ಹಬ್ಬಗಳ ವೇಳೆ ನಿರ್ಲಕ್ಷ್ಯ ತೋರಿದರೆ ಒಂದೇ ತಿಂಗಳಲ್ಲಿ 26 ಲಕ್ಷ ಪ್ರಕರಣ: ತಜ್ಞರ ಸಮಿತಿ ಎಚ್ಚರಿಕೆ
ಚಳಿಗಾಲದ ಶೀತ ವೈರಸ್ಗೆ ಅನುಕೂಲಕರ ವಾತಾವರಣ ಆಗಿರುತ್ತದೆ. ಈಗ ಹಬ್ಬಗಳ ಸೀಸನ್ ಕೂಡ ಪ್ರಾರಂಭವಾಗುತ್ತಿದ್ದು, ಜನರು ಕೊರೋನಾ ಬಗ್ಗೆ ನಿರ್ಲಕ್ಷ್ಯ ತೋರಿದರೆ ಸೋಂಕು ಕೈಮೀರಿ ಹೋಗಬಹುದು ಎಂದು ವಿ.ಕೆ. ಪೌಲ್ ನೇತೃತ್ವದ ತಜ್ಞರ ಸಮಿತಿ ಅಭಿಪ್ರಾಯಪಟ್ಟಿದೆ.
news18 Updated:October 18, 2020, 10:42 PM IST

ಸಾಂದರ್ಭಿಕ ಚಿತ್ರ
- News18
- Last Updated: October 18, 2020, 10:42 PM IST
ನವದೆಹಲಿ(ಅ. 18): ಮುಂಬರಲಿರುವ ಹಬ್ಬದ ಸೀಸನ್ನಲ್ಲಿ ಜನರು ಮೈಮರೆತು ಕೊರೋನಾವನ್ನು ನಿರ್ಲಕ್ಷಿಸಿದರೆ ಭಾರಿ ಬೆಲೆ ತೆರಬೇಕಾದೀತು. ಒಂದೇ ತಿಂಗಳಲ್ಲಿ 26 ಲಕ್ಷ ಹೊಸ ಸೋಂಕು ಪ್ರಕರಣಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರ ಸಮಿತಿಯೊಂದು ಎಚ್ಚರಿಸಿದೆ. ಕೇಂದ್ರ ಸರ್ಕಾರ ನೇಮಕ ಮಾಡಿದ ನೀತಿ ಆಯೋಗ್ ಸದಸ್ಯ ವಿ.ಕೆ. ಪೌಲ್ ನೇತೃತ್ವದ 10 ಸದಸ್ಯರ ತಜ್ಞರ ಸಮಿತಿ ಇಂಥದ್ದೊಂದು ಎಚ್ಚರಿಕೆ ಸಂದೇಶವನ್ನು ದೇಶದ ಜನತೆಗೆ ರವಾನಿಸಿದೆ. ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಹರಡುತ್ತಿರುವುದು ಹಾಗೂ ಲಾಕ್ಡೌನ್ ಪರಿಣಾಮಗಳ ಬಗ್ಗೆ ಈ ತಜ್ಞರ ಸಮಿತಿ ಅಧ್ಯಯನ ನಡೆಸಿದೆ. ಹಬ್ಬದ ಸಂದರ್ಭದಲ್ಲಿ ಸೋಂಕಿನ ಅಪಾಯ ಹೆಚ್ಚಾಗಿರುತ್ತದೆ ಎಂಬ ಅಂಶ ಈ ಅಧ್ಯಯನದಿಂದ ದೃಢಪಟ್ಟಿದೆಯಂತೆ.
ಚಳಿಗಾಲದ ಶೀತ ವೈರಸ್ಗಳಿಗೆ ಹೇಳಿ ಮಾಡಿಸಿದ ವಾತಾವರಣವಾಗಿದೆ. ಚಳಿಗಾಲದಲ್ಲೇ ಹಬ್ಬಗಳು ಹೆಚ್ಚು ಇವೆ. ಈ ಸಂದರ್ಭದಲ್ಲಿ ಜನರು ಕೊರೋನಾ ವೈರಸ್ ಬಗ್ಗೆ ಜಾಗ್ರತೆ ವಹಿಸದೆ ನಿರ್ಲಕ್ಷ್ಯ ತೋರಿದರೆ ಸೋಂಕು ಏರುಗತಿಗೆ ಹೋಗಬಹುದು. ಒಂದು ತಿಂಗಳ ಅವಧಿಯಲ್ಲಿ 26 ಲಕ್ಷದಷ್ಟು ಪ್ರಕರಣಗಳ ಏರಿಕೆ ಆಗಬಹುದು ಎಂದು ತಜ್ಞರು ಹೇಳುತ್ತಾರೆ. ಜಿಲ್ಲಾ ಮಟ್ಟ ಹಾಗೂ ಅದಕ್ಕೂ ಮೇಲಿನ ಮಟ್ಟದ ಲಾಕ್ಡೌನ್ ಕ್ರಮಗಳಿಂದ ಅಷ್ಟೇನೂ ಪರಿಣಾಮ ಉಂಟಾಗುತ್ತಿಲ್ಲ. ಈಗಿರುವ ಕೊರೋನಾ ನಿಯಮಗಳನ್ನ ತಪ್ಪದೇ ಪಾಲಿಸಿದರೆ ಮುಂದಿನ ವರ್ಷದ ಆರಂಭಿಕ ತಿಂಗಳುಗಳಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುವ ಸಾಧ್ಯತೆ ಇರುತ್ತದೆ ಎಂದು ಈ ಸಮಿತಿ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಕೊರೋನಾ ಸಮುದಾಯಿಕವಾಗಿ ಹರಡಿರುವುದನ್ನು ಕೊನೆಗೂ ಒಪ್ಪಿಕೊಂಡ ಕೇಂದ್ರ ಸರ್ಕಾರ
“ಭಾರತದಲ್ಲಿ ಕಳೆದ ಮೂರು ವಾರಗಳಲ್ಲಿ ಹೊಸ ಕೊರೊನಾ ಪ್ರಕರಣಗಳು ಹಾಗೂ ಸಾವಿನ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಬಹುತೇಕ ರಾಜ್ಯಗಳಲ್ಲಿ ಪರಿಸ್ಥಿತಿ ತಹಬದಿಗೆ ಬಂದಿದೆ. ಕೇರಳ, ಕರ್ನಾಟಕ, ರಾಜಸ್ಥಾನ, ಛತ್ತೀಸ್ಗಡ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಹಾಗೂ 3-4 ಕೇಂದ್ರಾಡಳಿತ ಪ್ರದೇಶಗಳಲ್ಲಿ ವೈರಸ್ ಸೋಂಕು ಹೆಚ್ಚು ಹರಡುತ್ತಿದೆ” ಎಂದು ಸಮಿತಿಯ ನೇತೃತ್ವ ವಹಿಸಿರುವ ವಿ.ಕೆ. ಪೌಲ್ ಹೇಳಿದ್ದಾರೆ.
ಈಗ ಪರಿಸ್ಥಿತಿ ತುಸು ನಿಯಂತ್ರಣಕ್ಕೆ ಬಂದಿದೆಯಾದರೂ ಚಳಿಗಾಲದಲ್ಲಿ ಎರಡನೇ ಅಲೆಯ ಸೋಂಕು ಧಾವಿಸಿ ಬರುವ ಸಾಧ್ಯತೆಯನ್ನ ತಳ್ಳಿಹಾಕಲು ಆಗುವುದಿಲ್ಲ. ವೈರಸ್ ಬಗ್ಗೆ ನಾನು ಇನ್ನೂ ತಿಳಿಯುತ್ತಲೇ ಇದ್ದೇವೆ. ಏನು ಬೇಕಾದರೂ ಆಗಬಹುದು… ಚಳಿಗಾಲ, ಉತ್ತರ ಭಾರತದಲ್ಲಿ ಮಾಲಿನ್ಯ ಹೆಚ್ಚಳ, ಹಬ್ಬದ ಋತು ಇರುವುದರಿಂದ ನಾವು ಬಹಳ ಜಾಗರೂಪಕತೆಯಿಂದ ಇರಬೇಕು. ನಾವು ಈಗ ಹಿಡಿದಿರುವ ಜುಟ್ಟು ನಮ್ಮ ಕೈತಪ್ಪಿಹೋಗಿ ಬಿಡಬಹುದು ಎಂದು ಪೌಲ್ ಎಚ್ಚರಿಸಿದ್ದಾರೆ.
“ನಾವು ಸರಿಯಾದ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ, ಎಚ್ಚರ ವಹಿಸದಿದ್ದರೆ ಸೋಂಕು ಕೈಮೀರಿ ಹೋಗಬಹುದು. ದೇವರ ದಯೆಯಿಂದ ನಮಗೆ ಈ ಪರಿಸ್ಥಿತಿ ಬರದಂತಾಗಲಿ. ಮತ್ತೊಂದು ಸುತ್ತಿನ ಕೊರೋನಾ ಅಲೆ ಬರಬೇಕೋ ಬೇಡವೋ ಎಂಬುದು ನಮ್ಮ ಕೈಯಲ್ಲೇ ಇದೆ” ಎಂದು ನೀತಿ ಆಯೋಗ್ನ ಸದಸ್ಯರೂ ಆದ ಪೌಲ್ ತಿಳಿಹೇಳಿದ್ದಾರೆ.
ಚಳಿಗಾಲದ ಶೀತ ವೈರಸ್ಗಳಿಗೆ ಹೇಳಿ ಮಾಡಿಸಿದ ವಾತಾವರಣವಾಗಿದೆ. ಚಳಿಗಾಲದಲ್ಲೇ ಹಬ್ಬಗಳು ಹೆಚ್ಚು ಇವೆ. ಈ ಸಂದರ್ಭದಲ್ಲಿ ಜನರು ಕೊರೋನಾ ವೈರಸ್ ಬಗ್ಗೆ ಜಾಗ್ರತೆ ವಹಿಸದೆ ನಿರ್ಲಕ್ಷ್ಯ ತೋರಿದರೆ ಸೋಂಕು ಏರುಗತಿಗೆ ಹೋಗಬಹುದು. ಒಂದು ತಿಂಗಳ ಅವಧಿಯಲ್ಲಿ 26 ಲಕ್ಷದಷ್ಟು ಪ್ರಕರಣಗಳ ಏರಿಕೆ ಆಗಬಹುದು ಎಂದು ತಜ್ಞರು ಹೇಳುತ್ತಾರೆ.