ಇದು ನಿಮಗೆ ಗೊತ್ತೇ?: ಕೊರೋನಾಗೆ ಬಲಿಯಾದವರಿಗಿಂತ ದುಪ್ಪಟ್ಟು ಜನ ಸಾರಾಯಿ ಸಿಗಲಿಲ್ಲ ಎಂದು ಸತ್ತಿದ್ದಾರೆ..!

ಆಶ್ಚರ್ಯದ ಸಂಗತಿಯೆಂದರೆ ದೇಶದಲ್ಲಿ ಕೊರೋನಾ ವೈರಸ್​ಗೆ ಬಲಿಯಾದವರಿಗಿಂತ ಹೆಚ್ಚು ಮಂದಿ ಮದ್ಯ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

news18-kannada
Updated:April 1, 2020, 3:50 PM IST
ಇದು ನಿಮಗೆ ಗೊತ್ತೇ?: ಕೊರೋನಾಗೆ ಬಲಿಯಾದವರಿಗಿಂತ ದುಪ್ಪಟ್ಟು ಜನ ಸಾರಾಯಿ ಸಿಗಲಿಲ್ಲ ಎಂದು ಸತ್ತಿದ್ದಾರೆ..!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಏ.01): ಮಾರಣಾಂತಿಕ ಕೊರೋನಾ ವೈರಸ್​​ಗೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈ ವೈರಸ್​ ಭೀತಿಯಿಂದಾಗಿಯೇ ದೇಶದಲ್ಲಿ 3 ವಾರಗಳ ಕಾಲ ಲಾಕ್​ಡೌನ್ ಜಾರಿ ಮಾಡಲಾಗಿದೆ. ಈ ವೇಳೆ ಅಗತ್ಯ ಮತ್ತು ತುರ್ತು ಸೇವೆ ಹೊರತುಪಡಿಸಿ ಇನ್ಯಾವುದೇ ಸೇವೆಯ ಲಭ್ಯತೆ ಇರುವುದಿಲ್ಲ. ಹೀಗಾಗಿ ಮದ್ಯ ಮಾರಾಟವನ್ನು ದೇಶಾದ್ಯಂತ ನಿಷೇಧಿಸಲಾಗಿದೆ. ರಾಜ್ಯದಲ್ಲೂ ಸಹ ಕೊರೋನಾ ನಿಗ್ರಹಕ್ಕಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕರ್ನಾಟಕದಲ್ಲಿ ಈವರೆಗೆ ಕೊರೋನಾ ವೈರಸ್​ಗೆ ಬಲಿಯಾದವರು 3 ಮಂದಿ. ಆದರೆ ವಿಪರ್ಯಾಸ ಎಂದರೆ ಲಾಕ್​ಡೌನ್​ ವೇಳೆ ಕುಡಿಯಲು ಮದ್ಯ ಸಿಗಲಿಲ್ಲ ಎಂದು ಸತ್ತವರ ಸಂಖ್ಯೆ 6.

ರಾಜ್ಯದಲ್ಲಿ ಮದ್ಯಪಾನಿಗಳು ಎಣ್ಣೆ ಸಿಗದ ಹಿನ್ನೆಲೆ, ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಕೊರೋನಾ ಸಾವಿನ ಸಂಖ್ಯೆಯನ್ನೂ ಮೀರಿಸಿದೆ. ಕಳೆದ ಒಂದು ವಾರದಲ್ಲಿ ರಾಜ್ಯದ ವಿವಿಧೆಡೆ ಆರು ಜನ ಮದ್ಯ ಸಿಗಲಿಲ್ಲವೆಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೋಲಾರ, ರಾಮನಗರ, ದಕ್ಷಿಣ ಕನ್ನಡ, ಹುಬ್ಬಳ್ಳಿ, ಹಾಸನ ಹೀಗೆ ಹಲವೆಡೆ ಮದ್ಯವ್ಯಸನಿಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

1. ರಾಮನಗರ ಜಿಲ್ಲೆಯ ಹುಲಿಕಲ್​ನಲ್ಲಿ ರಮೇಶ್ ಎಂಬಾತ ಕುಡಿಯಲು ಎಣ್ಣೆ ಸಿಗದ ಹಿನ್ನಲೆ ಮಂಗಳವಾರ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ಕೂಲಿ ಕೆಲಸ ಮಾಡಿಕೊಂಡಿದ್ದು, ಕಳೆದ ಕೆಲ ದಿನಗಳಿಂದ ಮದ್ಯ ಸಿಗದೆ ಖಿನ್ನತೆಗೂ ಒಳಗಾಗಿದ್ದ ಎನ್ನಲಾಗಿದೆ.

2.ಕೋಲಾರದ ಕೆಜಿಎಫ್​ ತಾಲೂಕಿನ ಕೆ.ಡಿ.ಹಳ್ಳಿಯಲ್ಲಿ ಆನಂದ್ ಎಂಬಾತ ಮದ್ಯ ಸಿಗದ ಹಿನ್ನೆಲೆ, ಸೋಮವಾರ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಮದ್ಯವ್ಯಸನಿಯಾಗಿದ್ದು, ಪ್ರತಿದಿನ ತಪ್ಪದೇ ಮದ್ಯ ಕುಡಿಯುತ್ತಿದ್ದ ಎಂದು ತಿಳಿದು ಬಂದಿದೆ.

ಕೊರೋನಾ ರೋಗಕ್ಕೆ ಜಾತಿ, ಧರ್ಮದ ಬಣ್ಣ ಬಳಿಯಬೇಡಿ; ಸಿದ್ದರಾಮಯ್ಯ ಮನವಿ

3. ಹುಬ್ಬಳ್ಳಿಯಲ್ಲಿ ಮದ್ಯವ್ಯಸನಿಯಾಗಿದ್ದ ಉಮೇಶ್ ಹಡಪದ ಎಂಬಾತ ಕುಡಿಯಲು ಎಣ್ಣೆ ಸಿಗದ ಹಿನ್ನೆಲೆ, ಬೇಸರಗೊಂಡು ನೇಣಿಗೆ ಶರಣಾಗಿದ್ದಾನೆ. ಈತ ವಾಚ್​ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕುಡಿತದ ಚಟ ಅಂಟಿಸಿಕೊಂಡಿದ್ದ ಈತ ಕಳೆದ ಮೂರು ವರ್ಷಗಳಿಂದ ತನ್ನ ಕುಟುಂಬಸ್ಥರಿಂದ ದೂರ ಉಳಿದಿದ್ದ ಎಂದು ತಿಳಿದು ಬಂದಿದೆ.

4. ದಕ್ಷಿಣ ಕನ್ನಡದಲ್ಲಿ ಇಬ್ಬರು ಎಣ್ಣೆಪ್ರಿಯರು ಲಾಕ್​ಡೌನ್​ ಹಿನ್ನೆಲೆ ಮದ್ಯ ಸಿಗಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಪ್ರಿಲ್​ 14ರವರೆಗೆ ದೇಶದಲ್ಲಿ ಲಾಕ್​ಡೌನ್​ ಘೋಷಣೆಯಾದ ಬಳಿಕ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ಹಿನ್ನೆಲೆ, ಎಣ್ಣೆ ಸಿಗದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದಾರೆ.5. ಹಾಸನದಲ್ಲಿ ಮೊಗಣ್ಣ ಎಂಬ ವ್ಯಕ್ತಿ ಕುಡಿಯಲು ಮದ್ಯ ಸಿಗದ ಹಿನ್ನೆಲೆ, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾಸನ ಹೊರವಲಯದ ಕಸ್ತೂರವಳ್ಳಿ ಗೇಟ್​ ಬಳಿ ಈ ಘಟನೆ ನಡೆದಿದೆ.

ದೇಶವ್ಯಾಪಿ ಲಾಕ್​ಡೌನ್​ ಘೋಷಣೆಯಾದ ಬಳಿಕ ರಾಜ್ಯದಲ್ಲಿ ಇಂತಹ ಪ್ರಕರಣಗಳು ವರದಿಯಾಗಿವೆ.  ಇನ್ನು, ಕೇರಳದಲ್ಲೂ ಸಹ ಮದ್ಯ ಸಿಗದ ಹಿನ್ನೆಲೆ ಸಾವನ್ನಪ್ಪಿರುವ ಪ್ರಕರಣಗಳು ವರದಿಯಾಗಿವೆ.

ಲಾಕ್​ಡೌನ್ ಆದೇಶ ಜಾರಿಯಾದ ಬಳಿಕ ತೆಲಂಗಾಣದಲ್ಲಿ ಮದ್ಯ ಸಿಗದಿದ್ದಕ್ಕೆ 10 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಲ್ಕೋಹಾಲ್​ನಲ್ಲಿರುವ ರಾಸಾಯನಿಕಗಳು ಮಾನವನ ನರ ಮಂಡಲಕ್ಕೆ ನೇರವಾಗಿ ಪರಿಣಾಮ ಬೀರುವುದರಿಂದ ವ್ಯಸನಿಗಳಾಗುತ್ತಾರೆ. ಈ ರಾಸಾಯನಿಕಗಳನ್ನು ಮೆದುಳು ಸ್ವೀಕರಿಸುವುದನ್ನು ನಿಲ್ಲಿಸಿದರೆ, ನರಮಂಡಲದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆಗ ಮದ್ಯ ವ್ಯಸನಿಗಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ ಎಂದು ವೈದ್ಯರು ಹೇಳುತ್ತಾರೆ.
First published:April 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading