• Home
  • »
  • News
  • »
  • coronavirus-latest-news
  • »
  • ಸೀಲ್ ಡೌನ್ ಏರಿಯಾದಲ್ಲಿ ಕಟ್ಟಿಂಗ್‌ನದ್ದೇ ಸಮಸ್ಯೆ ; ಆಗ ಹುಡುಗರು ಏನು ಮಾಡಿದ್ರು ಗೊತ್ತಾ?

ಸೀಲ್ ಡೌನ್ ಏರಿಯಾದಲ್ಲಿ ಕಟ್ಟಿಂಗ್‌ನದ್ದೇ ಸಮಸ್ಯೆ ; ಆಗ ಹುಡುಗರು ಏನು ಮಾಡಿದ್ರು ಗೊತ್ತಾ?

ಸೇವಿಂಗ್​ ಮಾಡಿಸಿಕೊಳ್ಳುತ್ತಿರುವ ಯುವಕ

ಸೇವಿಂಗ್​ ಮಾಡಿಸಿಕೊಳ್ಳುತ್ತಿರುವ ಯುವಕ

ಸ್ನೇಹಿತರ ಬಳಗದಲ್ಲಿಯೇ ಪರಸ್ಪರ ಹೇರ್ ಕಟಿಂಗ್ ಮತ್ತು ಸೇವಿಂಗ್ ಮಾಡಿಕೊಳ್ಳುತ್ತಿರುವ ಇವರ ತಲೆಯ ಮೇಲಿನ ಕೂದಲು ಈಗ ಖಾಲಿ ಖಾಲಿಯಾಗಿದೆ.

  • Share this:

ವಿಜಯಪುರ(ಮೇ.17): ಕೊರೋನಾ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಭಾರತ ಲಾಕ್​​ ಡೌನ್ ಜನರನ್ನು ಸಾಕಷ್ಟು ಇಕ್ಕಟ್ಟಿಗೆ ಸಿಲುಕಿಸಿವೆ. ಅದರಲ್ಲಿಯೂ ಗುಮ್ಮಟ ನಗರಿ ವಿಜಯಪುರದ ಸೀಲ್​​ ಡೌನ್ ಏರಿಯಾದಲ್ಲಿರುವ ಜನ ಬೆಚ್ಚಿ ಬಿದ್ದಿದ್ದಾರೆ. ಆದರೆ, ಬಿಸಿಲು ಯುವಕರನ್ನು ಕಂಗಾಲಾಗಿಸಿದೆ. ಈ ಹಿನ್ನೆಲೆಯಲ್ಲಿ ಸೀಲ್​ಡೌನ್​ ಏರಿಯಾದಲ್ಲಿ ಸಿಲುಕಿ ತಲೆಗೂದಲು ಕತ್ತರಿಸಲಾಗದೇ ಪರದಾಡುತ್ತಿದ್ದ ಯುವಕರು ಹೊಸ ಐಡಿಯಾ ಮೂಲಕ ಪರಿಹಾರ ಕಂಡು ಕೊಂಡಿದ್ದಾರೆ. 

ಕೊರೋನಾ ಎಮರ್ಜೆನ್ಸಿ ಆರಂಭವಾದ ಬಳಿಕ ವಿಜಯಪುರ ಜಿಲ್ಲಾಡಳಿತ ಹೇರ್ ಕಟಿಂಗ್ ಶಾಪ್, ಬ್ಯೂಟಿ ಪಾರ್ಲರ್ ಮತ್ತು ಸ್ಪಾಗಳನ್ನು ಬಂದ್ ಮಾಡುವಂತೆ ಆದೇಶ ಹೊರಡಿಸಿದೆ. ಆದರೆ, ಸುಮಾರು ಎರಡು ತಿಂಗಳು ಹೇರ್ ಕಟಿಂಗ್ ಮಾಡಲಾಗದೇ ಯುವಕರು ಸಂಕಷ್ಟಕ್ಕೆ ಸಿಲುಕಿದ್ದರು.  ಅದರಲ್ಲಿಯೂ ವಿಜಯಪುರ ನಗರದ ವಿಜಯಪುರ ನಗರದ ಸೀಲ್​ಡೌನ್​​ ಏರಿಯಗಳಾದ ಜಾಡರ ಓಣಿ, ಶಾಂತಿನಗರ, ಚಪ್ಪರಬಂದ್, ವಡ್ಡರ್ ಓಣಿ, ಬೆಂಡಿಗೇರಿ ಓಣಿ, ಗೋಳಗುಮ್ಮಟ ಏರಿಯಾ ಯುವಕರಿಂದ ವಿನೂತನ ಪ್ರಯೋಗ ನಡೆದಿದೆ. ಗೆಳೆಯರಿಂದಲೇ ಪರಸ್ಪರ ಕಟಿಂಗ್, ಶೇವಿಂಗ್ ಕೆಲಸ ನಡೆದಿದ್ದು, ಇವರು ಈಗ ಮಾಡಿಕೊಂಡಿರುವ ಟಕಳು ಸ್ಟೈಲ್ ಪ್ರಸಿದ್ದಿಯಾಗಿದೆ.

ಈ ಭಾಗದಲ್ಲಿ ತಲೆಯನ್ನು ಬೋಳಿಸಿಕೊಳ್ಳುವುದಕ್ಕೆ ಟಕಳು ಎಂದೇ ಕರೆಯಲಾಗುತ್ತಿದ್ದು, ಬೇಸಿಗೆಯಲ್ಲಿ ಇದು ಬಿಸಿಲಿನ ತಾಪಕ್ಕೆ ತಕ್ಕ ಮಟ್ಟಿಗೆ ನೆಮ್ಮದಿಯನ್ನೂ ನೀಡುತ್ತಿದೆ. ಈ ಹಿನ್ನೆಲೆಯಲ್ಲಿ ಯುವಕರು ಟ್ರಿಮ್ಮರ್ ಬಳಸಿ ಒಬ್ಬರಿಗೊಬ್ಬರ ತಲೆಕೂದಲನ್ನು ತೆಗೆಯುವ ಮೂಲಕ ಪರಿಹಾರ ಕಂಡು ಕೊಂಡಿದ್ದಾರೆ. ಕಳೆದ 50 ದಿನಗಳಿಂದ ಕಟಿಂಗ್ ಇಲ್ಲದೆ ಪರದಾಡುತ್ತಿದ್ದ ಯುವಕರು ಈಗ ಸ್ವಲ್ಪ ಮಟ್ಟಿಗೆ ನೆಮ್ಮದಿದ ನಿಟ್ಟುಸಿರು ಬಿಟ್ಟಿದ್ದಾರೆ. ಸ್ನೇಹಿತರ ಬಳಗದಲ್ಲಿಯೇ ಪರಸ್ಪರ ಹೇರ್ ಕಟಿಂಗ್ ಮತ್ತು ಸೇವಿಂಗ್ ಮಾಡಿಕೊಳ್ಳುತ್ತಿರುವ ಇವರ ತಲೆಯ ಮೇಲಿನ ಕೂದಲು ಈಗ ಖಾಲಿ ಖಾಲಿಯಾಗಿದೆ.

ಇದನ್ನೂ ಓದಿ : ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸ್ವಕ್ಷೇತ್ರದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮರಳುಗಾರಿಕೆ

ಈಗ ಎಲ್ಲ ಅಂಗಡಿಗಳೂ ಬಂದ್ ಆಗಿವೆ. ಈಗ ಬೇಸಿಗೆಯಲ್ಲಿ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದೆ. ಆದರೆ, ಹೇರ್ ಕಟಿಂಗ್ ಮಾಡಿಸಲು ಅಂಗಡಿಗಳು ಬಂದ್ ಆಗಿವೆ. ಈ ಹಿನ್ನೆಲೆಯಲ್ಲಿ ನಾವೆಲ್ಲ ಸ್ನೇಹಿತರು ಯೋಚಿಸಿ ಟ್ರಿಮ್ಮರ್ ಬಳಸಿ ಪರಸ್ಪರ ಹೇರ್ ಕಟಿಂಗ್ ಮತ್ತು ಶೇವಿಂಗ್ ಮಾಡಿಸಿಕೊಳ್ಳುತ್ತಿದ್ದೇವೆ.  ಈಗಾಗಲೇ ಸುಮಾರು 20ಕ್ಕೂ ಹೆಚ್ಚು ಜನರು ಈ ರೀತಿ ತಲೆಗೂದಲು ತೆಗೆದಿದ್ದೇವೆ. ಟ್ರಿಮ್ಮರ್ ಕೂಡ ಕಡಿಮೆ ಇರುವುದರಿಂದ ಹೆಚ್ಚಿನ ಜನರಿಗೆ ಸಾಧ್ಯವಾಗಿಲ್ಲ. ಇನ್ನೂ ಬಹಳ ಜನ ತಲೆಗೂದಲು ತೆಗೆದು ಟಕಳು ಆಗಲು ಸಿದ್ಧರಾಾಗಿದ್ದೇವೆ ಎನ್ನುತ್ತಾರೆ ಈ ಭಾಗದ ಯುವಕ ಪ್ರಶಾಂತ ಗೊಳಸಂಗಿ.

First published: