ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಲು ತಡವಾದಲ್ಲಿ ನನಗೆ ತಿಳಿಸಿ; ಸಿಎಂ ಬಿಎಸ್​ ಯಡಿಯೂರಪ್ಪ

ಬೆಂಗಳೂರಿನಿಂದ ಅನಗತ್ಯವಾಗಿ ಹಳ್ಳಿಗಳಿಗೆ ಹೋಗಬೇಡಿ. ಹಳ್ಳಿಗಳಿಗೆ ಸೋಂಕು ಹರಡದಂತೆ ನೋಡಿಕೊಳ್ಳಬೇಕು. ಇದು ಒಂದೆರಡು ದಿನದ್ದಲ್ಲ, ಇನ್ನೂ ಆರೇಳು ತಿಂಗಳಿನದು. ಇನ್ನೊಂದು ವಾರದಲ್ಲಿ ಎಲ್ಲವೂ ಸಿದ್ದವಾಗುತ್ತದೆ.  ಬೆಂಗಳೂರಿನಲ್ಲಿನ ಎಲ್ಲಾ ಕೇಂದ್ರಗಳ ಬೆಡ್ ಮುಗಿದ ಮೇಲೆ ಇಲ್ಲಿ ಸೋಂಕಿತರನ್ನು ದಾಖಲಿಸಲಾಗುವುದು ಎಂದು ತಿಳಿಸಿದರು.

news18-kannada
Updated:July 9, 2020, 7:04 PM IST
ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಲು ತಡವಾದಲ್ಲಿ ನನಗೆ ತಿಳಿಸಿ; ಸಿಎಂ ಬಿಎಸ್​ ಯಡಿಯೂರಪ್ಪ
ಬಿಐಇಸಿ, ಮಾದಾವರ, ತುಮಕೂರು ರಸ್ತೆ ಇಲ್ಲಿ ನಿರ್ಮಿಸಲಾಗಿರುವ ಕೋವಿಡ್-19 ಕೇರ್ ಸೆಂಟರ್​ಗೆ ಸಿಎಂ ಬಿಎಸ್​ವೈ ಭೇಟಿ ನೀಡಿ ಪರಿಶೀಲಿಸಿ.
  • Share this:
ಬೆಂಗಳೂರು; ತೀವ್ರಗತಿಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿದೆ. ಮಾರಕ ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.

ಬಿಐಇಸಿ, ಮಾದಾವರ, ತುಮಕೂರು ರಸ್ತೆ ಇಲ್ಲಿ ನಿರ್ಮಿಸಲಾಗಿರುವ ಕೋವಿಡ್-19 ಕೇರ್ ಸೆಂಟರ್​ಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಬಿಎಸ್​ವೈ, ಅಂದುಕೊಂಡಂತೆ ನಡೆದರೆ 10100 ಹಾಸಿಗೆಯ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಕೇಂದ್ರದಿಂದ ಬಂದಂತಹ ಅಧಿಕಾರಿಗಳು ಸುಸಜ್ಜಿತ ಕೋವಿಡ್ ಕೇರ್ ಸೆಂಟರ್ ನೋಡಿ ಖುಷಿಪಟ್ಟಿದ್ದಾರೆ. ಪ್ರತಿ 100 ಮಂದಿಗೆ ಒಬ್ಬ ವೈದ್ಯ, 2 ನರ್ಸ್, ಬಿಬಿಎಂಪಿ ಮಾರ್ಷಲ್, ಸಹಾಯಕರನ್ನು ನಿಯೋಜಿಸಲಾಗುವುದು. ಒಟ್ಟು 2200 ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ತಿಳಿಸಿದರು.

ನಿನ್ನೆ ಕೇಂದ್ರದ ತಂಡ ಈ ಕೋವಿಡ್ ಕೇರ್ ಸೆಂಟರ್ ನೋಡಿ ಸಂತೋಷ ಪಟ್ಟಿದೆ. ಸಮೀಪದ ಆಸ್ಪತ್ರೆಯೊಂದಿಗೆ ಸಂಯೋಜನೆ ಮಾಡಲಾಗಿದೆ. ದಿನದ 24 ಗಂಟೆ ಮೇಲ್ವಿಚಾರಣೆ ವಹಿಸಲಾಗುತ್ತದೆ. ರೋಗ ಲಕ್ಷಣಗಳಿಲ್ಲದ ಸೋಂಕಿತರ ಆರೈಕೆ ಮಾಡಲಾಗುವುದು. ರಾಜ್ಯ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನ ಕೈಗೊಂಡಿದೆ. ಹಾಸಿಗೆ ಹಂಚಿಕೆಗೆ ಪಾರದರ್ಶಕತೆ ರೂಪಿಸಲಾಗಿದೆ. ಜನರು ತಾಳ್ಮೆ ಕಳೆದುಕೊಳ್ಳದೆ ಸಹಕರಿಸಿ ಎಂದು ಮನವಿ ಮಾಡಿದರು.

ಇದನ್ನು ಓದಿ: ‘ಗುತ್ತಿಗೆ ವೈದ್ಯರ ಖಾಯಂ ಮಾಡಲು ಸಂಪುಟ ಒಪ್ಪಿಗೆ‘ - ಸಚಿವ ಜೆ.ಸಿ ಮಾಧುಸ್ವಾಮಿ

ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಲು ತಡವಾದಲ್ಲಿ ನನಗೆ ತಿಳಿಸಿ. ವ್ಯವಸ್ಥೆ ಸರಿ ಇಲ್ಲದಿದ್ದರೆ ಸರಿಪಡಿಸುವ ಪ್ರಯತ್ನ ಮಾಡುತ್ತೇನೆ. ಶಾಸಕರು ಕೋವಿಡ್ ಆಸ್ಪತ್ರೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಬೆಂಗಳೂರಿನಿಂದ ಅನಗತ್ಯವಾಗಿ ಹಳ್ಳಿಗಳಿಗೆ ಹೋಗಬೇಡಿ. ಹಳ್ಳಿಗಳಿಗೆ ಸೋಂಕು ಹರಡದಂತೆ ನೋಡಿಕೊಳ್ಳಬೇಕು. ಇದು ಒಂದೆರಡು ದಿನದ್ದಲ್ಲ, ಇನ್ನೂ ಆರೇಳು ತಿಂಗಳಿನದು. ಇನ್ನೊಂದು ವಾರದಲ್ಲಿ ಎಲ್ಲವೂ ಸಿದ್ದವಾಗುತ್ತದೆ.  ಬೆಂಗಳೂರಿನಲ್ಲಿನ ಎಲ್ಲಾ ಕೇಂದ್ರಗಳ ಬೆಡ್ ಮುಗಿದ ಮೇಲೆ ಇಲ್ಲಿ ಸೋಂಕಿತರನ್ನು ದಾಖಲಿಸಲಾಗುವುದು ಎಂದು ತಿಳಿಸಿದರು.
Published by: HR Ramesh
First published: July 9, 2020, 7:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading