ಬೆಂಗಳೂರು: ಕೊರೋನಾ ಇಡೀ ಶಿಕ್ಷಣ ವ್ಯವಸ್ಥೆಯನ್ನೇ ತಲೆ ಕೆಳಗಾಗಿ ಮಾಡಿದೆ. ಮಕ್ಕಳ ಶಿಕ್ಷಣ ಕಿತ್ತುಕೊಂಡ ಹೆಮ್ಮಾರಿ ಕೊರೊನಾ, ಕಳೆದ 15 ತಿಂಗಳುಗಳಿಂದ ಮನೆಯಲ್ಲೇ ಪಾಠ ಕೇಳುವ ಪರಿಸ್ಥಿತಿಯನ್ನುಂಟು ಮಾಡಿದೆ. ಡಿಜಿಟಲ್ ಯುಗದಲ್ಲೂ ಕೈಗೆಟುಕ ಆನ್ ಲೈನ್ ಶಿಕ್ಷಣ, ಮಕ್ಕಳನ್ನ ಕಲಿಕೆಯಿಂದ ದೂರ ಉಳಿಯುವಂತೆ ಮಾಡಿದೆ ಎಂಬ ಸರ್ವೇ ಶಿಕ್ಷಣ ಇಲಾಖೆಯಿಂದ ಹೊರಬಿದ್ದಿದೆ.
ಕಳೆದ 15 ತಿಂಗಳುಗಳಿಂದ ರಾಜ್ಯದ ಎಲ್ಲಾ ಶಾಲೆಗಳು ಬಂದ್ ಆಗಿವೆ. ಸದ್ಯ ಮಕ್ಕಳಿಗೆ ಆನ್ ಲೈನ್ ಮುಖಾಂತರ ಶಿಕ್ಷಣ ಕೊಟ್ಟಿದ್ರೂ, ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಡಿಜಿಟಲ್ ಯುಗದಲ್ಲೂ ಅಂತರ್ಜಾಲ ಶಿಕ್ಷಣ ಮಕ್ಕಳ ಕೈಗೆ ಎಟಕುತ್ತಿಲ್ಲ. 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂಬ ಆಘಾತಕಾರಿ ಸತ್ಯಾಂಶವನ್ನ ಶಿಕ್ಷಣ ಇಲಾಖೆಯೇ ಬಹಿರಂಗಪಡಿಸಿದೆ. 1 ರಿಂದ 10ನೇ ತರಗತಿವರೆಗಿನ ಮಕ್ಕಳ ಆನ್ ಲೈನ್ ಶಿಕ್ಷಣ ಬಗ್ಗೆ ನಡೆಸಿದ ಸರ್ವೆಯಲ್ಲಿ ಈ ಆತಂಕಕಾರಿ ವಿಷಯ ಬಯಲಾಗಿದೆ. ರಾಜ್ಯದಲ್ಲಿ 1 ಕೋಟಿ 5 ಲಕ್ಷದ 9 ಸಾವಿರದ 367 ಮಕ್ಕಳ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳಿಗೆ ದಾಖಲಾಗಿದ್ದಾರೆ. ಇದರಲ್ಲಿ ಶಿಕ್ಷಣ ಇಲಾಖೆಯ SATs ವೆಬ್ ಸೈಟ್ ನಲ್ಲಿ 93 ಲಕ್ಷದ 1 ಸಾವಿರ 805 ವಿದ್ಯಾರ್ಥಿಗಳು ಅಧಿಕೃತ ದಾಖಲಾಗಿದ್ದಾರೆ. ಆದರೆ ರಾಜ್ಯದ ಶೇ.60ರಷ್ಟು ವಿದ್ಯಾರ್ಥಿಗಳ ಬಳಿ ಆನ್ ಲೈನ್ ಶಿಕ್ಷಣ ಸೌಲಭ್ಯ ಲಭ್ಯ. ಇನ್ನುಳಿದ ಶೇ. 40ರಷ್ಟು ಮಕ್ಕಳಿಗೆ ಆನ್ ಲೈನ್ ಶಿಕ್ಷಣವೇ ದೊರೆತಿಲ್ಲ. ಈ ಮಕ್ಕಳ ಬಳಿ ಟಿವಿ, ಇಂಟರ್ನೆಟ್ ಮೊಬೈಲ್, ಡಿಜಿಟಲ್ ತಂತ್ರಜ್ಞಾನದ ಸೌಲಭ್ಯವಿಲ್ಲ. ಇಲಾಖೆ ನಡೆಸಿದ ಸರ್ವೆಯಲ್ಲಿ ಕಲಿಕೆಯಿಂದ ದೂರು ಉಳಿದ ಮಕ್ಕಳ ಸತ್ಯ ಬಯಲಾಗಿದೆ.
2020- 21ನೇ ಸಾಲಿನಲ್ಲಿ ಮಕ್ಕಳಿಗೆ ಸಿಕ್ಕ ಆನ್ ಲೈನ್ ಶಿಕ್ಷಣ
ಕೊರೋನಾ ಅಂತ ಶಾಲೆಗಳು ಬಂದ್ ಆಗಿವೆ. ಇತ್ತ ಆನ್ ಲೈನ್ ಮೂಲಕ ಎಷ್ಟರಮಟ್ಟಿಗೆ ಶಿಕ್ಷಣ ನಡೀತಿದೆ ಅಂತ ಸರ್ವೇಯೇ ತಿಳಿಸಿದೆ. ಇಂತಹ ಪರಿಸ್ಥಿಯಲ್ಲಿ ಹೀಗಿರುವಾಗ ಮತ್ತೆ ದೂರದರ್ಶನ, ರೇಡಿಯೋ ಮೂಲಕ ಪಾಠ ಮಾಡೋಕೆ ಶಿಕ್ಷಣ ಸಚಿವರು ಮುಂದಾಗಿದ್ದಾರೆ. ಇದರ ಬದಲು ಇತರೆ ಪರ್ಯಾಯ ಮಾರ್ಗ ಕಲ್ಪಿಸಿದ್ರೆ ಒಳಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ