HOME » NEWS » Coronavirus-latest-news » LAW MAKER RAGHU ACHAR ASKS HOW ABOUT COMMON PEOPLE TREATMENT AFTER NO PROPER CHECKUP OF LAWMAKERS MAK

ಶಾಸಕರ ಕೋವಿಡ್‌ ಪರೀಕ್ಷೆಯೇ ಹೀಗಾದರೆ ಸಾಮಾನ್ಯ ಜನರ ಕಥೆ ಏನು?; ಸರ್ಕಾರಕ್ಕೆ ಶಾಸಕ ರಘು ಆಚಾರ್‌ ಪ್ರಶ್ನೆ

ಮಾನ್ಯ ಸಚಿವರುಗಳೇ, ಹೆಚ್ಚೆಚ್ಚು ಕೊರೋನಾ ಸೋಂಕು ಪರೀಕ್ಷೆಗಳನ್ನು ಮಾಡಲು ದಿನದ 24 ಗಂಟೆಯೂ ಸೋಂಕು ಪರೀಕ್ಷೆ ಕೇಂದ್ರ ಕಾರ್ಯನಿರ್ವಹಿಸುವಂತೆ ಸೂಚಿಸಬೇಕಾಗಿ ವಿನಂತಿಸುತ್ತೇನೆ. ಹಾಗೆಯೇ ಪರೀಕ್ಷಾ ವರದಿ ನೀಡಲು ವಾರಗಟ್ಟಲೆ ಕಾಯಿಸದಿರಲು ಕ್ರಮಕೈಗೊಳ್ಳಬೇಕಾಗಿ ಕೇಳುತ್ತೇನೆ ಎಂದು ಶಾಸಕ ಜಿ. ರಘು ಆಚಾರ್‌ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

news18-kannada
Updated:July 7, 2020, 9:07 PM IST
ಶಾಸಕರ ಕೋವಿಡ್‌ ಪರೀಕ್ಷೆಯೇ ಹೀಗಾದರೆ ಸಾಮಾನ್ಯ ಜನರ ಕಥೆ ಏನು?; ಸರ್ಕಾರಕ್ಕೆ ಶಾಸಕ ರಘು ಆಚಾರ್‌ ಪ್ರಶ್ನೆ
ಶಾಸಕ ರಘು ಆಚಾರ್‌.
  • Share this:
ಮೈಸೂರು (ಜುಲೈ 07); ಸ್ವಯಂ ಪ್ರೇರಿತರಾಗಿ ಸೋಂಕು ಪರೀಕ್ಷಗೆ ಒಳಪಡಲು ಇಚ್ಛಿಸುವ ಜನಪ್ರತಿನಿದಿನಗಳಿಗೆ ವೈದ್ಯರು ಅಪ್ಪೋಯಿಂಟ್ಮೆಂಟ್ ಕೊಡುವುದಾದರೆ, ಸಾಮಾನ್ಯ ಜನರ ಹಾಗೂ random testing ರಾಜ್ಯದಲ್ಲಿ ಎಷ್ಟರ ಮಟ್ಟಿಗೆ ನಡಿಯುತ್ತಿರಬಹುದು? ಎಂದು ಶಾಸಕ ಜಿ. ರಘು ಆಚಾರ್‌ ರಾಜ್ಯ ಸರ್ಕಾರವನ್ನು ಸಿಎಂ ಯಡಿಯೂರಪ್ಪನವರನ್ನು ಪ್ರಶ್ನೆ ಮಾಡಿದ್ದಾರೆ.

ಇಂದು ಈ ಕುರಿತು ಟ್ವೀಟ್‌ ಮಾಡಿರುವ ಜಿ. ರಘು ಆಚಾರ್‌, "ಮಾನ್ಯ ಯಡಿಯೂರಪ್ಪನವರೇ, ಕರ್ನಾಟಕದಲ್ಲಿ ಅನೇಕ ಜನಪ್ರತಿನಿಧಿಗಳಿಗೆ ಕೊರೋನಾ ಸೋಂಕು ತಗುಲಿರುವುದರಿಂದ ನಾನು ಸಹ ಇಂದು ಮೈಸೂರಿನಲ್ಲಿ ಪರೀಕ್ಷೆ ಮಾಡಿಸಬೇಕೆಂದು DHO ರವರನ್ನು ವಿಚಾರಿಸಿದಾಗ ನಾಳೆ ಬೆಳಗ್ಗೆ 10 ಗಂಟೆಯ ನಂತರ ಸೋಂಕು ಪರೀಕ್ಷೆ ಕಾರ್ಯಾರಂಭ ಆಗುವುದು ಎಂದು ತಿಳಿಸಿದರು.


ಸ್ವಯಂ ಪ್ರೇರಿತರಾಗಿ ಸೋಂಕು ಪರೀಕ್ಷಗೆ ಒಳಪಡಲು ಇಚ್ಛಿಸುವ ಜನಪ್ರತಿನಿದಿನಗಳಿಗೆ ಅಪ್ಪೋಯಿಂಟ್ಮೆಂಟ್ ಕೊಡುವುದಾದರೆ ಸಾಮಾನ್ಯ ಜನರ ಹಾಗೂ random testing ಎಷ್ಟರ ಮಟ್ಟಿಗೆ ನಡಿಯುತ್ತಿರಬಹುದು?" ಎಂದು ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.ಮತ್ತೊಂದು ಟ್ವೀಟ್‌ನಲ್ಲಿ ಸಚಿವರುಗಳಾದ ಶ್ರೀರಾಮುಲು ಹಾಗೂ ಸುಧಾಕರ್‌ ಅವರಲ್ಲಿ ಮನವಿ ಮಾಡಿರುವ ಶಾಸಕ ರಘು ಆಚಾರ್‌, "ಮಾನ್ಯ ಸಚಿವರುಗಳೇ, ಹೆಚ್ಚೆಚ್ಚು ಕೊರೋನಾ ಸೋಂಕು ಪರೀಕ್ಷೆಗಳನ್ನು ಮಾಡಲು ದಿನದ 24 ಗಂಟೆಯೂ ಸೋಂಕು ಪರೀಕ್ಷೆ ಕೇಂದ್ರ ಕಾರ್ಯನಿರ್ವಹಿಸುವಂತೆ ಸೂಚಿಸಬೇಕಾಗಿ ವಿನಂತಿಸುತ್ತೇನೆ. ಹಾಗೆಯೇ ಪರೀಕ್ಷಾ ವರದಿ ನೀಡಲು ವಾರಗಟ್ಟಲೆ ಕಾಯಿಸದಿರಲು ಕ್ರಮಕೈಗೊಳ್ಳಬೇಕಾಗಿ ಕೇಳುತ್ತೇನೆ" ಎಂದಿದ್ದಾರೆ.
Published by: MAshok Kumar
First published: July 7, 2020, 9:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories