Rahul Gandhi: ಲಕ್ಷದ್ವೀಪ ಭವಿಷ್ಯದ ಬೆದರಿಕೆಯಾಗಿ ಬದಲಾಗುತ್ತಿದೆ; ಪ್ರಧಾನಿಗೆ ರಾಹುಲ್ ಗಾಂಧಿ ಪತ್ರ

ಲಕ್ಷದ್ವೀಪವು ಸಾಗರದಲ್ಲಿ ಭಾರತದ ಆಭರಣವಾಗಿದೆ. ಅಧಿಕಾರದಲ್ಲಿರುವ ಅಜ್ಞಾನಿ ನಿರ್ವಾಹಕರು ಅದನ್ನು ನಾಶಪಡಿಸುತ್ತಿದ್ದಾರೆ. ನಾನು ಲಕ್ಷದ್ವೀಪ ಜನರೊಂದಿಗೆ ನಿಲ್ಲುತ್ತೇನೆ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ರಾಹುಲ್ ಗಾಂಧಿ.

ರಾಹುಲ್ ಗಾಂಧಿ.

 • Share this:
  ನವ ದೆಹಲಿ (ಮೇ 27); ಲಕ್ಷದ್ವೀಪದಲ್ಲಿ ಇತ್ತೀಚೆಗೆ ನಡೆದ ಘಟನೆಗಳನ್ನು ಖಂಡಿಸಿ ಹಾಗೂ ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ  ಹಸ್ತಕ್ಷೇಪವನ್ನು ಕೋರಿ ಕಾಂಗ್ರೆಸ್​ ಮಾಜಿ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಇಂದು ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಈ ಪತ್ರದಲ್ಲಿ  "ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರದ ನಿಯಂತ್ರಣವು ದ್ವೀಪಗಳ 'ಪರಿಸರ ಪಾವಿತ್ರ್ಯ, ಭೂ ಮಾಲೀಕತ್ವದ ಸುರಕ್ಷತೆಗಳನ್ನು' ದುರ್ಬಲಗೊಳಿಸುತ್ತದೆ ಮತ್ತು ಕಾನೂನುಬದ್ಧವಲ್ಲದ ಪ್ರಾಧಿಕಾರದ ನಿಯಮಗಳಿಂದಾಗಿ ಜನರ ಭವಿಷ್ಯಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಪ್ರಧಾನಿ ಮೋದಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ದ್ವೀಪಗಳ ಪರಿಸರ ಪಾವಿತ್ರ್ಯವನ್ನು ಹಾಳುಮಾಡುವ ನಿರ್ವಾಹಕರ ಪ್ರಯತ್ನವು ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರದ ನಿಯಂತ್ರಣದಲ್ಲಿ ಸ್ಪಷ್ಟವಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

  "ವಾಣಿಜ್ಯ ಲಾಭಕ್ಕಾಗಿ ಜೀವನೋಪಾಯ, ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ತ್ಯಾಗ ಮಾಡಲಾಗುತ್ತಿದೆ. ಕಡಿಮೆ ಅಪರಾಧಗಳು ದಾಖಲಾಗುವ ಒಕ್ಕೂಟ ಪ್ರದೇಶದಲ್ಲಿ ಅಭಿವೃದ್ಧಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಸೋಗಿನಲ್ಲಿ, ಕಠಿಣ ನಿಯಮಗಳು ಭಿನ್ನಾಭಿಪ್ರಾಯವನ್ನು ಉಂಟು ಮಾಡುತ್ತದೆ. ಮತ್ತು ತಳಮಟ್ಟದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತವೆ" ಎಂದು ಅವರ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

  "ಲಕ್ಷದ್ವೀಪದ ಪ್ರಾಚೀನ ನೈಸರ್ಗಿಕ ಸೌಂದರ್ಯ ಮತ್ತು ಸಂಸ್ಕೃತಿಯನ್ನು ತಲೆಮಾರುಗ ಳಿಂದ ಜನ ಪಾಲಿಸಿಕೊಂಡು ಬರುತ್ತಿದ್ದಾರೆ. ಆದರೆ, ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಇದೀಗ ಘೋಷಿಸಿರುವ ಜನ ವಿರೋಧಿ ನೀತಿಗಳಿಂದ, ಅಲ್ಲಿನ ಜನರ ಭವಿಷ್ಯಕ್ಕೆ ಅಪಾಯವಿದೆ" ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

  "ಚುನಾಯಿತ ಪ್ರತಿನಿಧಿಗಳು ಅಥವಾ ಸಾರ್ವಜನಿಕರನ್ನು ಸರಿಯಾಗಿ ಸಮಾಲೋಚಿಸದೆ ನಿರ್ವಾಹಕರು ಏಕಪಕ್ಷೀಯವಾಗಿ ವ್ಯಾಪಕ ಬದಲಾವಣೆಗಳನ್ನು ಪ್ರಸ್ತಾಪಿಸಿದ್ದಾರೆ. ಲಕ್ಷದ್ವೀಪದ ಜನರು ಈ ಅನಿಯಂತ್ರಿತ ಕ್ರಮಗಳ ವಿರುದ್ಧ ಪ್ರತಿಭಟಿಸುತ್ತಿದ್ದಾರೆ.

  ಇದನ್ನೂ ಓದಿ: Amazon CEO: ಯಾರು ಈ ಆಂಡಿ ಜೆಸ್ಸಿ (Andy Jassy) ? ಅಮೇಜಾನ್ ಹೊಸಾ ಸಿಇಒ ಬಗ್ಗೆ ಇಲ್ಲಿವೆ ಇಂಟರೆಸ್ಟಿಂಗ್ ವಿಚಾರ !

  ಹೊಸ ಆಡಳಿತಾಧಿಕಾರಿ, ಸಾಮಾಜಿಕ ವಿರೋಧಿ ಚಟುವಟಿಕೆಗಳ ನಿಯಂತ್ರಣ, ಲಕ್ಷದ್ವೀಪ ಪ್ರಾಣಿಗಳ ಸಂರಕ್ಷಣೆ ನಿಯಂತ್ರಣ ಮತ್ತು ಮದ್ಯ ಮಾರಾಟದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವಂತಹ ನಿಯಮಗಳಲ್ಲಿ ಬದಲಾವಣೆಗಳನ್ನು ಪ್ರಸ್ತಾಪಿಸಿದ್ದಾರೆ. ಇದರ ಮೂಲ ಉದ್ದೇಶ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಲೋಚನೆಯಿಂದಾಗಿ ಉದ್ದೇಶಪೂರ್ವ ಕವಾಗಿ ಸ್ಥಳೀಯ ಸಮುದಾಯಗಳ ಮೇಲೆ ಆಕ್ರಮಣ ನಡೆಸುವುದೇ ಆಗಿದೆ" ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

  ಇದನ್ನೂ ಓದಿ: Mysore Lockdown: ಮೈಸೂರಿನಲ್ಲಿ ವಾರದ 5 ದಿನ ಕಂಪ್ಲೀಟ್ ಲಾಕ್​ಡೌನ್; ಸೋಮವಾರ, ಗುರುವಾರ ಖರೀದಿಗೆ ಅವಕಾಶ

  "ಲಕ್ಷದ್ವೀಪದಲ್ಲಿ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಸದಸ್ಯರನ್ನು ಅನರ್ಹಗೊಳಿಸುವ ಪಂಚಾಯತ್ ನಿಯಂತ್ರಣದ ಕರಡಿನಲ್ಲಿರುವ ನಿಬಂಧನೆಯು ನಿರ್ದಯವಾಗಿ ಪ್ರಜಾಪ್ರಭುತ್ವ ವಿರೋಧಿ" ಎಂದು ಪತ್ರದಲ್ಲಿ ಬರೆಯಲಾಗಿದೆ.

  "ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಮತ್ತು ಮೇಲೆ ತಿಳಿಸಿದ ಆದೇಶಗಳನ್ನು ಹಿಂತೆಗೆದುಕೊಳ್ಳುವಂತೆ ನೋಡಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ. ಲಕ್ಷದ್ವೀಪದ ಜನರು ತಮ್ಮ ಜೀವನ ವಿಧಾನವನ್ನು ಗೌರವಿಸುವ ಮತ್ತು ಅವರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ಅಭಿವೃದ್ಧಿ ದೃಷ್ಟಿಗೆ ಅರ್ಹರಾಗಿದ್ದಾರೆ" ಎಂದು ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.  "ಲಕ್ಷದ್ವೀಪವು ಸಾಗರದಲ್ಲಿ ಭಾರತದ ಆಭರಣವಾಗಿದೆ. ಅಧಿಕಾರದಲ್ಲಿರುವ ಅಜ್ಞಾನಿ ನಿರ್ವಾಹಕರು ಅದನ್ನು ನಾಶಪಡಿಸುತ್ತಿದ್ದಾರೆ. ನಾನು ಲಕ್ಷದ್ವೀಪ ಜನರೊಂದಿಗೆ ನಿಲ್ಲುತ್ತೇನೆ" ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

  ಸಾಮಾಜಿಕ ಜಾಲತಾಣಗಳ ಬದಲು ಜನರ ಸಮಸ್ಯೆ ಆದ್ಯತೆಯಾಗಲಿ; ರಾಹುಲ್

  ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ವಾಟ್ಸಾಪ್-ಟ್ವಿಟರ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳ ವಿರುದ್ಧ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ದಾಖಲೆಯ ಬೆಲೆ ಏರಿಕೆ ಮತ್ತು ಕೊರೊನಾ ಲಸಿಕೆಯ ಬಗ್ಗೆ ಜನರು ಕೇಳುತ್ತಿದ್ದರೆ, ಕೇಂದ್ರ ಸರ್ಕಾರ ಮಾತ್ರ ಸಾಮಾಜಿಕ ಜಾಲತಾಣ ಹಾಗೂ ತನ್ನ ಸುಳ್ಳು ವರ್ಚಸ್ಸನ್ನು ಆದ್ಯತೆಯಾಗಿ ಪರಿಗಣಿಸಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, "ಕೇಂದ್ರ ಸರ್ಕಾರವು ಸಾಮಾಜಿಕ ಜಾಲತಾಣ, ಸುಳ್ಳು ವರ್ಚಸ್ಸಿನ ಬಗ್ಗೆ ಆದ್ಯತೆಯಾಗಿ ತೆಗೆದುಕೊಂಡಿದೆ. ಆದರೆ ಸಾರ್ವಜನಿಕರ ಆದ್ಯತೆಯು ದಾಖಲೆ ಮುರಿಯುತ್ತಿರುವ ಬೆಲೆ ಏರಿಕೆ ಮತ್ತು ಕೊರೋನಾ ಲಸಿಕೆಯಾಗಿದೆ. ಇದು ಯಾವ ಅಚ್ಚೇ ದಿನ್‌?" ಎಂದು ಪ್ರಶ್ನಿಸಿದ್ದಾರೆ.

  ದೇಶದಲ್ಲಿ ಕೊರೋನಾ ಎರಡನೆ ಅಲೆಯು ಗ್ರಾಮೀಣ ಭಾಗದಲ್ಲಿ ತೀವ್ರವಾಗಿ ಹರಡುತ್ತಿರುವುದರ ಬಗ್ಗೆ ತಜ್ಞರು ಆಂತಕ ವ್ಯಕ್ತಪಡಿಸುತ್ತಿದ್ದಾರೆ. ಕೊರೋನಾ ಲಸಿಕೆಯ ಪ್ರಕ್ರಿಯೆಯು ನಿಧಾನವಾಗುತ್ತಿದ್ದು, ದೆಹಲಿಯು ಇತ್ತೀಚೆಗೆ ಯುವಕರಿಗೆ ಲಸಿಕೆಯನ್ನು ನೀಡುವುದನ್ನು ನಿಲ್ಲಿಸಲಿದ್ದೇವೆ ಎಂದು ಹೇಳಿದೆ. ಆದರೆ ಕೇಂದ್ರ ಸರ್ಕಾರ ಮಾತ್ರ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್‌, ಟ್ವಿಟರ್‌, ಫೇಸ್‌ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳ ಹಿಂದೆ ಬಿದ್ದಿದ್ದು, ಹೊಸ ನಿಯಮಗಳನ್ನು ಹೇರಲು ಪ್ರಯತ್ನಿಸುತ್ತಿದೆ.
  Published by:MAshok Kumar
  First published: