ಬಾಲಕಿಗೆ ಕೊರೋನಾ ನೆಗಿಟಿವ್​​ ಬಂದರೂ ಏರಿಯಾ ಸೀಲ್​ಡೌನ್​​ ತೆರವುಗೊಳಿಸದ ಕೊಡಗು ಜಿಲ್ಲಾಡಳಿತ: ಜನರ ಆಕ್ರೋಶ ​

ಬಾಲಕಿಗೆ ನೆಗೆಟಿವ್ ವರದಿ ಬಂದರು ಸೀಲ್​​ಡೌನ್ ಮಾಡಿರುವುದು ಸರಿಯಾದ ಕ್ರಮವಲ್ಲ. ಕೂಲಿ ಕೆಲಸಕ್ಕೆ ತೆರಳದೆ ಜೀವನ ನಡೆಸಲು ಹೇಗೆ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊಡಗು: ಬಾಲಕಿಗೆ ಕೊರೋನಾ ವರದಿ ನೆಗೆಟಿವ್ ಬಂದರೂ ಏರಿಯಾವನ್ನು ಸೀಲ್‍ಡೌನ್ ಮಾಡಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ಜನತಾ ಕಾಲೋನಿಯ 17 ವರ್ಷದ ಬಾಲಕಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೀಗ, ಆಕೆ ರಿಪೋರ್ಟ್​ನಲ್ಲಿ ನೆಗೆಟಿವ್ ವರದಿ ಬಂದಿದೆ. ಹೀಗಿದ್ದರೂ ಈಕೆ ಇದ್ದ ಏರಿಯಾ ಸೀಲ್​ಡೌನ್​​ ಮಾಡಲಾಗಿದೆ.

ಬಾಲಕಿಯನ್ನು ಕರೆದೊಯ್ದ ಸಂದರ್ಭದಲ್ಲಿ ಈ ಏರಿಯಾವನ್ನು ಸೀಲ್‌ಡೌನ್ ಮಾಡಲಾಗಿತ್ತು. ಇದೀಗ ಬಾಲಕಿಗೆ ನೆಗೆಟಿವ್ ವರದಿ ಬಂದಿದೆ ಎಂದು ವಾಪಸ್ ಕರೆತಂದು ಬಿಟ್ಟು ವಾರ ಕಳೆಯುತ್ತಿದ್ದರೂ ಏರಿಯಾದ ಸೀಲ್‌ಡೌನ್ ಮಾತ್ರ ತೆರವು ಮಾಡಿಲ್ಲ. ಜೊತೆಗೆ ಏರಿಯಾದಲ್ಲಿರುವ 17ಕ್ಕೂ ಹೆಚ್ಚು ಕುಟುಂಬಗಳಿಗೆ ಯಾವುದೆ ಆಹಾರ ಧಾನ್ಯವನ್ನು ಅಧಿಕಾರಿಗಳು ಪೂರೈಕೆ ಮಾಡಿಲ್ಲ.

ಇದರಿಂದಾಗಿ ಜನರು ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಅಲ್ಲದೆ ತಾವೆಲ್ಲರೂ ಬಡ ಕುಟುಂಬದವರಾಗಿದ್ದು, ಅಂದೇ ದುಡಿದು ಅಂದೇ ತಿನ್ನುವ ಜನ. ಹೀಗಾಗಿ ಕಷ್ಟ ಅನುಭವಿಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.

ದಿನದ ಕೂಲಿ ನಂಬಿ ಜೀವನ ನಡೆಸುತ್ತಿದ್ದೇವೆ. ಇತ್ತ ಅಗತ್ಯ ವಸ್ತುಗಳನ್ನು ನೀಡದೇ ಏರಿಯಾದಿಂದ ಹೊರಕ್ಕೆ ಹೋಗಲು ಸಹ ಬಿಡದೇ ಇರೋದರಿಂದ ಜನರು ಕಷ್ಟದಲ್ಲಿ ಸಿಲುಕಿದ್ದೇವೆ ಎನ್ನುತ್ತಿದ್ದಾರೆ.

ಇದನ್ನೂ ಓದಿ: ‘ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ರಾಜೀನಾಮೆ ನೀಡಲಿ’ - ಕಾಂಗ್ರೆಸ್‌ ಒತ್ತಾಯ

ಬಾಲಕಿಗೆ ನೆಗೆಟಿವ್ ವರದಿ ಬಂದರು ಸೀಲ್​​ಡೌನ್ ಮಾಡಿರುವುದು ಸರಿಯಾದ ಕ್ರಮವಲ್ಲ. ಕೂಲಿ ಕೆಲಸಕ್ಕೆ ತೆರಳದೆ ಜೀವನ ನಡೆಸಲು ಹೇಗೆ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಹೀಗೆ ಕೊರೋನಾ ಸೋಂಕು ಮಿತಿಮೀರಿ ಹರಡುತ್ತಿರುವ ಕಾರಣ ರಾಜ್ಯದ ಬಹುತೇಕ ಕಡೆ ಲಾಕ್​ಡೌನ್​​ ಮತ್ತೆ ಮಾಡಬೇಕೆಂಬ ಕೂಗು ಕೇಳಿ ಬಂದಿದೆ. ಈಗಾಗಲೇ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯನ್ನು ಒಂದು ವಾರ ಕಾಲ ಲಾಕ್​ಡೌನ್ ಮಾಡಲಾಗಿದೆ. ಈ ಸಂಬಂಧ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್​​ ಭಾಸ್ಕರ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಜುಲೈ 14ನೇ ತಾರೀಕು ಮಂಗಳವಾರ ರಾತ್ರಿ 8 ಗಂಟೆಯಿಂದಲೇ ಜುಲೈ 23ರ ಬೆಳಗ್ಗೆ 5 ಗಂಟೆಯವರೆಗೆ ಸಂಪೂರ್ಣ ಲಾಕ್​ಡೌನ್ ಮಾಡಲಾಗಿದೆ.
Published by:Ganesh Nachikethu
First published: