ವಿಶ್ವವಿಖ್ಯಾತ ಅಂಬೇಗಾಲು ಕೃಷ್ಣನಿಗೂ ಕೊರೋನಾ ಕಂಟಕ; ಆದಾಯದಲ್ಲಿ ಭಾರೀ ಇಳಿಕೆ

ವರ್ಷಕ್ಕೆ 18 ರಿಂದ 22 ಲಕ್ಷದವರೆಗೆ ಹುಂಡಿ ಹಣ ಸಂಗ್ರಹವಾಗುತ್ತಿತ್ತು. ಪ್ರತಿ ತಿಂಗಳು 1.5 ರಿಂದ 2 ಲಕ್ಷ  ಹಣವನ್ನ ಭಕ್ತರು ಹುಂಡಿಗೆ  ಹಾಕುತ್ತಿದ್ದರು. ಆದರೆ ಈ ಎರಡು ತಿಂಗಳಿಂದ ಕೊರೋನಾ ಲಾಕ್ ಡೌನ್ ಆದ ಹಿನ್ನೆಲೆ ಆದಾಯವೇ ಇಲ್ಲದಂತಾಗಿದೆ.

ಅಪ್ರಮೇಯಸ್ವಾಮಿ  ದೇವಸ್ಥಾನ

ಅಪ್ರಮೇಯಸ್ವಾಮಿ ದೇವಸ್ಥಾನ

  • Share this:
ರಾಮನಗರ (ಮಾ24): ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ನೆಲೆಯಾಗಿರುವ ವಿಶ್ವವಿಖ್ಯಾತ ಪ್ರಸಿದ್ಧ ದೇವಸ್ಥಾನ ಅಪ್ರಮೇಯಸ್ವಾಮಿ. ಅದರಲ್ಲೂ ಈ ದೇವಸ್ಥಾನದಲ್ಲಿರುವ ಅಂಬೇಗಾಲು ಕೃಷ್ಣನ ಮೂರ್ತಿ ಇಡೀ ಪ್ರಪಂಚದಲ್ಲೇ ಎಲ್ಲಿಯೂ ಇಲ್ಲ ಎಂಬುದು ಕೂಡ ಅಷ್ಟೇ ಸತ್ಯ. ಆದರೆ ಕಳೆದ ಎರಡು ತಿಂಗಳಿಂದ ಕೊರೋನಾ ಲಾಕ್​ಡೌನ್​ನಿಂದಾಗಿ ದೇವಸ್ಥಾನ ಬಂದ್ ಆಗಿದೆ. ಹಾಗಾಗಿ ದೇವಾಲಯದ ಆದಾಯದಲ್ಲಿ ಭಾರೀ ಇಳಿಕೆ ಕಂಡಿದೆ.

ಪ್ರತಿದಿನ ಅಂಬೇಗಾಲು ಕೃಷ್ಣನ ದರ್ಶನಕ್ಕೆ 250 ರಿಂದ 300 ಜನ ಭಕ್ತರು ಬರುತ್ತಿದ್ದರು. ಅದರಲ್ಲೂ ವಿಶೇಷವಾಗಿ ಶನಿವಾರ-ಭಾನುವಾರ ಭಕ್ತರ ಸಂಖ್ಯೆ 1 ಸಾವಿರದ ಗಡಿದಾಟುತ್ತಿತ್ತು. ಮತ್ತೊಂದು ವಿಶೇಷವೆಂದರೆ ಅಂಬೇಗಾಲು ಕೃಷ್ಣನ ದರ್ಶನಕ್ಕಾಗಿ ದೇಶದ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮುಂಬೈ, ಹೈದರಾಬಾದ್​​, ಮಹಾರಾಷ್ಟ್ರ, ಉತ್ತರಪ್ರದೇಶ ಮುಂತಾದ ಕಡೆಗಳಿಂದ ಭಕ್ತರು ದರ್ಶನಕ್ಕೆ ಬರುತ್ತಿದ್ದರು. ಮಾತ್ರವಲ್ಲದೆ, ಅಮೇರಿಕಾ, ಫ್ರಾನ್ಸ್, ಜಪಾನ್, ಬ್ರಿಟನ್ ಸೇರಿದಂತೆ ವಿಶ್ವದ ವಿವಿಧ ದೇಶಗಳಿಂದ ಕೂಡ ಜನರು ಬರುತ್ತಿದ್ದರು.

ವರ್ಷಕ್ಕೆ 18 ರಿಂದ 22 ಲಕ್ಷದವರೆಗೆ ಹುಂಡಿ ಹಣ ಸಂಗ್ರಹವಾಗುತ್ತಿತ್ತು. ಪ್ರತಿ ತಿಂಗಳು 1.5 ರಿಂದ 2 ಲಕ್ಷ  ಹಣವನ್ನ ಭಕ್ತರು ಹುಂಡಿಗೆ  ಹಾಕುತ್ತಿದ್ದರು. ಆದರೆ ಈ ಎರಡು ತಿಂಗಳಿಂದ ಕೊರೋನಾ ಲಾಕ್ ಡೌನ್ ಆದ ಹಿನ್ನೆಲೆ ಆದಾಯವೇ ಇಲ್ಲದಂತಾಗಿದೆ.

ದೇವಸ್ಥಾನದಲ್ಲಿ ಪ್ರಧಾನ ಅರ್ಚಕರು ಸೇರಿ ಒಟ್ಟು 11 ಮಂದಿ ಕಾರ್ಯನಿರ್ವಹಿಸುತ್ತಾರೆ. ಕೊರೋನಾ ಲಾಕ್​​ಡೌನ್ ನಿಂದಾಗಿ ಕಳೆದ ಎರಡು ತಿಂಗಳಿಂದ ಭಕ್ತರು ಇತ್ತ ಮುಖ ಮಾಡುತ್ತಿಲ್ಲ. ಲಾಕ್ ಡೌನ್ ಮುಗಿದು ದೇವಸ್ಥಾನ ಮತ್ತೆ ತೆರೆದರೆ ಎಂದಿನಂತೆ ಭಕ್ತರ ಸಂಖ್ಯೆ ಹೆಚ್ಚುತ್ತದೆ. ಆಗ ದೇವಸ್ಥಾನದ ಆದಾಯವೂ ಸಹ ಹೆಚ್ಚಳವಾಗುತ್ತದೆ ಎಂದು ದೇವಸ್ಥಾನದ ಆಡಳಿತ ವರ್ಗದವರು ನ್ಯೂಸ್ 18 ಗೆ ಮಾಹಿತಿ ನೀಡಿದ್ದಾರೆ.

Data Leak: 2.9 ಕೋಟಿ ಭಾರತೀಯರ ಡೇಟಾ ಲೀಕ್​​!
First published: