ಕೊರೋನಾ ಎಫೆಕ್ಟ್​ ; ರೈತರ ಬದುಕು ಸುಂದರಗೊಳಿಸದ ಅಲಂಕಾರಿಕ ಹೂವುಗಳು; ಬೀದಿಗೆ ಬಿದ್ದ ಬೆಳೆಗಾರರು

ಆರ್ಕಿಡ್, ಅಂತೋರಿಯಂ, ಬಂಚ್ ಸೇವಂತಿಗೆ, ಬೆಳೆದ ರೈತರ ಪಾಡು ಕೇಳುವವರೇ ಇಲ್ಲವಾಗಿದೆ. ಕೋಟಿ  ರೂಪಾಯಿ ವೆಚ್ಚ ಮಾಡಿ  ಶೇಡ್ ನೆಟ್ ನಲ್ಲಿ ಬೆಳೆದ ಹೂವುಗಳು ಆಗೆ ಉಳಿದಿವೆ. ಗಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಶಿವಮೊಗ್ಗ(ಏ.23): ಕೊರೋನಾ ದೇಶದ ಜನ ಜೀವನದ ಮೇಲೆ ಬಾರಿ ಪರಿಣಾಮ ಬೀರುತ್ತಿದೆ. ಲಾಕ್ ಡೌನ್ ನಿಂದಾಗಿ ಸಮಸ್ಯೆಗಳ ಉದ್ಬವಿಸುತ್ತಲೇ ಇವೆ. ಅದರಲ್ಲೂ ರೈತಾಪಿ ವರ್ಗಕ್ಕೆ ಕಷ್ಟಗಳ ಮೇಲೆ ಕಷ್ಟಗಳು ಬರುತ್ತಲೇ ಇವೆ. ಈಗ ಹೂವು ಬೆಳೆದ ರೈತರ ಪರಿಸ್ಥಿತಿ ಹೇಳ ತೀರದಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಹೂವು ಬೆಳೆದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಲಾಕ್ ಡೌನ್ ಆಗಿದೆ. ಹೂವು ಅಗತ್ಯ ವಸ್ತುಗಳ ಪಟ್ಟಿಯಲ್ಲಿ ಬರುವುದಿಲ್ಲ. ಎಲ್ಲೂ ಸಹ ಹೂವಿನ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಹೂವಿನ ಮಾರುಕಟ್ಟೆಗಳು ಸಂಪೂರ್ಣವಾಗಿ ಬಂದ್ ಆಗಿವೆ. ಹೀಗಾಗಿ ಹೂವು  ತೋಟದಲ್ಲೇ ಒಣಗುತ್ತಿವೆ. ಅದರಲ್ಲೂ ಆರ್ಕಿಡ್, ಅಂತೋರಿಯಂ, ಬಂಚ್ ಸೇವಂತಿಗೆ, ಬೆಳೆದ ರೈತರ ಪಾಡು ಕೇಳುವವರೇ ಇಲ್ಲವಾಗಿದೆ. ಕೋಟಿ  ರೂಪಾಯಿ ವೆಚ್ಚ ಮಾಡಿ  ಶೇಡ್ ನೆಟ್ ನಲ್ಲಿ ಬೆಳೆದ ಹೂವುಗಳು ಆಗೆ ಉಳಿದಿವೆ. ಗಿಡಗಳನ್ನೇ ಕಿತ್ತು ಹಾಕುತ್ತಿದ್ದಾರೆ.

ಮದುವೆ, ಸಮಾರಂಭಗಳು ಇಲ್ಲವಾಗಿದೆ. ಅಲಂಕಾರಿಕವಾಗಿ ಬಳಕೆಯಾಗುವ ಈ ಹೂವುಗಳಿಗೆ ಈಗ ಬೇಡಿಕೆ ಇಲ್ಲವಾಗಿದೆ. ಇನ್ನು ಈ ಹೂವುಗಳು ಹೆಚ್ಚಾಗಿ ಬೇರೇ ಬೇರೆ ದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಈಗ  ಲಾಡ್ ಡೌನ್ ಕಾರಣಕ್ಕೆ ರಫ್ತು ಸಹ ನಿಂತು ಹೋಗಿದೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ, ಶೇಡ್ ನೆಟ್ ಬಳಸಿ ಹೂವು ಬೆಳೆದ ರೈತರು ಈಗ ಕಂಗಾಲಾಗಿದ್ದಾನೆ.

ವ್ಯಾಪಾರ ಇಲ್ಲ ಎಂದು ಹೂವಿನ ಗಿಡಗಳ ಪೋಷಣೆ ಮಾಡದೇ ಹಾಗೆ ಬಿಡಲು ಬರುವುದಿಲ್ಲ. ಕಾರಣ ಆರ್ಕಿಡ್, ಅಂತೋರಿಯಂ ಗಿಡಗಳು 8 ವರ್ಷಗಳ ವರೆಗೆ ಹೂವು ಬಿಡುತ್ತೇವೆ. ಹೀಗಾಗಿ ಆದಾಯ ಬರದೇ ಹೋದರೆ ಅವುಗಳನ್ನು ಆರೈಕೆ ಮಾಡಲೇ ಬೇಕಾಗಿದೆ. ಒಂದು ಎಕರೆ ಪ್ರದೇಶದ ಆರ್ಕಿಡ್ ಹೂವಿನ ಬೆಳೆಗೆ ಪ್ರತಿ ತಿಂಗಳು ಕಾರ್ಮಿಕರಿಗೆ ಅಂತ 25 ಸಾವಿರ, ಗೊಬ್ಬರು, ಔಷಧ ಅಂತಾ ಕನಿಷ್ಠ 10 ರಿಂದ 15 ಸಾವಿರ ವೆಚ್ಚ ಮಾಡುತ್ತಿದ್ದಾರೆ. ಬ್ಯಾಂಕ್ ನಲ್ಲಿ ಸಾಲ ಮಾಡಿ ಹಲವು ರೈತರು ಬೆಳೆ ಬೆಳೆದಿದ್ದಾರೆ. ಸರ್ಕಾರ ಅವರ ನೆರವಿಗೆ ಬರಬೇಕಿದೆ. ಅರ್ಧ ಎಕರೆ, ಒಂದು ಎಕರೆ ಪ್ರದೇಶದಲ್ಲಿ ಚಂಡೂವು, ಸೇವಂತಿಗೆ, ಬಟನ್ ಗುಲಾಬಿ, ಮಲ್ಲಿಗೆ ಹೂವುಗಳನ್ನು ಬೆಳೆದ ರೈತರ ಬದುಕು ದುಸ್ತರವಾಗಿದೆ.

ಇದನ್ನೂ ಓದಿ: ಹೆರಿಗೆಗೂ ಅಡ್ಡಿಯಾದ ಲಾಕ್​ಡೌನ್; ಜಿಮ್ಸ್ ಆಸ್ಪತ್ರೆ ಎದುರಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ

ಇಂತಹ ಸಣ್ಣ ಹಿಡುವಳಿ ರೈತರ ಸಹಕಾರಕ್ಕೆ ಸರ್ಕಾರ ಮುಂದಾದರೇ ಅವರ ಬದುಕು ಹಸನಾಗುತ್ತದೆ. ಇಲ್ಲದೇ ಹೋದರೆ  ಸಣ್ಣ ಹಿಡುವಳಿಯಲ್ಲಿ ಹೂವು ಬೆಳೆಯವರು ರೈತರು ಬೀದಿಗೆ ಬೀಳಲಿದ್ದಾರೆ.
First published: