ಸಿಎಂ ಕಚೇರಿಯಲ್ಲಿ ಕೆಲಸ ಮಾಡಿದ್ದ ಲೇಡಿ ಪೊಲೀಸ್ ಗಂಡನಿಗೆ ಸೋಂಕು - ಕೊರೋನಾ ಭೀತಿಯಲ್ಲಿ ಹಿರಿಯ ಸಚಿವರು, ಅಧಿಕಾರಿಗಳು

ಸಿಎಂ ಕಚೇರಿ ಸಿಬ್ಬಂದಿಗೆ ಕೋವಿಡ್​​-19 ಬಂದಿರುವುದು ಹಿರಿಯ ಸಚಿವರು, ಅಧಿಕಾರಿಗಳು, ಸಿಬ್ಬಂದಿಗೂ ಭೀತಿ ಸೃಷ್ಟಿಸಿದೆ. ಈಗಾಗಲೇ ಲೇಡಿ ಕಾನ್ಸ್​ಟೇಬಲ್​​ಗೆ ಕೋವಿಡ್​​-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಈಕೆಯೊಂದಿಗಿದ್ದ ಎಲ್ಲರಿಗೂ ಕೋವಿಡ್​​-19 ಪರೀಕ್ಷೆ ಮಾಡಿಸುವಂತೆ ಸೂಚಿಸಲಾಗಿದೆ.

ಸಿಎಂ ಬಿ.ಎಸ್.ಯಡಿಯೂರಪ್ಪ.

ಸಿಎಂ ಬಿ.ಎಸ್.ಯಡಿಯೂರಪ್ಪ.

 • Share this:
  ಬೆಂಗಳೂರು(ಜೂ.19): ಮುಖ್ಯಮಂತ್ರಿ ಬಿ.ಎಸ್​​ ಯಡಿಯೂರಪ್ಪನವರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲೇಡಿ ಪೊಲೀಸ್​​ ಕಾನ್ಸ್​​ಟೇಬಲ್ ಗಂಡನಿಗೆ ಕೊರೋನಾ ಪಾಸಿಟಿವ್​​​ ಕಾಣಿಸಿಕೊಂಡಿದೆ. ಇದರಿಂದ ಸಿಎಂ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಗಳಿಗೆ ಕೊರೋನಾ ಭೀತಿ ಶುರುವಾಗಿದೆ. 

  ಇತ್ತೀಚೆಗಷ್ಟೇ ಈ ಲೇಡಿ ಕಾನ್ಸ್​ಟೇಬಲ್​​​ ಸಿಎಂ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಿ.ಎಸ್​ ಯಡಿಯೂರಪ್ಪ ಸ್ಮಾರ್ಟ್​ ಆ್ಯಪ್ ಯೋಜನೆಯಡಿ ಕಾರವಾನ್‌ ಪ್ರವಾಸೋದ್ಯಮದ ಉತ್ತೇಜನಕ್ಕಾಗಿ ಅಭಿವೃದ್ಧಿಪಡಿಸಿದ ಹೊಸ ಕಾರವಾನ್​​ಗಳಿಗೆ ಗ್ರೀನ್​​ ಸಿಗ್ನಲ್​​ ತೋರುವ ಮೂಲಕ ಚಾಲನೆ ನೀಡಿದ್ದರು. ಈ ಕಾರ್ಯಕ್ರಮದಲ್ಲಿ ಈ ಲೇಡಿ ಕಾನ್ಸ್​ಟೇಬಲ್​​ ಕಾರ್ಯ ನಿರ್ವಹಿಸಿದ್ದರು. ಇದೀಗ ಈಕೆ ಗಂಡನಿಗೆ ಕೊರೋನಾ ಕಾಣಿಸಿಕೊಂಡಿದೆ. ಹಾಗಾಗಿ ಈಕೆಗೂ ಕೋವಿಡ್​​-19 ಟೆಸ್ಟ್​ ಮಾಡಲಾಗಿದ್ದು, ಇನ್ನೇನು ವರದಿ ಬರಬೇಕಿದೆ.

  ಸಿಎಂ ಕಚೇರಿ ಸಿಬ್ಬಂದಿ ಸಂಬಂಧಿಗೆ ಕೋವಿಡ್​​-19 ಬಂದಿರುವುದು ಹಿರಿಯ ಸಚಿವರು, ಅಧಿಕಾರಿಗಳು, ಸಿಬ್ಬಂದಿಗೂ ಭೀತಿ ಸೃಷ್ಟಿಸಿದೆ. ಈಗಾಗಲೇ ಲೇಡಿ ಕಾನ್ಸ್​ಟೇಬಲ್ ಗಂಡನಿಗೆ ಕೋವಿಡ್​​-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜತೆಗೆ ಈಕೆಯೊಂದಿಗೆ ಕೆಲಸ  ಮಾಡಿದ ಎಲ್ಲರಿಗೂ ಕೋವಿಡ್​​-19 ಪರೀಕ್ಷೆ ಮಾಡಿಸುವಂತೆ ಸೂಚಿಸಲಾಗಿದೆ.

  ಇದನ್ನೂ ಓದಿ: ದೇಶದಲ್ಲಿ ದಿನೇ‌ದಿನೇ ದುಪ್ಪಟ್ಟಾಗುತ್ತಿರುವ ಕೊರೋನಾ: ಒಂದೇ ದಿನ 13,586 ಹೊಸ ಕೇಸ್​​ ಪತ್ತೆ

  ಜೂನ್​​ 17ನೇ ತಾರೀಕಿನಂದು ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದ್ದ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ, ಡಿಸಿಎಂ ಡಾ. ಸಿ.ಎನ್ ಅಶ್ವತ್ಥ ನಾರಾಯಣ ಮತ್ತಿತರಿಗೆ ಕೊರೋನಾ ಭೀತಿ ಶುರುವಾಗಿದೆ. ಲೇಡಿ ಕಾನ್ಸ್​ಟೇಬಲ್​ ಅಲ್ಲೇ ಕೆಲಸ ಮಾಡುತ್ತಿದ್ದ ಕಾರಣ ಈ ಎಲ್ಲರಿಗೂ ಭಯ ಆಗುತ್ತಿದೆ ಎನ್ನಲಾಗುತ್ತಿದೆ.
  First published: