HOME » NEWS » Coronavirus-latest-news » LIQUOR SHOPS ARE CLOSED IN KARNATAKA LOCKDOWN 2021 SESR

Karnataka LockDown: ಮದ್ಯದಂಗಡಿಗಳು ಬಂದ್​; ಪಾರ್ಸೆಲ್​ಗೆ ಅನುಮತಿ ನೀಡಿದ ಸರ್ಕಾರ

ಜನತಾ ಕರ್ಫ್ಯೂನಲ್ಲಿ ಬೆಳಗ್ಗಿನ ವೇಳೆ ಮದ್ಯದಂಗಡಿಗಳು ತೆರೆಯುವಿಕೆಗೆ ಅವಕಾಶ ನೀಡಿದ್ದ ಸರ್ಕಾರ ಲಾಕ್​ಡೌನ್​ನಲ್ಲಿ ಸಂಪೂರ್ಣವಾಗಿ ಬಂದ್​ ಮಾಡಿದೆ.

news18-kannada
Updated:May 7, 2021, 8:12 PM IST
Karnataka LockDown: ಮದ್ಯದಂಗಡಿಗಳು ಬಂದ್​; ಪಾರ್ಸೆಲ್​ಗೆ ಅನುಮತಿ ನೀಡಿದ ಸರ್ಕಾರ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಮೇ. 7): ರಾಜ್ಯದಲ್ಲಿ ಕೊರೋನಾ ಸೋಂಕು ನಿರ್ವಹಣೆಗೆ ಕಳೆದೆರಡು ವಾರಗಳಿಂದ ಸರ್ಕಾರ ಜನತಾ ಕರ್ಫ್ಯೂ ಜಾರಿ ಮಾಡಿದೆ. ಆದರೂ ಕೂಡ ಸೋಂಕಿನ ಪ್ರಮಾಣ ತಗ್ಗಿಲ್ಲ. ಇದೇ ಹಿನ್ನಲೆ ಸರ್ಕಾರ ಮೇ. 10 ರಿಂದ ಮೇ 24ರವರೆಗೆ ಲಾಕ್​ಡೌನ್​ ಮಾಡಿ ಆದೇಶ ನೀಡಿದೆ. ಈ ವೇಳೆ ಹಲವು ವಿನಾಯಿತಿಗಳನ್ನು ನೀಡಿದ್ದು, ಕೆಲವೊಂದಕ್ಕೆ ನಿರ್ಬಂಧವಿಧಿಸಲಾಗಿದೆ. ಜನತಾ ಕರ್ಫ್ಯೂನಲ್ಲಿ ಬೆಳಗ್ಗಿನ ವೇಳೆ ಮದ್ಯದಂಗಡಿಗಳು ತೆರೆಯುವಿಕೆಗೆ ಅವಕಾಶ ನೀಡಿದ್ದ ಸರ್ಕಾರ ಲಾಕ್​ಡೌನ್​ನಲ್ಲಿ ಸಂಪೂರ್ಣವಾಗಿ ಬಂದ್​ ಮಾಡಿದೆ. ರಾಜ್ಯದಲ್ಲಿ ಸಂಪೂರ್ಣವಾಗಿ ಮದ್ಯದಂಗಡಿಗಳನ್ನು ಬಂದ್​ ಮಾಡಿದ್ದು ಪಾರ್ಸೆಲ್​ಗೆ ಮಾತ್ರ ಅವಕಾಶ ನೀಡಲಾಗಿದೆ.

ಉಳಿದಂತೆ ಬಹುತೇಕ ಜನತಾ ಕರ್ಪ್ಯೂನಲ್ಲಿದ್ದ ನಿಯಮಗಳೇ ಜಾರಿಯಲ್ಲಿರಲಿವೆ. ಅಗತ್ಯ ವಸ್ತುಗಳನ್ನು ಕೊಳ್ಳಲು ಅವಕಾಶ ನೀಡಿದೆ. ಬೆಳಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತು ಕೊಳ್ಳಬಹುದಾಗಿದೆ. ವಿಶೇಷ ಎಂದರೇ ಅಗತ್ಯ ವಸ್ತು ತರಲು ಜನರು ವಾಹನಗಳನ್ನು ತರದಂತೆ ಸೂಚಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ಕಠಿಣ ಲಾಕ್​ಡೌನ್​ ರಾಜ್ಯಾದ್ಯಂತ ಜಾರಿಯಲ್ಲಿ ಇರಲಿದೆ. ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ  10 ಗಂಟೆವರೆಗೆ ಮಾತ್ರ ಹಾಲು ಸಿಗಲಿದೆ. ಪಬ್​ ಬಾರ್​, ಹೋಟೆಲ್​ ಬಂದ್​ ಆಗಲಿದೆ.

ಸೋಂಕು ನಿರ್ವಹಣೆಗೆ ಈ ಕಟ್ಟು ನಿಟ್ಟಿನ ಕ್ರಮ ಅನಿವಾರ್ಯವಾಗಿದ್ದು, ಇದಕ್ಕೆ ಜನರು ಎಷ್ಟು ಸಹಕಾರ ನೀಡುತ್ತಾರೋ ಕಾದು ನೋಡುತ್ತೇವೆ. ಅಗತ್ಯವಿದ್ದಲ್ಲಿ ಮತ್ತಷ್ಟು ಕಠಿಣ ಕ್ರಮಕ್ಕೆ ಸಿದ್ದರಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.

ಜನತಾ ಕರ್ಫ್ಯೂ ನಡುವೆಯೂ ಇಂದು ಸೋಂಕಿತರ ಪ್ರಮಾಣ ಏರಿಕೆ ಕಂಡು ಬಂದಿದೆ. ರಾಜ್ಯದಲ್ಲಿ ಇಂದು ಕೂಡ  48,781 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ.
Published by: Seema R
First published: May 7, 2021, 7:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories