ಕೋಲಾರದಲ್ಲಿ ಕೊರೋನಾ ಭೀತಿ: ಹೊರಾರಾಜ್ಯದ ಕಾರ್ಮಿಕರನ್ನು ಕರೆಸಿಕೊಂಡ ಕಂಪನಿ ವಿರುದ್ಧ ಸ್ಥಳೀಯರ ಪ್ರತಿಭಟನೆ

ಈ ಮಧ್ಯೆ ಹೊರ ರಾಜ್ಯದಿಂದ ಕಾರ್ಮಿಕರು ಆಗಮಿಸಿದ್ದಕ್ಕೆ ಕೋಲಾರದ ನೌಕರರು ಪ್ರತಿಭಟನೆ ನಡೆಸಿದ್ಧಾರೆ. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಇಂಡೋ ಆಟೋಟೆಕ್ ಲಿಮಿಟೆಡ್ ಕಂಪನಿ ಎದುರು ಕಾರ್ಮಿಕರು ಪ್ರತಿಭಟನೆ ಮಾಡಿದ್ದಾರೆ.

news18-kannada
Updated:June 30, 2020, 10:00 AM IST
ಕೋಲಾರದಲ್ಲಿ ಕೊರೋನಾ ಭೀತಿ: ಹೊರಾರಾಜ್ಯದ ಕಾರ್ಮಿಕರನ್ನು ಕರೆಸಿಕೊಂಡ ಕಂಪನಿ ವಿರುದ್ಧ ಸ್ಥಳೀಯರ ಪ್ರತಿಭಟನೆ
ವಲಸೆ ಕಾರ್ಮಿಕರು (ಸಾಂದರ್ಭಿಕ ಚಿತ್ರ)
  • Share this:
ಕೋಲಾರ(ಜೂ.30): ಗ್ರೀನ್​​ ಜೋನ್​​ನಲ್ಲಿರುವ ಕೋಲಾರ ಜಿಲ್ಲೆ ಈಗೀಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕೊರೋನಾ ಪಾಸಿಟಿವ್​​ ಕೇಸುಗಳ ಕಾರಣದಿಂದಾಗಿ ರೆಡ್​​ ಜೋನ್​​ ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇತ್ತೀಚೆಗೆ ಕೋಲಾರದಲ್ಲಿ ಪ್ರತೀದಿನ 15ಕ್ಕೂ ಹೆಚ್ಚ ಕೊರೋನಾ ವೈರಸ್​​ ಕೇಸುಗಳು ದಾಖಲಾಗುತ್ತಿವೆ. ಭಾನುವಾರ ಸುಮಾರು 14 ಮಂದಿಗೆ ಕೋವಿಡ್​​-19 ಕಾಣಿಸಿಕೊಂಡಿತ್ತು. ಇದರ ಪರಿಣಾಮ ಸೋಂಕಿತರ ಸಂಖ್ಯೆ 110ರ ಗಡಿ ದಾಟಿದೆ. ಇದು ಇಡೀ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದ್ದು, ಹೊರರಾಜ್ಯದ ಕಾರ್ಮಿಕರನ್ನು ಕೋಲಾರದಿಂದ ವಾಪಸ್ಸು ಕಳಿಸಿ ಎಂಬ ಕೂಗು ಜೋರಾಗಿ ಕೇಳಿಸುತ್ತಿದೆ.

ಇತ್ತೀಚೆಗೆ ಕೋಲಾರಕ್ಕೆ ಅಂತರ್​​ರಾಜ್ಯ ಪ್ರಯಾಣ ಹಿನ್ನಲೆಯಲ್ಲಿ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದ ಸಾವಿರಾರು ಮಂದಿ ಆಗಮಿಸುತ್ತಿದ್ದಾರೆ. ಕಳೆದ ಶನಿವಾರ ಒಂದೇ ಕುಟುಂಬದ ಆರು ಮದಿಗೆ ಕೊರೋನಾ ಬಂದಿತ್ತು. ಇದರಲ್ಲಿ ಒಬ್ಬರಿಗೆ ಆಂಧ್ರದ ಕುಪ್ಪಂ ಮೂಲದಿಂದ ಸೋಂಕು ತಗುಲಿತ್ತು. ಹೀಗಾಗಿ ಸ್ಥಳೀಯರಲ್ಲಿ ಕೊರೋನಾ ಆತಂಕ ಮತ್ತಷ್ಟು ಹೆಚ್ಚಾಗಿದೆ.

ಈ ಮಧ್ಯೆ ಹೊರ ರಾಜ್ಯದಿಂದ ಕಾರ್ಮಿಕರು ಆಗಮಿಸಿದ್ದಕ್ಕೆ ಕೋಲಾರದ ನೌಕರರು ಪ್ರತಿಭಟನೆ ನಡೆಸಿದ್ಧಾರೆ. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಇಂಡೋ ಆಟೋಟೆಕ್ ಲಿಮಿಟೆಡ್ ಕಂಪನಿ ಎದುರು ಕಾರ್ಮಿಕರು ಪ್ರತಿಭಟನೆ ಮಾಡಿದ್ದಾರೆ.


ಇದನ್ನೂ ಓದಿ: ಸಂಸದರ ಆದರ್ಶ ಗ್ರಾಮ ಯೋಜನೆ: ನೆಲವಾಗಿಲು ಗ್ರಾಮ ಪಂಚಾಯಿತಿ ದತ್ತು ಪಡೆದ ಬಿ.ಎನ್ ಬಚ್ಚೇಗೌಡ

ಇನ್ನು, ತಡರಾತ್ರಿ ಹೊರರಾಜ್ಯದ ಕಾರ್ಮಿಕರನ್ನ ಕರೆಸಿಕೊಂಡಿದ್ದಾರೆ ಎಂದು ಇಂಡೋ ಆಟೋಟೆಕ್ ಲಿಮಿಟೆಡ್ ಕಂಪನಿ ಮೇಲೆ ಆರೋಪ ಮಾಡಲಾಗಿದೆ. ಜತೆಗೆ ಕಂಪನಿಯವರು ಹೊರರಾಜ್ಯದ ಕಾರ್ಮಿಕರನ್ನು ಯಾವುದೇ ಕೊರೋನಾ ತಪಾಸಣೆಗೆ ಒಳಪಡಿಸಿಲ್ಲ, ಕ್ವಾರಂಟೈನ್​​ ಮಾಡಿಲ್ಲ. ಕೂಡಲೇ ಹೊರರಾಜ್ಯದ ನೌಕರರನ್ನ ವಾಪಾಸ್ ಕಳಿಸುವಂತೆ ಸ್ತಳೀಯ ಕಾರ್ಮಿಕರು ಪಟ್ಟು ಹಿಡಿದಿದ್ದಾರೆ. ಸದ್ಯ ಸ್ಥಳಕ್ಕೆ ವೇಮಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ಧಾರೆ.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading