ಆನೇಕಲ್​​: ಕೊರೋನಾ ನಡುವೆಯೇ ಕಾಡಾನೆ ಹಾವಳಿಗೆ ತತ್ತರಿಸಿದ ಜನ

ಗ್ರಾಮದ ಸಮೀಪವೇ ಗಿರಕಿ ಹೊಡೆಯುತ್ತಿರುವ ಮದಗಜವನ್ನು ಕಾಡಿನತ್ತ ಓಡಿಸಲು ಸ್ಥಳೀಯರು ಹರಸಾಹಸಪಡುತ್ತಿದ್ದು, ಒಂಟಿ ಸಲಗ ಮಾತ್ರ ತಾನು ನಡೆದದ್ದೆ ಹಾದಿಯೆಂಬಂತೆ ಸಿಕ್ಕ ಸಿಕ್ಕ ಲಗ್ಗೆಯಿಡುತ್ತಿದೆ. ಇಷ್ಟಾದರೂ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ.

news18-kannada
Updated:July 16, 2020, 4:04 PM IST
ಆನೇಕಲ್​​: ಕೊರೋನಾ ನಡುವೆಯೇ ಕಾಡಾನೆ ಹಾವಳಿಗೆ ತತ್ತರಿಸಿದ ಜನ
ಕಾಡಾನೆ
  • Share this:
ಆನೇಕಲ್(ಜು.16): ಈಗಾಗಲೇ ಕಿಲ್ಲರ್ ಕೊರೋನಾ ಜನರ ನಿದ್ದೆಗೆಡಿಸಿದೆ. ಇದರ ನಡುವೆ ಕಾಡು ಪ್ರಾಣಿಗಳು ಸಹ ಆಗಿಂದಾಗ್ಗೆ ಕಾಡಿನತ್ತ ದಾಂಗುಡಿಯಿಟ್ಟು ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸುತ್ತಿವೆ. 

ಹೌದು, ಇಂದು ಬೆಳ್ಳಂಬೆಳಗ್ಗೆ ಒಂಟಿ ಸಲಗವೊಂದು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಸೂಳಗಿರಿ ಸಮೀಪದ ಗೋಪಸಂದ್ರ ಗ್ರಾಮದ ಬಳಿ ಕಾಣಿಸಿಕೊಂಡು ಜನರಲ್ಲಿ ಭೀತಿ ಮೂಡಿಸಿದೆ. ಈಗಾಗಲೇ ಕೊರೋನಾ ಕಾಟದಿಂದ ಜನ ಮನೆ ಸೇರಿಕೊಂಡಿದ್ದಾರೆ. ಇದೀಗ ಮದಗಜ ಹಾವಳಿಗೆ ಹೆದರಿದ್ದು, ಮನೆಯಿಂದ ಹೊರ ಬಾರದಂತಾಗಿದ್ದಾರೆ.

ಗ್ರಾಮದ ಸಮೀಪವೇ ಗಿರಕಿ ಹೊಡೆಯುತ್ತಿರುವ ಮದಗಜವನ್ನು ಕಾಡಿನತ್ತ ಓಡಿಸಲು ಸ್ಥಳೀಯರು ಹರಸಾಹಸಪಡುತ್ತಿದ್ದು, ಒಂಟಿ ಸಲಗ ಮಾತ್ರ ತಾನು ನಡೆದದ್ದೆ ಹಾದಿಯೆಂಬಂತೆ ಸಿಕ್ಕ ಸಿಕ್ಕ ಲಗ್ಗೆಯಿಡುತ್ತಿದೆ. ಇಷ್ಟಾದರೂ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಇಲ್ಲಿದೆ ಬಯಲು ಸೀಮೆ‌ಯ ಜೋಗ್ ಫಾಲ್ಸ್ ಸುತ್ತ ಒಂದು ನೋಟ

ಇನ್ನು, ತಿಂಗಳ ಹಿಂದೆ ಸಹ ಇದೇ ಗ್ರಾಮದ ದನಗಾಯಿಯನ್ನು ಕಾಡಾನೆಯೊಂದು ಕೊಂದು ಹಾಕಿತ್ತು. ಆಗಲೂ ಸಹ ಅರಣ್ಯ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿರಲಿಲ್ಲ. ಕೇವಲ ಪರಿಹಾರ ನೀಡಿ ಕೈ ತೊಳೆದುಕೊಂಡಿದ್ದರು. ಕಾಡಾನೆ ಹಾವಳಿಯಿಂದ ಜನ ಪದೇ ಪದೇ ಸಂಕಷ್ಟಕ್ಕಿಡಾಗುತ್ತಿದ್ದರು ಅರಣ್ಯ ಅಧಿಕಾರಿಗಳು ಯಾವುದೇ ಶಾಶ್ವತ ಪರಿಹಾರ ಮಾತ್ರ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಅಕ್ರೋಶವಾಗಿದೆ.
Published by: Ganesh Nachikethu
First published: July 16, 2020, 3:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading