HOME » NEWS » Coronavirus-latest-news » LEKKA KODI CONGRESS LEADER SIDDARAMAIAH TWEET CHALLENGE AGAINST CM BS YEDIYURAPPA GOVERNMENT SCT

ಸಿಎಂ ಯಡಿಯೂರಪ್ಪನವರ ಮುಂದೆ ಟ್ವಿಟ್ಟರ್​ನಲ್ಲಿ ಸಾಲು-ಸಾಲು ಪ್ರಶ್ನೆಯಿಟ್ಟ ಸಿದ್ದರಾಮಯ್ಯ

Lekka Kodi: ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣದ ಉದ್ದೇಶಕ್ಕಾಗಿ ಖರ್ಚು ಮಾಡಿದ ಹಣದ ಲೆಕ್ಕ ಕೊಡುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ. ಇದಕ್ಕಾಗಿ ಈಗಾಗಲೇ ಟ್ವಿಟ್ಟರ್​ನಲ್ಲಿ ಲೆಕ್ಕ ಕೊಡಿ ಎಂಬ ಹ್ಯಾಶ್​ಟ್ಯಾಗ್​ನಡಿ ಕಾಂಗ್ರೆಸ್ ಅಭಿಯಾನ ಶುರು ಮಾಡಿದೆ.

news18-kannada
Updated:July 14, 2020, 8:46 PM IST
ಸಿಎಂ ಯಡಿಯೂರಪ್ಪನವರ ಮುಂದೆ ಟ್ವಿಟ್ಟರ್​ನಲ್ಲಿ ಸಾಲು-ಸಾಲು ಪ್ರಶ್ನೆಯಿಟ್ಟ ಸಿದ್ದರಾಮಯ್ಯ
ಸಿದ್ದರಾಮಯ್ಯ
  • Share this:
ಬೆಂಗಳೂರು (ಜು. 14): ಕೊರೋನಾ ನಿಯಂತ್ರಣಕ್ಕೆ ಕರ್ನಾಟಕದಲ್ಲಿ ಎಷ್ಟು ಖರ್ಚು ಮಾಡಿದ್ದೀರ? ಅದೆಲ್ಲದಕ್ಕೂ ಲೆಕ್ಕ ಕೊಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಟ್ವಿಟ್ಟರ್​ನಲ್ಲಿ ಅಭಿಯಾನ ಶುರುಮಾಡಿದ್ದರು. ಇಂದು ಕೂಡ ಈ ಬಗ್ಗೆ ಸರಣಿ ಟ್ವೀಟ್​ಗಳನ್ನು ಮಾಡಿರುವ ಸಿದ್ದರಾಮಯ್ಯ ತಾವು ಸರ್ಕಾರಕ್ಕೆ ಕೊರೋನಾ ಕುರಿತಾದ ವಿವರಗಳನ್ನು ಕೇಳಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಬರೆದಿರುವ ಪತ್ರವನ್ನು ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೊರೊನಾ ಸಂಬಂಧಿಸಿದ ಆರೋಪ ಬಂದಾಗೆಲ್ಲ ದಾಖಲೆ ನೀಡಿ, ವಿಧಾನಸೌಧಕ್ಕೆ ಬನ್ನಿ ಎಂದೆಲ್ಲ ಸವಾಲು ಹಾಕಿ ಕೆಲವು ಸಚಿವರು ವಿಷಯಾಂತರ ಮಾಡುತ್ತಿದ್ದಾರೆ. ಸರ್ಕಾರ ಅರೆಬರೆ ಮಾಹಿತಿ ನೀಡಿ ತಪ್ಪಿಸಿ ಕೊಳ್ಳುತ್ತಿದೆ. ಈ ಬಗ್ಗೆ  ಸಿಎಂ ಯಡಿಯೂರಪ್ಪನವರ ಬಳಿ ಮಾಹಿತಿ ಕೇಳಿ ಪತ್ರ ಬರೆದಿದ್ದೇನೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಕೊರೊನಾ ನಿಯಂತ್ರಣಕ್ಕಾಗಿ ಎಷ್ಟು ಪ್ರಮಾಣದ ಸಾಮಗ್ರಿ ಖರೀದಿಸಲಾಗಿದೆ? ಪ್ರತಿ ಸಾಮಗ್ರಿಯ ಬೆಲೆಯೆಷ್ಟು? ಬಿಡ್/ಕೊಟೇಷನ್ ಮೂಲಕ ಪಾಲ್ಗೊಂಡ ಸಂಸ್ಥೆಗಳು ಯಾವುವು? ಸರಬರಾಜು ಆದೇಶ ಪಡೆದುಕೊಂಡ ಸಂಸ್ಥೆ ಯಾವುದು? ಹೆಚ್ಚು ದರ ಕೋಟ್ ಮಾಡಿದ ಕಂಪೆನಿಗೆ ಸರಬರಾಜು ಆದೇಶ ನೀಡಿರುವ ಪ್ರಕರಣಗಳೆಷ್ಟು? ಕಾರಣಗಳೇನು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.ಕೊರೊನಾ ನಿಯಂತ್ರಣ ಸಾಮಗ್ರಿಗಳ ಗುಣಮಟ್ಟದ ಬಗ್ಗೆ ತಕರಾರುಗಳಿದ್ದರೂ ಸರ್ಕಾರ ಈಗ  ಪಾವತಿ ಮಾಡಲಾದ ಹಣ ಎಷ್ಟು? ಕೇಂದ್ರ ಸರ್ಕಾರ ಖರೀದಿ ಮಾಡಿದ ಸಾಮಗ್ರಿಗಳು ಯಾವುವು? ಅವುಗಳಲ್ಲಿ ಕಳಪೆಯಾಗಿದೆ ಎಂದು ಬಂದ ದೂರುಗಳೆಷ್ಟು? ಆ ದೂರುಗಳ ಕುರಿತು ಕೈಗೊಂಡಿರುವ ಕ್ರಮಗಳೇನು? ಎಂದು ಮಾಹಿತಿ ನೀಡುವಂತೆ ಸರ್ಕಾರಕ್ಕೆ ಸಿದ್ದರಾಮಯ್ಯ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.ಕೇಂದ್ರ ಮತ್ತು ರಾಜ್ಯ ಸರ್ಕಾರ ಖರೀದಿಸಿದ ಸಾಮಗ್ರಿಗಳನ್ನು ಎಲ್ಲೆಲ್ಲಿ ಮತ್ತು ಎಷ್ಟು ಪ್ರಮಾಣದಲ್ಲಿ ವಿತರಿಸಲಾಗಿದೆ? ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಎಷ್ಟು?  ಅದರಲ್ಲಿ ಖರ್ಚು ಮಾಡಲಾದ ಅನುದಾನ ಎಷ್ಟು? ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಅನುದಾನ ಎಷ್ಟು? ಖರ್ಚಾಗಿರುವುದು ಎಷ್ಟು? ಎಂದು ಕೇಳಿದ್ದಾರೆ.ಕೊರೊನಾ ನಿಯಂತ್ರಣಕ್ಕಾಗಿ ಎಸ್‌ಡಿಆರ್‌ಎಫ್ ಮತ್ತು ಎನ್​ಡಿಆರ್​ಎಫ್ ಅನುದಾನದಲ್ಲಿ ಜಿಲ್ಲೆಗಳಿಗೆ ಹಂಚಿಕೆ ಮಾಡಿದ ಹಣ ಎಷ್ಟು? ಆ ಅನುದಾನದಲ್ಲಿ ಜಿಲ್ಲಾಡಳಿತಗಳು ಯಾವ ಉದ್ದೇಶಕ್ಕೆ ಎಷ್ಟು ಖರ್ಚು ಮಾಡಿದೆ? ಎಂದು ಲೆಕ್ಕ ಕೊಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ.ಆಹಾರ, ಆಹಾರ ಧಾನ್ಯಗಳ ಕಿಟ್​ಗಳು, ಹಾಲು ಮುಂತಾದವುಗಳನ್ನು ಎಷ್ಟು ಪ್ರಮಾಣದಲ್ಲಿ ಸರ್ಕಾರ ವಿತರಿಸಿದೆ? ಪ್ರತಿ ಆಹಾರ ಪ್ಯಾಕೇಟ್/ ಆಹಾರ ಧಾನ್ಯಗಳ ಪ್ಯಾಕೇಟ್ ಕಿಟ್​ಗೆ ನೀಡಿದ ಕನಿಷ್ಠ/ ಗರಿಷ್ಠ ದರ ಎಷ್ಟು? ಆಹಾರ ತಯಾರಿಸಿದ ಸಂಸ್ಥೆಗಳು ಯಾವುವು? ಯಾವ ಸಂಸ್ಥೆಗಳಿಗೆ ಎಷ್ಟು ಹಣ ನೀಡಲಾಗಿದೆ? ಎಂದು ಸಿದ್ದರಾಮಯ್ಯ ಮಾಹಿತಿ ಕೇಳಿದ್ದಾರೆ.ರಾಜ್ಯದಲ್ಲಿ ಒಟ್ಟು ಎಷ್ಟು ಕ್ವಾರಂಟೈನ್ ಕೇಂದ್ರಗಳನ್ನು ನಿರ್ವಹಿಸಲಾಗುತ್ತಿದೆ? ಪ್ರತಿ ಕ್ವಾರಂಟೈನ್ ಕೇಂದ್ರಕ್ಕೆ ಇಲ್ಲಿಯ ವರೆಗೆ ಖರ್ಚು ಮಾಡಿದ ದುಡ್ಡೆಷ್ಟು? ಯಾವ ಬಾಬತ್ತಿಗೆ ಖರ್ಚು ಮಾಡಲಾಗಿದೆ? ಕ್ವಾರಂಟೈನ್​ಗೊಳಗಾದ ಪ್ರತಿ ವ್ಯಕ್ತಿಗೆ ತಗಲಿರುವ ಖರ್ಚೆಷ್ಟು? ಕ್ವಾರಂಟೈನ್ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಪತ್ರ ಬರೆದು ಸಿಎಂ ಯಡಿಯೂರಪ್ಪನವರಲ್ಲಿ ಉತ್ತರಕ್ಕಾಗಿ ಆಗ್ರಹಿಸಿದ್ದಾರೆ.ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣದ ಉದ್ದೇಶಕ್ಕಾಗಿ ಖರ್ಚು ಮಾಡಿದ ಹಣದ ಲೆಕ್ಕ ಕೊಡುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ. ಇದಕ್ಕಾಗಿ ಈಗಾಗಲೇ ಟ್ವಿಟ್ಟರ್​ನಲ್ಲಿ #LekkaKodi ಎಂಬ ಹ್ಯಾಶ್​ಟ್ಯಾಗ್​ನಡಿ ಕಾಂಗ್ರೆಸ್ ಅಭಿಯಾನ ಶುರು ಮಾಡಿದೆ.
Published by: Sushma Chakre
First published: July 14, 2020, 8:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories