HOME » NEWS » Coronavirus-latest-news » LIST OF BENGALURU HOT SPOTS AS PER THE CORONAVIRUS GNR

ತೀವ್ರಗೊಂಡ ಕೊರೋನಾ: ಬೆಂಗಳೂರಿನಲ್ಲಿ 36 ವಾರ್ಡ್​​ಗಳನ್ನು ಮತ್ತೆ ಹಾಟ್​ಸ್ಪಾಟ್​​​ ಎಂದು ಗುರುತಿಸಿದ ಬಿಬಿಎಂಪಿ

ಔಷಧ, ದಿನಸಿ ಕೊಳ್ಳಲೂ ಮನೆಯಿಂದ ಹೊರಬರುವಂತಿಲ್ಲ. ಮಾಧ್ಯಮಗಳಿಗೂ ಏರಿಯಾ ಗಡಿಯಿಂದ ಒಳಗೆ ಪ್ರವೇಶವಿಲ್ಲ. ಇಡೀ ಪ್ರದೇಶದ ಜನ ಒಳಹೊರಗೆ ಓಡಾಡುವಂತಿಲ್ಲ.

news18-kannada
Updated:April 19, 2020, 9:21 PM IST
ತೀವ್ರಗೊಂಡ ಕೊರೋನಾ: ಬೆಂಗಳೂರಿನಲ್ಲಿ 36 ವಾರ್ಡ್​​ಗಳನ್ನು ಮತ್ತೆ ಹಾಟ್​ಸ್ಪಾಟ್​​​ ಎಂದು ಗುರುತಿಸಿದ ಬಿಬಿಎಂಪಿ
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಏ.19): ಕರ್ನಾಟಕದಲ್ಲಿ ಕೊರೋನಾ ವೈರಸ್​​ ಆರ್ಭಟ ಮುಂದುವರಿದಿದೆ. ಬೆಂಗಳೂರು, ಮೈಸೂರು, ಬೀದರ್​​​, ಕಲಬುರ್ಗಿ ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಕೊರೋನಾಗೆ ಬಲಿಯಾಗುವವರ ಸಂಖ್ಯೆ ಏರುತ್ತಲೇ ಇದೆ. ಹೀಗಿರುವಾಗಲೇ ಬೃಹತ್​​ ಬೆಂಗಳೂರು ಮಹಾನಗರ ಪಾಲಿಕೆ ನಗರದಲ್ಲಿ ಮತ್ತೆ 35 ವಾರ್ಡ್​​ಗಳನ್ನು ಹಾಟ್​​ಸ್ಪಾಟ್ ಎಂದು ಗುರುತಿಸಿದೆ. ನಗರದ 198 ವಾರ್ಡ್​ಗಳ ಪೈಕಿ 7 ವಲಯಗಳಲ್ಲಿ 35 ವಾರ್ಡ್​ಗಳು ಹಾಟ್​ಸ್ಪಾಟ್​​ ಎಂದು ಘೋಷಿಸಿದೆ.

ಹೀಗಿವೆ 32 ಹಾಟ್​​ಸ್ಪಾಟ್​​ಗಳು..


  • ಬೊಮ್ಮನಹಳ್ಳಿ ಝೋನ್: ಸಿಂಗಸಂದ್ರ ವಾರ್ಡ್

  • ಮಹದೇವಪುರ ಝೋನ್: ಹಗದೂರು, ಗರುಡಾಚಾರ್ ಪಾಳ್ಯ ವಾರ್ಡ್, ವರ್ತೂರು ವಾರ್ಡ್, ಹೂಡಿ ವಾರ್ಡ್, ಹೊರಮಾವು ವಾರ್ಡ್

  • ಈಸ್ಟ್ ಝೋನ್: ಹೋಯ್ಸಳ ನಗರ ವಾರ್ಡ್, ಹೊಸ ತಿಪ್ಪಸಂದ್ರ ವಾರ್ಡ್, ವಸಂತ್ ನಗರ ವಾರ್ಡ್, ಲಿಂಗರಾಜಪುರ ವಾರ್ಡ್, ರಾಧಾಕೃಷ್ಣ ಟೆಂಪಲ್ ವಾರ್ಡ್, ಸಿ.ವಿ.ರಾಮನ್ ನಗರ ವಾರ್ಡ್, ರಾಮಸ್ವಾಮಿ ಪಾಳ್ಯ ವಾರ್ಡ್, ಮಾರುತಿ ಸೇವಾ ನಗರ ವಾರ್ಡ್, ದೊಮ್ಮಲೂರು ವಾರ್ಡ್

  • ಸೌಥ್ ಝೋನ್:  ಸುಧಾಮನಗರ ವಾರ್ಡ್, ಕರೀಸಂದ್ರ ವಾರ್ಡ್, ಈಜಿಪುರ ವಾರ್ಡ್, ಗುರಪ್ಪನಪಾಳ್ಯ ವಾರ್ಡ್, ಅತ್ತಿಗುಪ್ಪೆ ವಾರ್ಡ್, ಶಾಕಾಂಬರಿ ನಗರ ವಾರ್ಡ್, ಜೆ.ಪಿ.ನಗರ ವಾರ್ಡ್, ಬಾಪೂಜಿನಗರ ವಾರ್ಡ್, ಹೊಸಹಳ್ಳಿ ವಾರ್ಡ್
  • ವೆಸ್ಟ್ ಝೋನ್: ರಾಜ್‌ಮಹಲ್ ವಾರ್ಡ್, ಸುಭಾಶ್ ನಗರ ವಾರ್ಡ್, ನಾಗರಬಾವಿ ವಾರ್ಡ್, ನಾಗಪುರ ವಾರ್ಡ್, ಶಿವನಗರ ವಾರ್ಡ್, ಪಾದರಾಯನಪುರ ವಾರ್ಡ್, ಕೆ.ಆರ್.ಮರ್ಕೆಟ್ ವಾರ್ಡ್, ಚಲುವಾದಿ ಪಾಳ್ಯ ವಾರ್ಡ್

  • ಯಲಹಂಕ ಝೋನ್:  ಥಣಿಸಂದ್ರ ವಾರ್ಡ್, ಬ್ಯಾಟರಾಯನಪುರ ವಾರ್ಡ್

  • ಆರ್ ಆರ್ ನಗರ ಝೋನ್: ಆರ್. ಆರ್. ನಗರ ವಾರ್ಡ್


ಹಾಟ್​​ಸ್ಪಾಟ್ ಎಂದರೇನು?

ಯಾವುದೇ ಪ್ರದೇಶದಲ್ಲಿ 2 ಅಥವಾ ಹೆಚ್ಚು ಜನ ಪಾಸಿಟಿವ್ ಎಂದು ಕಂಡುಬಂದರೆ ಆ ಪ್ರದೇಶವನ್ನು ಹಾಟ್​ಸ್ಪಾಟ್ ಎನ್ನಲಾಗುತ್ತದೆ. ಈ ಪ್ರದೇಶಗಳಲ್ಲಿ ಜನರಿಗೆ ಎಲ್ಲಾ ಅಗತ್ಯ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ವಿಶೇಷ ಪರವಾನಗಿ ಇರುವ ಆಂಬ್ಯುಲೆನ್ಸ್ ಗಳು ಮಾತ್ರ ಈ ಪ್ರದೇಶದಲ್ಲಿ ಓಡಾಡುತ್ತವೆ. ಆರೋಗ್ಯ ಕಾರ್ಯಕರ್ತರು ಪ್ರತಿದಿನ ಮನೆಮನೆಗೆ ತೆರಳಿ ತಪಾಸಣೆ, ಸ್ವಚ್ಛತೆಯ ಪರೀಕ್ಷೆ ಮಾಡುತ್ತಾರೆ. ನಿಯಮಿತವಾಗಿ ಇಡೀ ಪ್ರದೇಶವನ್ನು ರಾಸಾಯನಿಕ ಬಳಸಿ ಸ್ವಚ್ಛ ಮಾಡಲಾಗುತ್ತದೆ. ಇಡೀ ಪ್ರದೇಶದ ಎಲ್ಲಾ ಜನರನ್ನೂ ತಪಾಸಣೆ ಮಾಡಲಾಗುತ್ತದೆ.

ಔಷಧ, ದಿನಸಿ ಕೊಳ್ಳಲೂ ಮನೆಯಿಂದ ಹೊರಬರುವಂತಿಲ್ಲ. ಮಾಧ್ಯಮಗಳಿಗೂ ಏರಿಯಾ ಗಡಿಯಿಂದ ಒಳಗೆ ಪ್ರವೇಶವಿಲ್ಲ. ಇಡೀ ಪ್ರದೇಶದ ಜನ ಒಳಹೊರಗೆ ಓಡಾಡುವಂತಿಲ್ಲ.

ಇದನ್ನೂ ಓದಿ: ಕೊರೋನಾ ಲಾಕ್​ಡೌನ್​​: ‘ರಾಜ್ಯದಲ್ಲಿ ಏ.21ರ ನಂತರ ಹೊಸ ಆದೇಶ’ - ಸಿಎಂ ಯಡಿಯೂರಪ್ಪ

ರೆಡ್ ಜೋನ್- ಹೆಚ್ಚು ಸಂಖ್ಯೆಯಲ್ಲಿ ಪಾಸಿಟಿವ್ ರೋಗಿಗಳು ಕಂಡುಬರುವುದರ ಜೊತೆಗೆ ಉಳಿದವರಿಗೂ ಹರಡುತ್ತಿರುವ ಪ್ರದೇಶ. ಇಲ್ಲಿ ಜನ ಯಾರೂ ಮನೆಯಿಂದ ಹೊರಬರುವಂತಿಲ್ಲ. ಈ ಪ್ರದೇಶ ಪೂರ್ಣವಾಗಿ ಲಾಕ್ ಆಗಿರುತ್ತದೆ. ಈ ಪ್ರದೇಶದಿಂದ ಯಾರೂ ಹೊರಹೋಗುವುದು, ಒಳಬರುವುದು ನಿಷಿದ್ಧ. ಅಗತ್ಯ ವಸ್ತುಗಳನ್ನು ಕೊಳ್ಳಲು ಕೂಡಾ ಯಾರೂ ಮನೆಯಿಂದ ಹೊರಬರುವಂತಿಲ್ಲ. ಯಾವ ಅಂಗಡಿ-ಮುಂಗಟ್ಟುಗಳೂ ತೆರೆಯುವಂತಿಲ್ಲ. ಅಗತ್ಯ ವಸ್ತುಗಳನ್ನು ಮನೆಗಳಿಗೆ ಸರ್ಕಾರವೇ ಸರಬರಾಜು ಮಾಡುತ್ತದೆ.ಆರೆಂಜ್ ಜೋನ್- ಪಾಸಿಟಿವ್ ಪ್ರಕರಣಗಳಿವೆ, ಆದರೆ ಪರಿಸ್ಥಿತಿ ಹತೋಟಿಯಲ್ಲಿದೆ. ಹೊಸಾ ಪ್ರಕರಣಗಳು ವರದಿಯಾಗಿಲ್ಲ, ಸೋಂಕು ಹರಡುತ್ತಿಲ್ಲ ಎನ್ನುವಂಥಾ ಪ್ರದೇಶಗಳು. ಇಲ್ಲಿ ಅತ್ಯಗತ್ಯವಾದ ಔಷಧ ಅಂಗಡಿ, ಕ್ಲಿನಿಕ್, ದಿನಸಿ-ತರಕಾರಿ ಅಂಗಡಿಗಳು ಮಾತ್ರ ತೆರೆಯಲು ಅವಕಾಶ. ಅತ್ಯವಶ್ಯವಾದ ವಸ್ತುಗಳನ್ನು ಕೊಳ್ಳಲು ಮಾತ್ರ ಜನ ಮನೆಯಿಂದ ಹೊರಬರಬೇಕು. ಸಾಮಾಜಿಕ ಅಂತರ ಕಡ್ಡಾಯ.

ಗ್ರೀನ್ ಜೋನ್ - ಇಡೀ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪಾಸಿಟಿವ್ ಪ್ರಕರಣ ಇಲ್ಲದಿರುವುದು. ಜನರ ಓಡಾಟಕ್ಕೆ ತಡೆಯಿಲ್ಲ. ಜಿಲ್ಲೆಯ ಒಳಗೆ ಎಲ್ಲಾ ರೀತಿಯ ವ್ಯಾಪಾರ ವಹಿವಾಟು ನಡೆಯಲು ಅವಕಾಶ. ಆದರೆ ಸಾಮಾಜಿಕ ಅಂತರ- ಮಾಸ್ಕ್ ಧರಿಸುವಿಕೆ ಕಡ್ಡಾಯ. ಜಿಲ್ಲೆಯೊಳಗಿನವರು ಗಡಿ ದಾಟುವಂತಿಲ್ಲ. ಯಾವುದೇ ವ್ಯಕ್ತಿ ಅಥವಾ ವಾಹನ ಜಿಲ್ಲೆಯಿಂದ ಹೊರಗೆ ಅಥವಾ ಬೇರೆ ಕಡೆಯಿಂದ ಜಿಲ್ಲೆಯೊಳಗೆ ಓಡಾಟ ನಿಷಿದ್ಧ.
First published: April 19, 2020, 9:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories