HOME » NEWS » Coronavirus-latest-news » LOCKDOWN 5 0 AMIT SHAH DISCUSS WITH ALL CHIEF MINISTERS ABOUT NEXT STEP AFTER MAY 31ST SNVS

Lockdown 5.0: ಲಾಕ್​ಡೌನ್ ವಿಸ್ತರಣೆ ಬಗ್ಗೆ ಸಿಎಂಗಳ ಜೊತೆ ಅಮಿತ್ ಶಾ ಚರ್ಚೆ

ಗೃಹ ಸಚಿವ ಅಮಿತ್ ಶಾ ಮತ್ತು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಸಂಗ್ರಹ ಮಾಡಿರುವ ಮಾಹಿತಿಗಳೆಲ್ಲವನ್ನು ಇಂದು ಪ್ರಧಾನ ಮಂತ್ರಿಗಳ ಕಚೇರಿಗೆ ಕಳುಹಿಸಲಾಗುತ್ತದೆ.

news18
Updated:May 29, 2020, 9:17 AM IST
Lockdown 5.0: ಲಾಕ್​ಡೌನ್ ವಿಸ್ತರಣೆ ಬಗ್ಗೆ ಸಿಎಂಗಳ ಜೊತೆ ಅಮಿತ್ ಶಾ ಚರ್ಚೆ
ಅಮಿತ್​ ಶಾ
  • News18
  • Last Updated: May 29, 2020, 9:17 AM IST
  • Share this:
ನವದೆಹಲಿ(ಮೇ 29): ನಾಲ್ಕನೇ ಹಂತದ ಲಾಕ್​ಡೌನ್ ಮೇ 31ಕ್ಕೆ ಮುಕ್ತಾಯಗೊಳ್ಳುತ್ತಿದೆ. ಐದನೇ ಹಂತದ ಲಾಕ್​ಡೌನ್ ಸ್ವರೂಪ ಹೇಗಿರಬೇಕೆಂಬ ತಯಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ‌ ಸಚಿವ ಅಮಿತ್ ಶಾ ನಿನ್ನೆ ರಾತ್ರಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ನೂತನ ಲಾಕ್​ಡೌನ್ ಬಗ್ಗೆ ಅಭಿಪ್ರಾಯ ಕಲೆಹಾಕಿದ್ದಾರೆ.

ನಿನ್ನೆ ರಾತ್ರಿ ಎಲ್ಲಾ‌ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿದ ಅಮಿತ್ ಶಾ ಲಾಕ್​ಡೌನ್ ಬಗ್ಗೆ ಮೇ 31ರ ಬಳಿಕ ಯಾವ ರೀತಿಯ ನಿಯಮಾವಳಿಗಳಿರಬೇಕು? ನೂತನ ಲಾಕ್​ಡೌನ್ ಸ್ವರೂಪ ಹೇಗಿರಬೇಕು? ಅದನ್ನು ಹೇಗೆ ಜಾರಿ ಮಾಡಬೇಕು ಎಂಬ ಸಲಹೆಗಳನ್ನು ಕೇಳಿದರು ಎಂದು ಕೇಂದ್ರ ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ. ಅಮಿತ್ ಶಾ ಜೊತೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿಗಳು ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದಲ್ಲದೆ ಕೇಂದ್ರ ಸರ್ಕಾರದ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರು ಈ ಬಾರಿಯ ಲಾಕ್​ಡೌನ್ ನಗರ ಕೇಂದ್ರಿತವಾಗಿರಲಿರುವ ಕಾರಣ ದೇಶದ 13 ನಗರಗಳ ನಗರಪಾಲಿಕೆ, ಮಹಾನಗರ ಪಾಲಿಕೆಗಳ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳೊಂದಿಗೆ ಒಟ್ಟಾರೆ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಇದನ್ನೂ ಓದಿ: ವಲಸೆ ಕಾರ್ಮಿಕರ ಸಂಕಷ್ಟಕ್ಕೆ ರಾಜ್ಯ-ಕೇಂದ್ರ ಸರ್ಕಾರಗಳು ಜರುಗಿಸಿದ ಕ್ರಮವೇನು?; ಸುಪ್ರೀಂ ಪ್ರಶ್ನೆ

ಗೃಹ ಸಚಿವ ಅಮಿತ್ ಶಾ ಮತ್ತು ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಸಂಗ್ರಹ ಮಾಡಿರುವ ಮಾಹಿತಿಗಳೆಲ್ಲವನ್ನು ಇಂದು ಪ್ರಧಾನ ಮಂತ್ರಿಗಳ ಕಚೇರಿಗೆ ಕಳುಹಿಸಲಾಗುತ್ತದೆ. ಅಮಿತ್ ಶಾ ಕೂಡ ಪ್ರಧಾನಿ ಮೋದಿ ಭೇಟಿ ಮಾಡಿ ಮುಖ್ಯಮಂತ್ರಿಗಳ ಅಭಿಪ್ರಾಯವನ್ನು ತಿಳಿಸಲಿದ್ದಾರೆ. ಈ ಎಲ್ಲಾ ಮಾಹಿತಿಗಳನ್ನು ಆಧರಿಸಿ ಕೇಂದ್ರ ಸರ್ಕಾರ ಕ್ರಮ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ವರದಿ: ಧರಣೀಶ್ ಬೂಕನಕೆರೆ
First published: May 29, 2020, 7:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories