೂಲಕ 3,700 ಉಬರ್​ ಉದ್ಯೋಗಿಗಳ ವಜಾ

Uber News: ಇಂದು ನಿಮ್ಮ ಕೆಲಸದ ಕೊನೆಯ ದಿನ, ನಾಳೆಯಿಂದ ಕೆಲಸಕ್ಕೆ ಬರಬೇಡಿ ಎಂದು ಉಬರ್ ಅಧಿಕಾರಿಗಳು ಜೂಮ್ ಆ್ಯಪ್ ಮೂಲಕ 3,700 ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ.

news18-kannada
Updated:May 15, 2020, 6:13 PM IST
Uber: ಕೊರೋನಾ ಸಂಕಷ್ಟ; ಜೂಮ್ ಕಾಲ್​ ಮೂಲಕ 3,700 ಉಬರ್​ ಉದ್ಯೋಗಿಗಳ ವಜಾ
ಊಬರ್ ಟ್ಯಾಕ್ಸಿ
  • Share this:
ನವದೆಹಲಿ (ಮೇ 15): ಕೊರೋನಾ ನಿಯಂತ್ರಣಕ್ಕಾಗಿ ದೇಶದೆಲ್ಲೆಡೆ ಲಾಕ್​ಡೌನ್​ ಘೋಷಿಸಲಾಗದೆ. ಇದರಿಂದಾಗಿ ಅನೇಕ ವಲಯದ ಉದ್ಯೋಗಿಗಳಿಗೆ ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಇದೀಗ ಉಬರ್ ಕ್ಯಾಬ್​ ಸಂಸ್ಥೆಯ ಉದ್ಯೋಗಿಗಳ ಸ್ಥಿತಿಯೂ ಅದೇ ರೀತಿ ಆಗಿದೆ. ಲಾಕ್​ಡೌನ್​ನಿಂದಾಗಿ ಯಾರೂ ಮನೆಯಿಂದ ಹೊರಬಾರದ ಸ್ಥಿತಿ ಇರುವುದರಿಂದ ಕ್ಯಾಬ್​ಗಳ ಸಂಚಾರವೂ ಸ್ಥಗಿತಗೊಂಡಿದೆ. ಇದರಿಂದ ಉಬರ್ ಸಂಸ್ಥೆ ನಷ್ಟಕ್ಕೀಡಾಗಿದೆ. ಹೀಗಾಗಿ, ಏಕಾಏಕಿ ತನ್ನ 3,700 ಉದ್ಯೋಗಿಗಳನ್ನು ಒಬರ್ ವಜಾಗೊಳಿಸಿದೆ.

ಜೂಮ್ ಕಾಲ್​ ಮೂಲಕ ತನ್ನ 3,700 ಉದ್ಯೋಗಿಗಳನ್ನು ಉಬರ್ ಕೆಲಸದಿಂದ ತೆಗೆದುಹಾಕಿದೆ. ಇದರಿಂದಾಗಿ ಲಾಕ್​ಡೌನ್​ಕಷ್ಟದ ನಡುವೆ ಉಬರ್ ನೌಕರರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂದು ನಿಮ್ಮ ಕೆಲಸದ ಕೊನೆಯ ದಿನ, ನಾಳೆಯಿಂದ ಕೆಲಸಕ್ಕೆ ಬರಬೇಡಿ ಎಂದು ಉಬರ್ ಅಧಿಕಾರಿಗಳು ಜೂಮ್ ಆ್ಯಪ್ ಮೂಲಕ 3,700 ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ. ಜೂಮ್ ಆ್ಯಪ್ ಮೂಲಕ ಉಬರ್‌ ಗ್ರಾಹಕ ಸೇವೆಯ ಮುಖ್ಯಸ್ಥ ರಫಿನ್ ಚಾವೆಲಿಯೊ ತಮ್ಮ ಉದ್ಯೋಗಿಗಳೊಂದಿಗೆ ಮಾತನಾಡಿದ್ದು, ಆರ್ಥಿಕ ಸಂಕಷ್ಟದ ಕಾರಣಕ್ಕೆ 3,700 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ: ದುಬೈ ಪ್ರಯಾಣಿಕರಿಂದ ಮಂಗಳೂರಲ್ಲಿ ಕೊರೋನಾ ಭೀತಿ ಹೆಚ್ಚಳ; ಜಿಲ್ಲಾಡಳಿತಕ್ಕೆ ತಲೆನೋವಾದ ಸುರತ್ಕಲ್ ಸೋಂಕಿತೆ

ಉಬರ್ ಸಂಸ್ಥೆಯ ಏಕಾಏಕಿ ನಡೆಗೆ ಉದ್ಯೋಗಿಗಳು ಆಕ್ರೋಶ ಹೊರಹಾಕಿದ್ದಾರೆ. ಜೂಮ್ ವಿಡಿಯೋ ಕಾಲ್​ ಮೂಲಕ ಮಾಹಿತಿ ನೀಡಿರುವ ಉಬರ್ ಸಂಸ್ಥೆ ಅಧಿಕಾರಿ, ಈ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಾದ ಸ್ಥಿತಿ ಬಂದಿರುವುದಕ್ಕೆ ಬೇಸರವಾಗುತ್ತಿದೆ. ನಿಮ್ಮಿಂದ ಉಬರ್ ಸಂಸ್ಥೆಗೆ ಬಹಳ ಅನುಕೂಲವಾಗಿದೆ. ಆದರೆ, ಈಗ ಅನಿವಾರ್ಯವಾಗಿ 3,700 ಸಿಬ್ಬಂದಿಯನ್ನು ಇಂದಿನಿಂದಲೇ ವಜಾಗೊಳಿಸುತ್ತಿದ್ದೇವೆ ಎಂದು 3 ನಿಮಿಷಗಳ ವಿಡಿಯೋ ಕಾಲ್​ ಮೂಲಕ ತಿಳಿಸಿದ್ದಾರೆ.
Youtube Video
First published: May 15, 2020, 6:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories