Sunday Lockdown Rules - ಈ ಭಾನುವಾರದ ಲಾಕ್​ಡೌನ್​ನಲ್ಲಿ ಏನಿರುತ್ತೆ ಏನಿರಲ್ಲ? ಇಲ್ಲಿದೆ ಪಟ್ಟಿ

ಇವತ್ತು ಶನಿವಾರ ಸಂಜೆ 7ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೂ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಸಂಡೇ ಲಾಕ್ ಡೌನ್ ಅನ್ನು ಹೆಚ್ಚು ಕಟ್ಟುನಿಟ್ಟಾಗಿ ಜಾರಿಗೆ ತರುವ ಸಾಧ್ಯತೆ ಇದೆ.

news18-kannada
Updated:May 30, 2020, 9:20 AM IST
Sunday Lockdown Rules - ಈ ಭಾನುವಾರದ ಲಾಕ್​ಡೌನ್​ನಲ್ಲಿ ಏನಿರುತ್ತೆ ಏನಿರಲ್ಲ? ಇಲ್ಲಿದೆ ಪಟ್ಟಿ
ಕೊರೋನಾ ವೈರಸ್ ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಮೇ 30): ಭಾನುವಾರದ ಲಾಕ್ ಡೌನ್ ಹೆಚ್ಚು ಕಟ್ಟುನಿಟ್ಟಾಗಿ ಜಾರಿಯಾಗುವ ಸಾಧ್ಯತೆ ಇದೆ. ಕೊರೋನಾ ವೈರಸ್ ಸೋಂಕು ಹೆಚ್ಚೆಚ್ಚು ವ್ಯಾಪಿಸುತ್ತಿರುವುದರಿಂದ ರಾಜ್ಯ ಸರ್ಕಾರ ಭಾನುವಾರದ ಲಾಕ್ ಡೌನ್ ಅನ್ನು ಗಂಭೀರವಾಗಿ ಪರಿಗಣಿಸಿದೆ. ಕಳೆದ ಭಾನುವಾರ ಲಾಕ್ ಡೌನ್ ಇದ್ದರೂ ಜನರು ಆರಾಮವಾಗಿ ಓಡಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಎಚ್ಚರಿಕೆ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಇವತ್ತು ಶನಿವಾರ ಸಂಜೆ 7ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆವರೆಗೂ ಕರ್ಫ್ಯೂ ಜಾರಿ ಮಾಡಲಾಗಿದೆ.

ಇವತ್ತು ಮಧ್ಯರಾತ್ರಿ ಎಲ್ಲಾ ಪ್ರಮುಖ ರಸ್ತೆ, ಫ್ಲೈಓವರ್​ಗಳನ್ನು ಪೊಲೀಸರು ಬಂದ್ ಮಾಡಲಿದ್ಧಾರೆ. ಕೊರೋನಾ ಸೋಂಕು ತೀವ್ರವಾಗಿರುವ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ವಲಯವೆಂದು ಗುರುತಿಸಲಾಗಿರುವ ಪ್ರದೇಶಗಳಲ್ಲಿ ಹೈ ಅಲರ್ಟ್ ಇರಲಿದೆ. ಇಲ್ಲಿ ಸಂಪೂರ್ಣವಾಗಿ ಲಾಕ್ ಡೌನ್ ನಿಯಮಗಳನ್ನ ಪಾಲಿಸುವಂತೆ ಎಚ್ಚರ ವಹಿಸಲಾಗುತ್ತದೆ. ಇಲ್ಲಿ ಅನವಶ್ಯಕವಾಗಿ ರಸ್ತೆಯಲ್ಲಿ ಓಡಾಡಿದರೆ ಪ್ರಕರಣಗಳನ್ನ ದಾಖಲಿಸಲು ಪೊಲೀಸರು ಸಜ್ಜಾಗಿದ್ದಾರೆ. ಕಂಟೈನ್ಮೆಂಟ್ ಜೋನ್ ಅಷ್ಟೇ ಅಲ್ಲ ಎಲ್ಲೆಡೆಯೂ ಸಾರ್ವಜನಿಕರು ಅನಗತ್ಯವಾಗಿ ರಸ್ತೆ ಬರದಂತೆ ಪೊಲೀಸರು ಎಚ್ಚರ ವಹಿಸುತ್ತಿದ್ದಾರೆ.

ಇದನ್ನೂ ಓದಿ: ಸಿಎಎ, ಆರ್ಟಿಕಲ್ 370, ಟ್ರಿಪಲ್ ತಲಾಖ್ ಇತ್ಯಾದಿ: ಪ್ರಧಾನಿಯಿಂದ ಮೊದಲ ವರ್ಷದ ರಿಪೋರ್ಟ್ ಕಾರ್ಡ್

ಭಾನುವಾರ ಏನಿರುತ್ತದೆ?
* ಹಣ್ಣು ತರಕಾರಿ, ಮೊಟ್ಟೆ, ಮಾಂಸ, ದಿನಸಿ ಪದಾರ್ಥ ಅಂಗಡಿಗಳಿಗೆ ಅವಕಾಶ
* ಆಸ್ಪತ್ರೆ, ಮೆಡಿಕಲ್ ಸ್ಟೋರ್ಸ್, ಫಾರ್ಮಸಿ ತೆರೆದಿರುತ್ತವೆ
* ಮಾಧ್ಯಮಗಳು, ಡಾಕ್ಟರ್ಸ್, ನರ್ಸ್, ಆಂಬುಲೆನ್ಸ್ ಓಡಾಟಕ್ಕೆ ಅವಕಾಶ...* ಅನಾರೋಗ್ಯ ಸಮಸ್ಯೆವುಳ್ಳರಿಗೆ ಆಸ್ಪತ್ರೆಗೆ ಹೋಗಲು ಅವಕಾಶ
* ಗರ್ಭಿಣಿ ಸ್ತ್ರೀಯರಿಗೆ ತಪಾಸಣೆಗೆ ಸಮಸ್ಯೆ ಇಲ್ಲ

ನಿರ್ಬಂಧಗಳೇನು?
* ಸಾರ್ವಜನಿಕರ ಸಂಚಾರ ನಿರ್ಬಂಧ
* ನಗರದಲ್ಲಿ ಮಧ್ಯದಂಗಡಿಗಳು ಬಂದ್
* ಅಗತ್ಯ ವಸ್ತು ಹೊರತುಪಡಿಸಿ ಉಳಿದ ಅಂಗಡಿ ಮುಂಗಟ್ಟು ಬಂದ್
* ನಗರದ ಎಲ್ಲಾ ಪ್ರಮುಖ ರಸ್ತೆ ಬಂದ್
* ಬಾರ್, ಸಲೂನ್, ಫ್ಯಾನ್ಸಿ ಸ್ಟೋರ್ ಸೇರಿದಂತೆ ಅಗತ್ಯವಲ್ಲದ ವಸ್ತುಗಳ ಅಂಗಡಿ ಬಂದ್
* ಗಾರ್ಮೆಂಟ್ಸ್ ಪ್ಯಾಕ್ಟರಿ, ಎಲ್ಲಾ ಕಾರ್ಖಾನೆಗಳು, ಕಂಪನಿಗಳು, ಎಲ್ಲಾ ಪಾರ್ಕ್​ಗಳ ಕಾರ್ಯನಿರ್ವಹಣೆ ಇಲ್ಲ
* ಆಟೋ, ಟ್ಯಾಕ್ಸಿ, ಕ್ಯಾಬ್ ಸೇವೆ ಬಂದ್
* ಖಾಸಗಿ ವಾಹನ ಬಳಸಿ ಓಡಾಡುವಂತಿಲ್ಲ

First published: May 30, 2020, 8:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading