Mysore Lockdown: ಮೈಸೂರಿನಲ್ಲಿ ಲಾಕ್​ಡೌನ್ ಕ್ರಮ ಇನ್ನಷ್ಟು ಬಿಗಿ: ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ

Lockdown Guidelines: ಮೈಸೂರು ನಗರದಲ್ಲಿ 15 ಸ್ಥಳದಲ್ಲಿ ಶಂಕಿತರು ಇದ್ದಾರೆ. ಯಾವ ಯಾವ ಸ್ಥಳ‌ಗಳು ಎನ್ನುವುದು ಇಂದು ಸಂಜೆ ಫೈನಲ್ ಆಗುತ್ತೆ.  ಆ ಏರಿಯಾಗಳನ್ನ ಗುರುತಿಸಿ ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದು ಹೇಳಿದರು.

news18-kannada
Updated:April 16, 2020, 4:22 PM IST
Mysore Lockdown: ಮೈಸೂರಿನಲ್ಲಿ ಲಾಕ್​ಡೌನ್ ಕ್ರಮ ಇನ್ನಷ್ಟು ಬಿಗಿ: ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ
ಸಾಂದರ್ಭಿಕ ಚಿತ್ರ
  • Share this:
ಮೈಸೂರು(ಏ.16): ಮೈಸೂರಿನಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆ, ನಗರ ಪೊಲೀಸ್​ ಆಯುಕ್ತ ಡಾ.ಚಂದ್ರಗುಪ್ತ ತುರ್ತು ಸುದ್ದಿಗೋಷ್ಠಿ ನಡೆಸಿದ್ದಾರೆ. ಲಾಕ್​ಡೌನ್​ ಶುರುವಾದಾಗಿನಿಂದ ನಿರ್ಬಂಧ ವಿಧಿಸಿದ್ದೇವೆ. ರಾಜ್ಯ, ಕೇಂದ್ರ ಸರ್ಕಾರದ ಆದೇಶ ಮತ್ತು ಆದೇಶ ಮತ್ತು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಕ್ರಮ ಕೈಗೊಂಡಿದ್ದೇವೆ. ಮೈಸೂರು ಹಾಟ್‌ಸ್ಪಾಟ್ ಆಗಿದೆ. ಇನ್ನೂ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದರು.

ಕೊರೋನಾ ಹಾಟ್‌ಸ್ಪಾಟ್ ಆಗಿರುವ ಮೈಸೂರಿನಲ್ಲಿ ಮತ್ತಷ್ಟು ಕಠಿಣವಾದ‌ ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದೆ. ಬೆಳಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ಅಗತ್ಯ ಸೇವೆ ಇರುತ್ತದೆ. ದ್ವಿಚಕ್ರ ವಾಹನದಲ್ಲಿ ಸಿಂಗಲ್ ರೈಡರ್​ಗೆ ಮಾತ್ರ ಅನುಮತಿ ನೀಡಲಾಗಿದೆ. ಕಾರಿನಲ್ಲಿ ಡ್ರೈವರ್ ಜತೆ ಒಬ್ಬರಿಗೆ ಮಾತ್ರ ಅನುಮತಿ ನೀಡಲಾಗುತ್ತದೆ. ಮನೆಯಿಂದ ಹೊರಗೆ ಬರುವವರು 2 ಕಿ.ಮೀ. ಮೀರಿ ಓಡಾಡುವಂತಿಲ್ಲ. ತರಕಾರಿ, ಹಾಲು ಅಥವಾ ಯಾವುದೇ ವಸ್ತು ಬೇಕಿದ್ದರೂ ಮನೆ ಸಮೀಪದಲ್ಲೇ ತೆಗೆದುಕೊಳ್ಳಬೇಕು.  ನಿಯಮ ಮೀರಿದರೆ ವಾಹನ ಜಪ್ತಿ ಮತ್ತು ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಮಧ್ಯಾಹ್ನ 12 ರಿಂದ ಸಂಜೆ 6 ಗಂಟೆವರೆಗೆ ವಾಹನದಲ್ಲಿ ಓಡಾಡುವಂತಿಲ್ಲ. ಕಾಲ್ನಡಿಗೆಯಲ್ಲೇ ಓಡಾಡಬೇಕು ಎಂದು ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಆದೇಶಿಸಿದ್ದಾರೆ.

ಹೊಸ ಆದೇಶ ಯಾರಿಗೆ ಅನ್ವಯಿಸಲ್ಲ:

1. ವೈದ್ಯಕೀಯ
2. ಗೂಡ್ಸ್ ವಾಹನ
3. ಸ್ವಯಂ ಸೇವಕರು
4. ಕರ್ತವ್ಯ ನಿರತ ಸರ್ಕಾರಿ ಅಧಿಕಾರಿಗಳು5. ಹಾಪ್ ಕಾಮ್ಸ್, ಪಡಿತರ ಸಾಗಣೆ
6. ಹೋಮ್ ಡೆಲಿವರಿ ವಾಹನಗಳು

ಇದನ್ನೂ ಓದಿ: ಒಂದೂವರೆ ವರ್ಷದ ಮಗು ಸೇರಿ ರಾಜ್ಯದಲ್ಲಿ 34 ಹೊಸ ಕೊರೋನಾ ಕೇಸ್​ ಪತ್ತೆ; ಸೋಂಕಿತರ ಸಂಖ್ಯೆ 313ಕ್ಕೆ ಏರಿಕೆ

ಓಡಾಡಲು ಷರತ್ತು

1. ಗುರುತಿನ ಚೀಟಿ ಮತ್ತು ಮಾಸ್ಕ್ ಕಡ್ಡಾಯ
2. ಅಗತ್ಯ ಸೇವೆಗಳ ಪಾಸ್ ಹೊಂದಿದ್ದರೆ ತೋರಿಸುವುದು ಕಡ್ಡಾಯ
3. ಮೆಡಿಕಲ್‌ಗೆ ಹೋಗುವವರು ಚೀಟಿ ತೋರಿಸಬೇಕು

ಮೈಸೂರು ನಗರದಲ್ಲಿ 15 ಸ್ಥಳದಲ್ಲಿ ಶಂಕಿತರು ಇದ್ದಾರೆ. ಯಾವ ಯಾವ ಸ್ಥಳ‌ಗಳು ಎನ್ನುವುದು ಇಂದು ಸಂಜೆ ಫೈನಲ್ ಆಗುತ್ತೆ.  ಆ ಏರಿಯಾಗಳನ್ನ ಗುರುತಿಸಿ ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದು ಹೇಳಿದರು.

ಕರ್ತವ್ಯ ನಿರತ ಪೊಲೀಸರಿಗೆ ಕೊರೋನಾ ವೈರಸ್ ಸೋಂಕು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪೊಲೀಸರಿಗೆ ಸೋಂಕು ತಗುಲದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಪ್ರತಿನಿತ್ಯ ಠಾಣಾಧಿಕಾರಿಗಳಿಂದ ಈ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಸಾರ್ವಜನಿಕರೂ ಪೊಲೀಸರಿಗೆ ಆಹಾರ ಪದಾರ್ಥಗಳನ್ನು ನೀಡಬಾರದು. ಪೊಲೀಸರು ಸಹ ಸಾರ್ವಜನಿಕರಿಂದ ಆಹಾರ ಪದಾರ್ಥಗಳನ್ನು ಸ್ವೀಕರಿಸದಂತೆ ಸೂಚಿಸಲಾಗಿದೆ ಎಂದರು.

First published: April 16, 2020, 3:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading