HOME » NEWS » Coronavirus-latest-news » LOCKDOWN CLEARANCE FROM TODAY RETURNING TO NORMAL LIFE IN BANGALORE MAK

ಇಂದಿನಿಂದ ಲಾಕ್‌ಡೌನ್‌ ತೆರವು; ಸಹಜ ಸ್ಥಿತಿಗೆ ಮರಳುತ್ತಿರುವ ಬೆಂಗಳೂರಿನ ಜನಜೀವನ

ನಗರದ ವಿವಿಧ ಕಡೆಗಳಲ್ಲಿ ವಾಹನ ಸಂಚಾರ ಎಂದಿನಂತೆ ಆರಂಭವಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲೂ ಸಹಜ ರೀತಿಯಲ್ಲಿ ವಾಹನ ಸಂಚಾರ ಆರಂಭವಾಗಿದ್ದು, ಟೋಲ್‌ಗಳಲ್ಲಿ ಯಥಾವತ್ತಾಗಿ ಟೋಲ್ ಹಣ ಸಂಗ್ರಹಿಸಲಾಗುತ್ತಿದೆ. ಲಾಕ್‌ಡೌನ್‌ನಿಂದಾಗಿ ಬೆಂಗಳೂರಿನ ಎಲ್ಲಾ ಫ್ಲೈಓವರ್‌ಗಳನ್ನು ಬ್ಯಾರಿಕೇಡ್‌ ಹಾಕಿ ಬಂದ್ ಮಾಡಲಾಗಿತ್ತು. ಆದರೆ, ಇದೀಗ ಎಲ್ಲಾ ಫ್ಲೈಓವರ್‌ಗಳನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

news18-kannada
Updated:July 22, 2020, 11:08 AM IST
ಇಂದಿನಿಂದ ಲಾಕ್‌ಡೌನ್‌ ತೆರವು; ಸಹಜ ಸ್ಥಿತಿಗೆ ಮರಳುತ್ತಿರುವ ಬೆಂಗಳೂರಿನ ಜನಜೀವನ
ಬೆಂಗಳೂರು-ತುಮಕೂರು ರಸ್ತೆಯಲ್ಲಿ ಎಂದಿನಂತೆ ಆರಂಭವಾಗಿರುವ ವಾಹನ ಸಂಚಾರ.
  • Share this:
ಬೆಂಗಳೂರು (ಜುಲೈ 22); ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳಿನಿಂದ ಕೊರೋನಾ ನಿಯಂತ್ರಣಕ್ಕೆ ಸಿಗದಷ್ಟು ಅಧಿಕವಾಗುತ್ತಿದೆ. ಸೋಂಕಿತರ ಸಂಖ್ಯೆ ಪ್ರತಿನಿತ್ಯ 2,000 ಗಡಿ ದಾಟುತ್ತಿದೆ. ಹೀಗಾಗಿ ಕೊರೋನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ನಗರದಲ್ಲಿ ಒಂದು ವಾರಗಳ ಕಾಲ ಲಾಕ್‌ಡೌನ್‌ ಘೋಷಣೆ ಮಾಡಲಾಗಿತ್ತು. ಆದರೆ, ಇಂದು ಲಾಕ್‌ಡೌನ್ ಮುಕ್ತಾಯವಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ವಾಹನ ಸಂಚಾರವೂ ಎಂದಿನಂತೆ ಆರಂಭವಾಗಿದೆ.

ಬೆಂಗಳೂರಿನಲ್ಲೇ ಅತಿಹೆಚ್ಚು ಜನ ಸಂದಣಿ ಹೊಂದಿರುವ ಸ್ಥಳ ಎಂದರೆ ಕೆ.ಆರ್‌. ಮಾರ್ಕೆಟ್‌. ಲಾಕ್‌ಡೌನ್‌ ನಿಮಿತ್ತು ಈ ಭಾಗದಲ್ಲಿ ಕಳೆದ ಒಂದು ವಾರಗಳಿಂದ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿತ್ತು. ಆದರೆ, ಪೊಲೀಸರು ಇಂದು ಬೆಳಗ್ಗೆ ವಾಹನ ಸಂಚಾರ ಮತ್ತು ಮಾರುಕಟ್ಟೆ ವ್ಯವಹಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.

ಇನ್ನೂ ನಗರದ ವಿವಿಧ ಕಡೆಗಳಲ್ಲಿ ವಾಹನ ಸಂಚಾರ ಎಂದಿನಂತೆ ಆರಂಭವಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲೂ ಸಹಜ ರೀತಿಯಲ್ಲಿ ವಾಹನ ಸಂಚಾರ ಆರಂಭವಾಗಿದ್ದು, ಟೋಲ್‌ಗಳಲ್ಲಿ ಯಥಾವತ್ತಾಗಿ ಟೋಲ್ ಹಣ ಸಂಗ್ರಹಿಸಲಾಗುತ್ತಿದೆ. ಲಾಕ್‌ಡೌನ್‌ನಿಂದಾಗಿ ಬೆಂಗಳೂರಿನ ಎಲ್ಲಾ ಫ್ಲೈಓವರ್‌ಗಳನ್ನು ಬ್ಯಾರಿಕೇಡ್‌ ಹಾಕಿ ಬಂದ್ ಮಾಡಲಾಗಿತ್ತು. ಆದರೆ, ಇದೀಗ ಎಲ್ಲಾ ಫ್ಲೈಓವರ್‌ಗಳನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ಖಾಲಿ ಖಾಲಿಯಾಗಿದೆ ಬಿಎಂಟಿಸಿ ಬಸ್‌ ನಿಲ್ದಾಣ:

ಇಂದು ಲಾಕ್‌ಡೌನ್‌ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಬಸ್‌ಗಳು ಪ್ರಯಾಣಿಕರ ಸೇವೆಗೆ ಲಭ್ಯವಾಗಲಿದೆ ಎಂದು ಬಿಎಂಟಿಸಿ ತಿಳಿಸಿತ್ತು. ಆದರೆ, ಏರ್‌ಪೋರ್ಟ್‌ ಬಸ್‌ಗಳನ್ನು ಹೊರತುಪಡಿಸಿ ಬೇರೆ ಯಾವ ಬಸ್‌ಗಳು ಬಸ್‌ ನಿಲ್ದಾಣಕ್ಕೆ ಆಗಮಿಸಿರಲಿಲ್ಲ. ಹೀಗಾಗಿ ಇಡೀ ಬಸ್‌ ನಿಲ್ದಾಣ ಖಾಲಿ ಖಾಲಿಯಾಗಿತ್ತು. ಕೆಲ ಪ್ರಯಾಣಿಕರು ಬಸ್‌ ಕಾದು ಬಸ್‌ ಬಾರದ ಕಾರಣ ಕೊನೆಗೆ ಆಟೋದಲ್ಲಿ ತೆರಳೀದ ದೃಶ್ಯಗಳು ಕಂಡುಬಂದಿದೆ.

ಲಾಲ್‌ಬಾಗ್‌ನಲ್ಲಿ ಎಂದಿನಂತೆ ವಾಯು ವಿಹಾರ:

ಲಾಕ್‌ಡೌನ್‌ ತೆರವಾಗಿರುವ ಹಿನ್ನೆಲೆಯಲ್ಲಿ ಸಸ್ಯಕಾಶಿ ಲಾಲ್‌‌ಬಾಗ್‌ನಲ್ಲಿ ಎಂದಿನಂತೆ ಜನರ ವಾಯು ವಿಹಾರ ಆರಂಭವಾಗಿದೆ. ಅಧಿಕ ಸಂಖ್ಯೆಯಲ್ಲಿ ಜನ ಮತ್ತೆ ಲಾಲ್‌ಬಾಗ್‌ ಕಡೆಗೆ ಮುಖ ಮಾಡುತ್ತಿದ್ದಾರೆ.
Youtube Video


ಮುಂಜಾಗ್ರತಾ ಕ್ರಮವಾಗಿ ವಾಯುವಿಹಾರಕ್ಕೆ ಬರುವ ಪ್ರತಿಯೊಬ್ಬರಿಗೂ ಟೆಂಪರೇಚರ್ ಚೆಕಪ್ ಮಾಡುತ್ತಿರುವ ಸಿಬ್ಬಂದಿಗಳು, ಪ್ರವೇಶದ್ವಾರದಲ್ಲಿಯೇ ತಪಾಸಣೆ ಮಾಡಿ ಒಳಬಿಡುತ್ತಿದ್ದಾರೆ. ಮಾಸ್ಕ್‌ ಇದ್ದವರಿಗೆ ಮಾತ್ರ ಒಳಗೆ ಅನುಮತಿಸಲಾಗುತ್ತಿದೆ. ಲಾಕ್‌ಡೌನ್‌ನಿಂದಾಗಿ ಒಂದು ವಾರದಿಂದ ಲಾಲ್‌ಬಾಗನ್ನು ತೋಟಗಾರಿಕಾ ಇಲಾಖೆ ಕ್ಲೋಸ್ ಮಾಡಿತ್ತು.
Published by: MAshok Kumar
First published: July 22, 2020, 8:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories