ಕೊರೋನಾ ಬಗ್ಗೆ ಸುಳ್ಳು ಸುದ್ದಿ ಕಣ್ಣಿಗೆ ಬಿದ್ದರೆ ಟ್ಯಾಗ್ ಮಾಡಿ: ಹಿರಿಯ ಅಧಿಕಾರಿ ಅತೀಕ್ ಬಿಗಿಕ್ರಮ

STOP FAKE NEWS - ಕರ್ನಾಟಕ ಸರ್ಕಾರವು ಸೋಷಿಯಲ್ ಮೀಡಿಯಾದಲ್ಲಿ ಕೋವಿಡ್-19 ಬಗ್ಗೆ ಬರುವ ಸುದ್ದಿ ಮತ್ತು ಮಾಹಿತಿಯ ಸತ್ಯಾಸತ್ಯತೆ ಪರಿಶೀಲಿಸಲು ಅತೀಕ್ ನೇತೃತ್ವದಲ್ಲಿ ಫ್ಯಾಕ್ಟ್ ಚೆಕ್ ಘಟಕ ರಚಿಸಿದೆ.

ನಕಲಿ ಸುದ್ದಿ

ನಕಲಿ ಸುದ್ದಿ

 • Share this:
  ಬೆಂಗಳೂರು(ಏ. 04): ಕೊರೋನಾ ವೈರಸ್ ಸೋಂಕು ಇಡೀ ವಿಶ್ವವನ್ನ ಬೆಚ್ಚಿಬೀಳಿಸುತ್ತಿದೆ. ಈ ಹೊತ್ತಲ್ಲೇ ಕಿಡಿಗೇಡಿಗಳು ಕೊರೊನಾ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ಧಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಇದು ಹೆಚ್ಚಾಗಿದೆ. ಇದರಿಂದಾಗಿ ಕೆಲ ಕಡೆ ಜನರು ತೀರಾ ಭಯಭೀತರಾಗುತ್ತಿದ್ದಾರೆ. ಕೆಲ ಕಡೆ ಜನರು ಪರಿಸ್ಥಿತಿಯ ಗಂಭೀರತೆ ಅರಿಯದೆ ಉಡಾಫೆ ಪ್ರವೃತ್ತಿ ತೋರುತ್ತಿದ್ದಾರೆ. ಇದನ್ನು ನಿಗ್ರಹಿಸಲು ರಾಜ್ಯ ಸರ್ಕಾರ ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರನ್ನು ನಿಯೋಜಿಸಿದೆ.

  ಅತೀಕ್ ಅವರು ಈ ನಿಟ್ಟಿನಲ್ಲಿ ಕಾರ್ಯೋಮುಖರಾಗಿದ್ದು, ನಕಲಿ ಸುದ್ದಿ ನಿಗ್ರಹಿಸಲು ಹೊಸ ಟ್ವಿಟ್ಟರ್ ಅಕೌಂಟ್ ತೆರೆದಿದ್ದಾರೆ. @DIPR_COVID19 ಹೆಸರಿನ ಈ ಟ್ವಿಟ್ಟರ್ ಹ್ಯಾಂಡಲ್​ನ್ನು ಸಾರ್ವಜನಿಕರ ಗಮನಕ್ಕೆ ತರಲಾಗಿದೆ. ಯಾರಿಗಾದರೂ ಫೇಕ್ ಸುದ್ದಿ ಅಥವಾ ಸುಳ್ಳು ಮಾಹಿತಿ ಕಣ್ಣಿಗೆ ಬಿದ್ದರೆ ಈ ಟ್ವೀಟ್ ಅಕೌಂಟನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿ ಎಂದು ಎಲ್.ಕೆ. ಅತೀಕ್ ಮನವಿ ಮಾಡಿದ್ದಾರೆ.  ಇದನ್ನೂ ಓದಿ: K Annamalai - ಅಪ್ಪ, ಅಮ್ಮ, ಮಗು ಎಲ್ಲರೂ ಸೆಲ್ ಫೋನ್​ನಲ್ಲೇ ತಲ್ಲೀನ; ಎಲ್ಲಿಗೆ ಬಂದಿದ್ಧೇವೆ? ಈ ಗೀಳು ಬಿಟ್ಟುಬಿಡಿ

  ಕರ್ನಾಟಕ ಸರ್ಕಾರವು ಸೋಷಿಯಲ್ ಮೀಡಿಯಾದಲ್ಲಿ ಕೋವಿಡ್-19 ಬಗ್ಗೆ ಬರುವ ಸುದ್ದಿ ಮತ್ತು ಮಾಹಿತಿಯ ಸತ್ಯಾಸತ್ಯತೆ ಪರಿಶೀಲಿಸಲು ಫ್ಯಾಕ್ಟ್ ಚೆಕ್ ಘಟಕ ರಚಿಸಿದೆ. ಎಲ್.ಕೆ. ಅತೀಕ್ ಅವರು ಈ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸರಣ ಇಲಾಖೆಯ ನಿರ್ದೇಶನದ ಮೇರೆಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಅವರು ಎಲ್.ಕೆ. ಅತೀಕ್ ಅವರನ್ನು ಈ ಕಾರ್ಯಕ್ಕೆ ನೇಮಕ ಮಾಡಿದ್ದಾರೆ.

  ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಸರ್ಕಾರ ಗಮನಾರ್ಹವೆನಿಸುವ ಹಲವು ಕ್ರಮಗಳನ್ನ ಕೈಗೊಂಡಿದೆ. ಹೋಮ್ ಕ್ವಾರಂಟೈನ್​ನಲ್ಲಿ ಇರಿಸಲು ಸೂಚಿಸಲಾಗಿರುವ ಕೊರೋನಾ ಸೋಂಕಿತರು ಅಥವಾ ಶಂಕಿತರನ್ನು ಟ್ರ್ಯಾಕ್ ಮಾಡಲು ಪ್ರತ್ಯೇಕ ಆ್ಯಪ್ ರಚಿಸಲಾಗಿದೆ. ಹಾಗೆಯೇ, ಕೊರೋನಾ ಸೋಂಕಿತರು ಎಲ್ಲೇ ಓಡಾಡಿದರೂ ಟ್ರ್ಯಾಕ್ ಮಾಡಿ ಆ ಸ್ಥಳಗಳ ಮಾಹಿತಿ ನೀಡುವ ಆ್ಯಪ್ ಕೂಡ ಇದೆ. ಇದು ಸಾರ್ವಜನಿಕರಿಗೆ ಲಭ್ಯವಿದೆ.

  First published: