ಕೊರೋನಾ ಕರಾಳತೆ - ಸೋಂಕಿತರ ಸೇವೆಗಾಗಿ ಮದುವೆಯನ್ನೇ ಮುಂದೂಡಿದ ದಿಟ್ಟ ವೈದ್ಯೆ

ಭಾವಿ ಪತಿಗೆ ಕರೆ ಮಾಡಿ ಮದುವೆಯನ್ನು ಮುಂದೂಡಬಹುದು ಆದರೆ, ಚಿಕಿತ್ಸೆಯನ್ನು ಮುಂದೂಡಲು ಸಾಧ್ಯವಿಲ್ಲ ಎಂದಿದ್ದರು. ಇದಕ್ಕೆ  ಭಾವಿ ಪತಿ ಕೂಡ ಸಮ್ಮತಿಸಿದ್ದರು. ಹೀಗಾಗಿ ಮದುವೆಯನ್ನು ಮುದೂಡಿ ಕೆಲಸಕ್ಕೆ ಹಾಜರಾಗಿದ್ದಾರೆ.

ವೈದ್ಯೆ ಶಿಫಾ ಎಂ.ಮೊಹಮ್ಮದ್ 

ವೈದ್ಯೆ ಶಿಫಾ ಎಂ.ಮೊಹಮ್ಮದ್ 

 • Share this:
  ಕೇರಳ(ಏ.01): ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು,  ಇದನ್ನುತಡೆಗಟ್ಟಲು ಸರ್ಕಾರ ಅವಿರತ ಪ್ರಯತ್ನವನ್ನು ಮಾಡುತ್ತಿದೆ. ವೈದ್ಯರು, ಪೊಲೀಸರು, ತಮ್ಮ ವೈಯುಕ್ತಿಕ ಅಗತ್ಯತೆಗಳನ್ನು ಬದಿಗೊತ್ತಿ ಕೆಲಸ ಮಾಡುತ್ತಿದ್ದಾರೆ. ಇದರ ಮಧ್ಯೆ ಕೇರಳದಲ್ಲಿ ವ್ಯದ್ಯೆಯೊಬ್ಬರು ಮದುವೆಯನ್ನು ಮುಂದೂಡಿ ಕೊರೋನಾ ವಿರುದ್ದ ಹೋರಾಟಕ್ಕೆ ಮುಂದಾಗಿದ್ದಾರೆ. 

  ವೈದ್ಯೆ ಶಿಫಾ ಎಂ.ಮೊಹಮ್ಮದ್ ಕಣ್ಣೂರಿನ ಪರಿಯಾರ್ ಮೆಡಿಕಲ್ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ದೇಶದಲ್ಲಿ ಕೇರಳ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿ ನಲುಗಿದೆ. ಮಾರ್ಚ್ ತಿಂಗಳಿನ ಮೊದಲ ವಾರದಲ್ಲಿ ಶಿಫಾ ಇಲ್ಲಿನ ಐಸೋಲೇಶನ್ ವಾರ್ಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

  ದುಬೈನಲ್ಲಿನ ಉದ್ಯಮಿ ಜೊತೆ ಮಾರ್ಚ್ 29ಕ್ಕೆ ವೈದ್ಯೆ ಶಿಫಾ ಅವರ ಮದುವೆ ಸಮಾರಂಭ ನಡೆಯಬೇಕಿತ್ತು. ಮದುವೆಗೆ ಎಲ್ಲಾ ತಯಾರಿ ಸಹ ನಡೆದಿತ್ತು. ಆದರೆ ಭಾವಿ ಪತಿಗೆ ಕರೆ ಮಾಡಿ ಮದುವೆಯನ್ನು ಮುಂದೂಡಬಹುದು ಆದರೆ, ಚಿಕಿತ್ಸೆಯನ್ನು ಮುಂದೂಡಲು ಸಾಧ್ಯವಿಲ್ಲ ಎಂದಿದ್ದರು. ಇದಕ್ಕೆ  ಭಾವಿ ಪತಿ ಕೂಡ ಸಮ್ಮತಿಸಿದ್ದರು. ಹೀಗಾಗಿ ಮದುವೆಯನ್ನು ಮುದೂಡಿ ಕೆಲಸಕ್ಕೆ ಹಾಜರಾಗಿದ್ದಾರೆ.

  ನನ್ನಂತೆ ಹಲವರು ನಿಶ್ಚಿತಾರ್ಥ, ಮದುವೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮುಂದೂಡಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ನಾನೂ ಒಬ್ಬಳು. ನಾನು ವಿಶೇಷವಾಗಿ ಏನೂ ಮಾಡಿಲ್ಲ, ನನ್ನ ಕರ್ತವ್ಯ ಮಾಡಿದ್ದೇನೆ ಅಷ್ಟೇ ಎಂದು ವೈದ್ಯೆ ಶಿಫಾ ಪ್ರತಿಕ್ರಿಯಿಸಿದ್ದಾರೆ.

  ಕಣ್ಣೂರಿನ ಪರಿಯಾರ್ ಮೆಡಿಕಲ್ ಕಾಲೇಜಿನಲ್ಲಿ 234 ಸೋಂಕಿತರು ಐಸೋಲೇಶನ್ ವಾರ್ಡ್‌ನಲ್ಲಿದ್ದಾರೆ. ಕೇರಳದಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದೆ. ಇದೀಗ ಕೇರಳದ ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗುತ್ತಿವೆ.

  ಕೇರಳದಲ್ಲಿ 24 ಹೊಸ ಕೊರೋನಾ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿವೆ ಎಂದು ಸಿಎಂ ಪಿಣರಾಯ್​​ ವಿಜಯನ್​ ಹೇಳಿದ್ದಾರೆ.  ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 265ಕ್ಕೆ ಏರಿಯಾಗಿದೆ.

  ಇದನ್ನೂ ಓದಿ : ಹಸಿವಿನಿಂದ ಕಂಗೆಟ್ಟವರಿಗೆ ಇನ್ನೂ ದೊರಕದ ಸರ್ಕಾರದ ನೆರವು - ನಿರ್ಗತಿಕರಿಗೆ ಹಸಿವು ನೀಗಿಸಿ ಮಾನವೀಯತೆ ಮೆರೆಯುತ್ತಿರುವ ವ್ಯಕ್ತಿ

  ಭಾರತದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಎಂದಿನಂತೆಯೇ ಮುಂದುವರೆದಿದೆ. ಇಂದು ಮಹಾರಾಷ್ಟ್ರದಲ್ಲಿ ಮತ್ತೋರ್ವ ವ್ಯಕ್ತಿ ಸೋಂಕಿಗೆ ಬಲಿಯಾದ ಕಾರಣ ಮೃತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ ಸುಮಾರು 242 ಮಂದಿಗೆ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಕೊರೋನಾ ಪೀಡಿತರ ಸಂಖ್ಯೆ 1,637ಕ್ಕೆ ಏರಿಕೆಯಾಗಿದೆ. ಈ ಪೈಕಿ 133 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.
  First published: