ಯಾದಗಿರಿಗೆ ಆಗಮಿಸಿದ ಶ್ರಮಿಕ್ ವಿಶೇಷ ರೈಲು; ಕೊನೆಗೂ ತವರು ಸೇರಿದ ಕಾರ್ಮಿಕರು..!

Shramik Train: ಸಾರಿಗೆ ಸಂಸ್ಥೆಯಿಂದ 55 ಬಸ್ ಗಳು ವ್ಯವಸ್ಥೆ ಮಾಡಲಾಗಿತ್ತು. ಆಯಾ ಜಿಲ್ಲೆಗೆ ಬಸ್ ಗಳ ಮೂಲಕ ಕಾರ್ಮಿಕರನ್ನು ಕಳುಹಿಸಲಾಗಿತ್ತು. ಯಾದಗಿರಿ ಜಿಲ್ಲೆಗೆ 661 ಕಾರ್ಮಿಕರು ಬಂದಿದ್ದು ಬಸ್ ಗಳ ಮೂಲಕ ಕ್ವಾರೆಂಟೆನ್ ಕೇಂದ್ರಕ್ಕೆ ಕಳುಹಿಸಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಯಾದಗಿರಿ (ಮೇ 18): ಲಾಕ್​ಡೌನ್​ನಿಂದ ಯಾದಗಿರಿ ಸೇರಿ ಸುತ್ತಮುತ್ತಲ ಜಿಲ್ಲೆಯ ಕಾರ್ಮಿಕರು ಮಹಾರಾಷ್ಟ್ರದಲ್ಲಿ ಸಿಲುಕಿದ್ದರು. ಇಂಥ ಕಾರ್ಮಿಕರಿಗಾಗಿ ವಿಶೇಷ ಶ್ರಮಿಕ್​​ ರೈಲಿನ ವ್ಯವಸ್ಥೆ ಮಾಡಲಾಗಿತ್ತು.  ಈ ಟ್ರೈನ್​ನಲ್ಲಿ 1,500 ಕಾರ್ಮಿಕರು ತಮ್ಮ ಜಿಲ್ಲೆಗೆ ಮರಳಿದ್ದಾರೆ.

  ಸಿಂಧೂದುರ್ಗದಿಂದ ಶ್ರಮಿಕ್ ಟ್ರೈನ್ ಮೂಲಕ ರಾಜ್ಯದ ಯಾದಗಿರಿ, ರಾಯಚೂರು,ಕಲಬುರಗಿ, ವಿಜಯಪುರ, ಬೀದರ,ಕೊಪ್ಪಳ, ಬಾಗಲಕೋಟೆ, ಮಂಗಳೂರು, ಉಡುಪಿ, ಧಾರವಾಡ ಮೊದಲಾದ ಜಿಲ್ಲೆಯ 1500 ವಲಸೆ ಕಾರ್ಮಿಕರು ಆಗಮಿಸಿದ್ದಾರೆ.

  ರೈಲ್ವೆ ನಿಲ್ದಾಣದಲ್ಲಿ ಟ್ರೈನ್ ಒಳಗಡೆ ಪ್ರವೇಶ ಮಾಡುವ ಮುನ್ನ  ಮಹಾರಾಷ್ಟ್ರದಲ್ಲಿ ಕೂಡ ಸಿಂಧೂದುರ್ಗದ ಜಿಲ್ಲಾಡಳಿತ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಟ್ರೈನ್ ಒಳಗಡೆ ಹೋಗಲು ಅವಕಾಶ ಕಲ್ಪಿಸಿತ್ತು. ಕೇಂದ್ರ ಸರಕಾರದ ಸಹಕಾರದೊಂದಿಗೆ ಮಹಾರಾಷ್ಟ್ರ ಸರಕಾರ ಕೂಡ ಕಾರ್ಮಿಕರನ್ನು ಸುರಕ್ಷಿತವಾಗಿ ಯಾದಗಿರಿ ತೆರಳಲು ಅಗತ್ಯ ಸೌಕರ್ಯದೊಂದಿಗೆ ಅನುಕೂಲ ಮಾಡಿತ್ತು.

  ಇದನ್ನೂ ಓದಿ: ಖರ್ಚಿಗೂ ಹಣ ಇಲ್ಲದಂತಾಗಿದೆ; ಶಾಕಿಂಗ್ ಸುದ್ದಿ ಬಿಚ್ಚಿಟ್ಟ ನಟಿ ಶ್ರುತಿ ಹಾಸನ್

  ಯಾದಗಿರಿಗೆ ಆಗಮಿಸಿದ ಕಾರ್ಮಿಕರು ..!:

  ಯಾದಗಿರಿ,ಬೀದರ,ರಾಯಚೂರ,ಮಂಗಳೂರು, ಧಾರವಾಡ ಹಾಗೂ ಬೆರೆ ಜಿಲ್ಲೆಯ ಎಲ್ಲಾ 1500 ಕಾರ್ಮಿಕರನ್ನು ಶ್ರಮಿಕ್ ವಿಶೇಷ ರೈಲಿನ ಮೂಲಕ ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಕರೆತರಲಾಯಿತು.

  ಬೆಳಿಗ್ಗೆ 8 ಗಂಟೆಗೆ ಆಗಮಿಸಿದ ಟ್ರೈನ್ ಕೆಲ ಕಾರಣಾಂತರದಿಂದ ವಿಳಂಬವಾಗಿ  ಮಧ್ಯಾಹ್ನ 2 ಗಂಟೆ ನಂತರ ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿತ್ತು.

  ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ಮಾತನಾಡಿ, ಶ್ರಮಿಕ್ ವಿಶೇಷ ರೈಲ್ವೆ ಮೂಲಕ ಕಾರ್ಮಿಕರು ವ್ಯಾಪಸ ಬಂದಿದ್ದಾರೆ, ಎಲ್ಲಾ‌ ಕಾರ್ಮಕರ ಆರೋಗ್ಯ ತಪಾಸಣೆ ಮಾಡಿ ಕ್ವಾರೆಂಟೆನ್ ಮಾಡಲಾಗುತ್ತದೆ ಎಂದರು.

  ಬೆಳಿಗ್ಗೆಯಿಂದ ಕಾದು ಕಾದು ಕರ್ತವ್ಯ ಮೆರೆದ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡ..!

  ಶ್ರಮಿಕ್ ರೈಲ್ವೆ ಗಾಡಿಯಲ್ಲಿ ಕಾರ್ಮಿಕರು ಬರುವ ಹಿನ್ನಲೆ ,ರೈಲ್ವೆ ಇಲಾಖೆ , ಆರೋಗ್ಯ ಇಲಾಖೆ,ನಗರಸಭೆ,ಈಶಾನ್ಯ ಸಾರಿಗೆ ಸಂಸ್ಥೆ, ಕಂದಾಯ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೆಳಿಗ್ಗೆ 7 ಗಂಟೆಗೆ ಆಗಮಿಸಿದರು.

  ರೈಲ್ವೆ ನಿಲ್ದಾಣದಲ್ಲಿ ತೆಗೆದುಕೊಂಡು ಸಿದ್ದತೆ ,ಬಸ್ ಸೌಕರ್ಯ,ಆರೋಗ್ಯ ತಪಾಸಣೆ ಕೇಂದ್ರದ ಸಿದ್ದತೆ ,ಊಟ ಹಾಗೂ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳ ತಂಡ ಆಗಮಿಸಿ ಪರಿಶೀಲನೆ ಮಾಡಿತ್ತು.ಬೆಳಿಗ್ಗೆ  8 ಗಂಟೆಗೆ ಬರಬೇಕಿದ್ದ ಟ್ರೈನ್ ಮಧ್ಯಾಹ್ನ 2 ಗಂಟೆ ನಂತರ ಯಾದಗಿರಿ ರೈಲ್ವೆ ನಿಲ್ದಾಣ ಪ್ರವೇಶ ಮಾಡಿತ್ತು.ಖುದ್ದು ಜಿಲ್ಲಾಧಿಕಾರಿ ಎಂ.ಕೂರ್ಮರಾವ್, ಜಿಲ್ಲಾಪಂಚಾಯತ್ ಸಿಇಓ ಶಿಲ್ಪಾ ಶರ್ಮಾ,ಎಸ್ಪಿ ಋಷಿಕೇಶ್ ಭಗವಾನ್ ಸೋನವಣೆ, ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ, ನಗರಸಭೆ ಪೌರಾಯುಕ್ತ ರಮೇಶ ಸುಣಗಾರ,ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್ .ಪಾಟೀಲ ,ಈಶಾನ್ಯ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀಹರಿಬಾಬು,ತಹಶಿಲ್ದಾರ ಚನ್ನಮಲ್ಲಪ್ಪ ಘಂಟಿ ಸ್ಥಳೀದಲ್ಲಿಯೇ ಠಿಕಾಣಿ ಹೂಡಿ ತಮ್ಮ ಜವಾಬ್ದಾರಿ ನಿರ್ವಹಣೆ ಮಾಡಿದರು.

  ಸಾರಿಗೆ ಸಂಸ್ಥೆಯಿಂದ 55 ಬಸ್ ಗಳು ವ್ಯವಸ್ಥೆ ಮಾಡಲಾಗಿತ್ತು. ಆಯಾ ಜಿಲ್ಲೆಗೆ ಬಸ್ ಗಳ ಮೂಲಕ ಕಾರ್ಮಿಕರನ್ನು ಕಳುಹಿಸಲಾಗಿತ್ತು. ಯಾದಗಿರಿ ಜಿಲ್ಲೆಗೆ 661 ಕಾರ್ಮಿಕರು ಬಂದಿದ್ದು ಬಸ್ ಗಳ ಮೂಲಕ ಕ್ವಾರೆಂಟೆನ್ ಕೇಂದ್ರಕ್ಕೆ ಕಳುಹಿಸಲಾಗಿದೆ. ಒಟ್ಟಾರೆ, ಶ್ರಮಿಕ್ ಟ್ರೈನ್ ಮೂಲಕ ಕಾರ್ಮಿಕರು ವ್ಯಾಪಸ ತಮ್ಮ ಜಿಲ್ಲೆಗೆ ತೆರಳಿ ಕ್ವಾರೆಂಟೆನ್ ನಲ್ಲಿ ಇರುವಂತಾಗಿದೆ.

  (ವರದಿ: ನಾಗಪ್ಪ ಮಾಲಿಪಾಟೀಲ)
  First published: