HOME » NEWS » Coronavirus-latest-news » LIST OF BENGALURU HOT SPOTS AS PER THE COVID 19 POSITIVE CASES GNR

ತೀವ್ರಗೊಂಡ ಕೊರೋನಾ ವೈರಸ್​​ ಭೀತಿ: ಬೆಂಗಳೂರಿನಲ್ಲಿ 38 ವಾರ್ಡ್​​ಗಳನ್ನು ಹಾಟ್​ಸ್ಪಾಟ್​​​ ಎಂದು ಗುರುತಿಸಿದ ಬಿಬಿಎಂಪಿ

ಔಷಧ, ದಿನಸಿ ಕೊಳ್ಳಲೂ ಮನೆಯಿಂದ ಹೊರಬರುವಂತಿಲ್ಲ. ಮಾಧ್ಯಮಗಳಿಗೂ ಏರಿಯಾ ಗಡಿಯಿಂದ ಒಳಗೆ ಪ್ರವೇಶವಿಲ್ಲ. ಇಡೀ ಪ್ರದೇಶದ ಜನ ಒಳಹೊರಗೆ ಓಡಾಡುವಂತಿಲ್ಲ.

news18-kannada
Updated:April 15, 2020, 7:17 AM IST
ತೀವ್ರಗೊಂಡ ಕೊರೋನಾ ವೈರಸ್​​ ಭೀತಿ: ಬೆಂಗಳೂರಿನಲ್ಲಿ 38 ವಾರ್ಡ್​​ಗಳನ್ನು ಹಾಟ್​ಸ್ಪಾಟ್​​​ ಎಂದು ಗುರುತಿಸಿದ ಬಿಬಿಎಂಪಿ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಏ.14): ರಾಜ್ಯಾದಂತ ಕೊರೋನಾ ವೈರಸ್​​ ಆರ್ಭಟ ಮುಂದುವರಿದಿದೆ. ಅದರಲ್ಲೂ ಬೆಂಗಳೂರು, ಮೈಸೂರು, ಬೀದರ್​​​, ಕಲಬುರ್ಗಿಯಲ್ಲಂತೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಈ ಮಧ್ಯೆ ಬೃಹತ್​​ ಬೆಂಗಳೂರು ಮಹಾನಗರ ಪಾಲಿಕೆ ನಗರದಲ್ಲಿ 38 ವಾರ್ಡ್​​ಗಳನ್ನು ಹಾಟ್​​ಸ್ಪಾಟ್ ಎಂದು ಗುರುತಿಸಿದೆ. ಪ್ರತೀ ಜೋನ್​​ನಲ್ಲೂ ಇಂತಿಷ್ಟು ವಾರ್ಡ್​ಗಳನ್ನು ಎಂದು ಹಾಟ್​​ಸ್ಪಾಟ್ ಗುರುತಿಸಿರುವ ಬಿಬಿಎಂಪಿಯೂ, ಬೊಮ್ಮನಹಳ್ಳಿ- 2, ಮಹದೇವಪುರ- 6, ಪೂರ್ವ ವಲಯ- 9, ದಕ್ಷಿಣ ವಲಯ- 12, ಯಲಹಂಕ- 2, ಪಶ್ಚಿಮ ವಲಯ- 7 ವಾರ್ಡ್​​​ಗಳಲ್ಲಿ ಕಟ್ಟುನಿಟ್ಟಿನ ಲಾಕ್​​ಡೌನ್​​ ಮಾಡಿದೆ.

ಇನ್ನು, ಹಾಟ್​ಸ್ಪಾಟ್​ ಜತೆಗೆ ರೆಡ್​​ ಜೋನ್​​​, ಗ್ರೀನ್​​​ ಜೋನ್​​, ಆರೆಂಜ್​​ ಜೋನ್​ ಪ್ರದೇಶಗಳನ್ನು ಸದ್ಯದಲ್ಲೇ ಗುರುತಿಸಲಿದೆ.

ಹಾಟ್​​ಸ್ಪಾಟ್ ಎಂದರೇನು?

ಯಾವುದೇ ಪ್ರದೇಶದಲ್ಲಿ 2 ಅಥವಾ ಹೆಚ್ಚು ಜನ ಪಾಸಿಟಿವ್ ಎಂದು ಕಂಡುಬಂದರೆ ಆ ಪ್ರದೇಶವನ್ನು ಹಾಟ್​ಸ್ಪಾಟ್ ಎನ್ನಲಾಗುತ್ತದೆ. ಈ ಪ್ರದೇಶಗಳಲ್ಲಿ ಜನರಿಗೆ ಎಲ್ಲಾ ಅಗತ್ಯ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ವಿಶೇಷ ಪರವಾನಗಿ ಇರುವ ಆಂಬ್ಯುಲೆನ್ಸ್ ಗಳು ಮಾತ್ರ ಈ ಪ್ರದೇಶದಲ್ಲಿ ಓಡಾಡುತ್ತವೆ. ಆರೋಗ್ಯ ಕಾರ್ಯಕರ್ತರು ಪ್ರತಿದಿನ ಮನೆಮನೆಗೆ ತೆರಳಿ ತಪಾಸಣೆ, ಸ್ವಚ್ಛತೆಯ ಪರೀಕ್ಷೆ ಮಾಡುತ್ತಾರೆ. ನಿಯಮಿತವಾಗಿ ಇಡೀ ಪ್ರದೇಶವನ್ನು ರಾಸಾಯನಿಕ ಬಳಸಿ ಸ್ವಚ್ಛ ಮಾಡಲಾಗುತ್ತದೆ. ಇಡೀ ಪ್ರದೇಶದ ಎಲ್ಲಾ ಜನರನ್ನೂ ತಪಾಸಣೆ ಮಾಡಲಾಗುತ್ತದೆ.

ಔಷಧ, ದಿನಸಿ ಕೊಳ್ಳಲೂ ಮನೆಯಿಂದ ಹೊರಬರುವಂತಿಲ್ಲ. ಮಾಧ್ಯಮಗಳಿಗೂ ಏರಿಯಾ ಗಡಿಯಿಂದ ಒಳಗೆ ಪ್ರವೇಶವಿಲ್ಲ. ಇಡೀ ಪ್ರದೇಶದ ಜನ ಒಳಹೊರಗೆ ಓಡಾಡುವಂತಿಲ್ಲ.

ಇದನ್ನೂ ಓದಿ: ‘ಏಪ್ರಿಲ್​​​ 20ನೇ ತಾರೀಕುವರೆಗೂ ಮದ್ಯ ಮಾರಾಟ ಇಲ್ಲ‘ - ಅಬಕಾರಿ ಇಲಾಖೆ ಆಯುಕ್ತ ಆದೇಶ

ರೆಡ್ ಜೋನ್- ಹೆಚ್ಚು ಸಂಖ್ಯೆಯಲ್ಲಿ ಪಾಸಿಟಿವ್ ರೋಗಿಗಳು ಕಂಡುಬರುವುದರ ಜೊತೆಗೆ ಉಳಿದವರಿಗೂ ಹರಡುತ್ತಿರುವ ಪ್ರದೇಶ. ಇಲ್ಲಿ ಜನ ಯಾರೂ ಮನೆಯಿಂದ ಹೊರಬರುವಂತಿಲ್ಲ. ಈ ಪ್ರದೇಶ ಪೂರ್ಣವಾಗಿ ಲಾಕ್ ಆಗಿರುತ್ತದೆ. ಈ ಪ್ರದೇಶದಿಂದ ಯಾರೂ ಹೊರಹೋಗುವುದು, ಒಳಬರುವುದು ನಿಷಿದ್ಧ. ಅಗತ್ಯ ವಸ್ತುಗಳನ್ನು ಕೊಳ್ಳಲು ಕೂಡಾ ಯಾರೂ ಮನೆಯಿಂದ ಹೊರಬರುವಂತಿಲ್ಲ. ಯಾವ ಅಂಗಡಿ-ಮುಂಗಟ್ಟುಗಳೂ ತೆರೆಯುವಂತಿಲ್ಲ. ಅಗತ್ಯ ವಸ್ತುಗಳನ್ನು ಮನೆಗಳಿಗೆ ಸರ್ಕಾರವೇ ಸರಬರಾಜು ಮಾಡುತ್ತದೆ.ಆರೆಂಜ್ ಜೋನ್- ಪಾಸಿಟಿವ್ ಪ್ರಕರಣಗಳಿವೆ, ಆದರೆ ಪರಿಸ್ಥಿತಿ ಹತೋಟಿಯಲ್ಲಿದೆ. ಹೊಸಾ ಪ್ರಕರಣಗಳು ವರದಿಯಾಗಿಲ್ಲ, ಸೋಂಕು ಹರಡುತ್ತಿಲ್ಲ ಎನ್ನುವಂಥಾ ಪ್ರದೇಶಗಳು. ಇಲ್ಲಿ ಅತ್ಯಗತ್ಯವಾದ ಔಷಧ ಅಂಗಡಿ, ಕ್ಲಿನಿಕ್, ದಿನಸಿ-ತರಕಾರಿ ಅಂಗಡಿಗಳು ಮಾತ್ರ ತೆರೆಯಲು ಅವಕಾಶ. ಅತ್ಯವಶ್ಯವಾದ ವಸ್ತುಗಳನ್ನು ಕೊಳ್ಳಲು ಮಾತ್ರ ಜನ ಮನೆಯಿಂದ ಹೊರಬರಬೇಕು. ಸಾಮಾಜಿಕ ಅಂತರ ಕಡ್ಡಾಯ.

ಗ್ರೀನ್ ಜೋನ್ - ಇಡೀ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪಾಸಿಟಿವ್ ಪ್ರಕರಣ ಇಲ್ಲದಿರುವುದು. ಜನರ ಓಡಾಟಕ್ಕೆ ತಡೆಯಿಲ್ಲ. ಜಿಲ್ಲೆಯ ಒಳಗೆ ಎಲ್ಲಾ ರೀತಿಯ ವ್ಯಾಪಾರ ವಹಿವಾಟು ನಡೆಯಲು ಅವಕಾಶ. ಆದರೆ ಸಾಮಾಜಿಕ ಅಂತರ- ಮಾಸ್ಕ್ ಧರಿಸುವಿಕೆ ಕಡ್ಡಾಯ. ಜಿಲ್ಲೆಯೊಳಗಿನವರು ಗಡಿ ದಾಟುವಂತಿಲ್ಲ. ಯಾವುದೇ ವ್ಯಕ್ತಿ ಅಥವಾ ವಾಹನ ಜಿಲ್ಲೆಯಿಂದ ಹೊರಗೆ ಅಥವಾ ಬೇರೆ ಕಡೆಯಿಂದ ಜಿಲ್ಲೆಯೊಳಗೆ ಓಡಾಟ ನಿಷಿದ್ಧ.
First published: April 15, 2020, 7:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories