ಚೆನ್ನೈ (ಜೂನ್ 04); ಇಲ್ಲಿನ ನಗರದ ಹೊರವಲಯದಲ್ಲಿರುವ ವಂಡಲೂರಿನ ಅರಿಜ್ಞರ್ ಅಣ್ಣಾ ಬಯೋಲಾಜಿಕಲ್ ಪಾರ್ಕ್ ಮೃಗಾಲಯದಲ್ಲಿ ಕೋವಿಡ್ ಸೋಂಕಿನಿಂದ ಪುರುಷ ಸಿಂಹವೊಂದು ಮೃತಪಟ್ಟಿದೆ ಎಂದು ಹಿಂದೂ ವರದಿ ಮಾಡಿದೆ. ಭೋಪಾಲ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್‌ಗೆ ಮೃತ ಸಿಂಹದಿಂದ ಮಾದರಿಯನ್ನು ಕಳುಹಿಸಲಾಗಿದ್ದು, ಪರೀಕ್ಷೆಯು ಕೊರೋನಾ ವೈರಸ್ ಸೋಂಕಿನಿಂದಲೇ ಸಿಂಹ ಮೃತಪಟ್ಟಿದೆ. ಅಲ್ಲದೆ, ಉಳಿದ ಸಿಂಹಗಳಿಗೂ ಸೋಂಕು ತಗುಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. "ಆದಾಗ್ಯೂ, ಇದು ಸುಳ್ಳು ಪಾಸಿಟಿವ್ ಫಲಿತಾಂಶ ಆಗಿರಬಹುದು, ಮತ್ತು ಬೇರೆ ಖಾಯಿಲೆಯಿಂದಲೂ ಸಿಂಹ ಮೃತಪಟ್ಟಿರಬಹುದು. ಹೀಗಾಗಿ ನಾವು ಎರಡನೇ ಮಾದರಿಯನ್ನು ಸಂಸ್ಥೆಗೆ ಕಳುಹಿಸಿಲ್ಲ” ಎಂದು ಮೃಗಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಕಳೆದ ವಾರ ಗಂಡು ಸಿಂಹ ಅನಾರೋಗ್ಯಕ್ಕೆ ಒಳಗಾಗಿತ್ತು. ಈ ವೇಳೆ ತಪಾಸಣೆ ನಡೆಸಿದ್ದ ವೈದ್ಯರು ಸಹ ಸಿಂಹಕ್ಕೆ ಕೊರೋನಾ ಸೋಂಕು ತಗುಲಿರುವ ಸಾಧ್ಯತೆ ಇದೆ ಎಂದು ಭಾವಿಸಿದ್ದರು. ಆದ್ದರಿಂದ ಸಿಂಹದ ಮಾದರಿಯನ್ನು ಭೋಪಾಲ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇತರ ಸಿಂಹಗಳಿಂದ ಇನ್ನೂ ಕೆಲವು ಮಾದರಿಗಳು ಧನಾತ್ಮಕತೆಯನ್ನು ಪರೀಕ್ಷಿಸಿವೆ ಎಂದು ಮೂಲಗಳು ತಿಳಿಸಿವೆ. ಮೃಗಾಲಯದ ಅಧಿಕಾರಿಗಳು ಅನಾರೋಗ್ಯದ ಮೂಲವನ್ನು ನಿರ್ಧರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಆಗಸ್ಟ್.1 ರಿಂದ ಬ್ಯಾಂಕ್ ರಜಾದಿನಗಳಲ್ಲೂ ಚಾಲ್ತಿಯಲ್ಲಿರಲಿದೆ ನಿಮ್ಮ ಸಾಲದ ಇಎಂಐ, ಸಂಬಳ ಮತ್ತು ಪಿಂಚಣಿ!
COVID-19 ರ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ತಮಿಳುನಾಡಿನಲ್ಲಿ ಲಾಕ್ಡೌನ್ ಹೇರಲಾಗಿದೆ. ಹೀಗಾಗಿ ಮೃಗಾಲಯವನ್ನೂ ಮುಚ್ಚಲಾಗಿದೆ. ಆದರೂ ಸಿಂಹಕ್ಕೆ ಕೊರೋನಾ ಸೋಂಕು ತಗುಲಿರುವುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ, ಹೈದರಾಬಾದ್ ಮೃಗಾಲಯದಲ್ಲಿ ಎಂಟು ಸಿಂಹಗಳು ಕಳೆದ ತಿಂಗಳು ಕೊರೋನಾ ಸೋಂಕಿಗೆ ಒಳಗಾಗಿದ್ದವು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ