ಐದನೇ ದಿನಕ್ಕೆ ಕಾಲಿಟ್ಟ ಲಾಕ್​​ ಡೌನ್; ಕೆ. ಆರ್. ಮಾರ್ಕೆಟ್​ಗೆ ಬರುವ ಎಲ್ಲ ದಾರಿಗಳು ಬಂದ್!

ಕೆ. ಆರ್. ಮಾರುಕಟ್ಟೆಗೆ ಬರುವ ಎಲ್ಲ ದಾರಿಗಳನ್ನು ಪೊಲೀಸರು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ಸದಾ ನೂರಾರು ವ್ಯಾಪಾರಸ್ಥರು, ಜನಸಂದಣಿಯಿಂದ ಇರುತ್ತಿದ್ದ ಮಾರುಕಟ್ಟೆ ಇಂದು ಸಂಪೂರ್ಣ ಸ್ತಬ್ದವಾಗಿದೆ.

ಕೆ. ಆರ್. ಮಾರುಕಟ್ಟೆ

ಕೆ. ಆರ್. ಮಾರುಕಟ್ಟೆ

  • Share this:
ಕೊರೋನಾ ವೈರಸ್ ನಿಂದ ದೇಶವನ್ನು ರಕ್ಷಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಭಾರತ ಲಾಕ್ ಡೌನ್ ಐದನೇ ದಿನಕ್ಕೆ ಕಾಲಿಟ್ಟಿದೆ. ಆದರೆ, ಕರ್ನಾಟಕದಲ್ಲಿ ಕೊರೋನಾ ವೈರಸ್​ ಅಟ್ಟಹಾಸ ಮುಂದುವರೆಯುತ್ತಲೇ ಇದೆ. ನಿನ್ನೆ ರಾಜ್ಯದಲ್ಲಿ ಹೊಸದಾಗಿ ಒಟ್ಟು 12 ಕೋವಿಡ್​​-19 ಪಾಸಿಟಿವ್​​ ಕೇಸುಗಳು ಪತ್ತೆಯಾಗಿವೆ. ಸದ್ಯ ಇಲ್ಲಿಯವರೆಗಿನ ಸೋಂಕಿತರ ಸಂಖ್ಯೆ 76ಕ್ಕೆ ಏರಿಯಾಗಿದೆ. ಈ ಪೈಕಿ ಹೆಚ್ಚು ಕೇಸುಗಳು ಬೆಂಗಳೂರಿನಲ್ಲೇ ಕಂಡು ಬಂದಿವೆ ಎಂದು ರಾಜ್ಯ ಸರ್ಕಾರ ಮಾಹಿತಿ ಬಿಡುಗಡೆ ಮಾಡಿದೆ.

ಬೆಂಗಳೂರಿನಲ್ಲಿ ಹೊರಗಡೆ ಗುಂಪಾಗಿ ಓಡಾಡಲು, ಒಂದೇ ಕಡೆ ಹೆಚ್ಚು ಜನರು ಸೇರಲು ನಿರ್ಬಂಧ ಹೇರಿದ್ದರೂ ಜನಸಂದಣಿಯೇನೂ ಕಡಿಮೆಯಾಗಿಲ್ಲ. ಅದರಲ್ಲೂ ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣು-ಹೂವು ಕೊಳ್ಳಲು ಜನರು ಗುಂಪು-ಗುಂಪಾಗಿ ಬರುತ್ತಿದ್ದಾರೆ.

ಕೊರೋನಾ ತಡೆಗೆ ಕ್ರಮ: ಇಂದಿನಿಂದ ಉಡುಪಿಯಲ್ಲಿ ಬೆಳಿಗ್ಗೆ 7ರಿಂದ 11ರವರೆಗೆ ಮಾತ್ರ ಅಂಗಡಿಗಳು ಓಪನ್

ಈ ಹಿನ್ನೆಲೆಯಲ್ಲಿ ಕೆ. ಆರ್. ಮಾರುಕಟ್ಟೆಗೆ ಬರುವ ಎಲ್ಲ ದಾರಿಗಳನ್ನು ಪೊಲೀಸರು ಸಂಪೂರ್ಣವಾಗಿ ಬಂದ್ ಮಾಡಿದ್ದಾರೆ. ಸದಾ ನೂರಾರು ವ್ಯಾಪಾರಸ್ಥರು, ಜನಸಂದಣಿಯಿಂದ ಇರುತ್ತಿದ್ದ ಮಾರುಕಟ್ಟೆ ಇಂದು ಸಂಪೂರ್ಣ ಸ್ತಬ್ದವಾಗಿದೆ. ಭಾನುವಾರವಾಗಿದ್ದರೂ ಸಿಟಿ ಮಾರ್ಕೆಟ್ ಬಿಕೋ ಎನ್ನುತ್ತಿದೆ.

ಇನ್ನೂ ಈಗಾಗಲೇ ಕೆ. ಆರ್. ಮಾರುಕಟ್ಟೆಯ ಸ್ವಲ್ಪ ಭಾಗದ ಅಂಗಡಿಗಳನ್ನು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನಕ್ಕೆ ಶಿಫ್ಟ್​ ಮಾಡಲಾಗಿದೆ. ಆದರೆ, ಬಿಬಿಎಂಪಿಯ ತುರ್ತು ನಿರ್ಧಾರದಿಂದ ಈ ಮೈದಾನ ಮತ್ತೊಂದು ಸಂತೆ ಮಾರುಕಟ್ಟೆಯಾಗಿ ಪರಿವರ್ತನೆಯಾಗಿದೆ.

ಇಂದು ಸಿಎಂ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ; ಕೊರೋನಾ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಹತ್ವದ ಚರ್ಚೆ

ಲಾಕ್​ಡೌನ್​ಗೆ ಕರೆ ನೀಡಿರುವುದರಿಂದ ಜನರಿಗೆ ತರಕಾರಿ ಸಂಗ್ರಹಿಸಿಟ್ಟುಕೊಳ್ಳಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಬಿಬಿಎಂಪಿ ಹೋಲ್​ಸೇಲ್ ತರಕಾರಿ ಮಾರಾಟಕ್ಕೆ ಅನುವು ಮಾಡಿಕೊಟ್ಟಿತು. ಆದರೆ, ಇದರ ಹಿಂದಿನ ಉದ್ದೇಶ ಅರ್ಥ ಮಾಡಿಕೊಳ್ಳದ ವ್ಯಾಪಾರಿಗಳು ಗುಂಪು ಸೇರಿಸಿಕೊಂಡು, ಗಲಾಟೆಯೆಬ್ಬಿಸಿದ್ದಾರೆ. ತುರ್ತಾಗಿ ಕೆ.ಆರ್​. ಮಾರ್ಕೆಟ್​ನ ಅಂಗಡಿಗಳನ್ನು ಅವೈಜ್ಞಾನಿಕವಾಗಿ ಮೈದಾನಕ್ಕೆ ಶಿಫ್ಟ್​ ಮಾಡುವ ಮೂಲಕ ಬಿಬಿಎಂಪಿ ಅಧಿಕಾರಿಗಳು ಯಡವಟ್ಟು ಮಾಡಿಕೊಂಡಿದ್ದಾರೆ ಎಂಬ ಆರೋಪ ಸ್ಥಳೀಯರಿಂದ ಕೇಳಿಬರುತ್ತಿದೆ.

ಮೈದಾನದಲ್ಲಿ ವ್ಯಾಪಾರಿಗಳ ಬೇಜವಾಬ್ದಾರಿಯುತ ನಡವಳಿಕೆ ಬಗ್ಗೆ ತಿಳಿದು ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿಸುಬ್ರಹ್ಮಣ್ಯ ನ್ಯಾಷನಲ್ ಕಾಲೇಜು ಮೈದಾನಕ್ಕೆ ಆಗಮಿಸಿ ವಾಸ್ತವ ಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.
First published: