ಕಿಮ್ಸ್‌ನಲ್ಲಿ ಆಕ್ಸಿಜನ್ ಕೊರತೆ, ಅಷ್ಟಕ್ಕೂ ನಿನ್ನೆ ಆಸ್ಪತ್ರೆಯಲ್ಲಿ ನಡೆದಿದ್ದೇನು? ಇಲ್ಲಿದೆ ಫುಲ್ ಡೀಟೆಲ್ಸ್

ಬೆಂಗಳೂರಿನ ಚಾಮರಾಜಪೇಟೆಯ ಬಳಿ ಇರುವ ಕೆಂಪೇಗೌಡ ವೈದ್ಯಕೀಯ ಸಂಸ್ಥೆ ಒಟ್ಟು 740 ಹಾಸಿಗೆಗಳಿರುವ ಬೃಹತ್ ಆಸ್ಪತ್ರೆ. ಇದರಲ್ಲಿ ಸದ್ಯ 240 ಕೋವಿಡ್, 60 ನಾನ್ ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 113 ಕೋವಿಡ್ ರೋಗಿಗಳು ಆಕ್ಸಿಜನ್ ಮೇಲೆ ಅವಲಂಬಿತರಾಗಿದ್ದಾರೆ.

ಕಿಮ್ಸ್‌ ಆಸ್ಪತ್ರೆ.

ಕಿಮ್ಸ್‌ ಆಸ್ಪತ್ರೆ.

  • Share this:
ಬೆಂಗಳೂರು (ಆಗಸ್ಟ್‌ 18); ನಿನ್ನೆ ರಾತ್ರಿ ಕಿಮ್ಸ್ ಆಸ್ಪತ್ರೆಯಲ್ಲಿ ವಿಪರೀತ ಗೊಂದಲ, ಆತಂಕ ಮನೆಮಾಡಿತ್ತು. ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದ ನೂರಾರು ರೋಗಿಗಳನ್ನು ಧಿಡೀರನೆ ಬೇರೆ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲು ರೆಡಿ ಮಾಡಿಕೊಳ್ಳಲಾಗಿತ್ತು. ಈಗ ಎಲ್ಲಾ ಸಮಸ್ಯೆಗಳೂ ಪರಿಹಾರವಾಗಿದೆ. ರೋಗಿಗಳು ವೈದ್ಯರು ಎಲ್ಲಾ ನಿಟ್ಟುಸಿರು ಬಿಟ್ಟಿದ್ದಾರೆ.‌ ಆದ್ರೆ ನಿನ್ನೆ ಕಿಮ್ಸ್ ನಲ್ಲಿ ನಿಜವಾಗ್ಲೂ ನಡೆದಿದ್ದೇನು? ಇಲ್ಲಿದೆ ಫುಲ್ ಡೀಟೆಲ್ಸ್.

ಬೆಂಗಳೂರಿನ ಚಾಮರಾಜಪೇಟೆಯ ಬಳಿ ಇರುವ ಕೆಂಪೇಗೌಡ ವೈದ್ಯಕೀಯ ಸಂಸ್ಥೆ ಒಟ್ಟು 740 ಹಾಸಿಗೆಗಳಿರುವ ಬೃಹತ್ ಆಸ್ಪತ್ರೆ. ಇದರಲ್ಲಿ ಸದ್ಯ 240 ಕೋವಿಡ್, 60 ನಾನ್ ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 113 ಕೋವಿಡ್ ರೋಗಿಗಳು ಆಕ್ಸಿಜನ್ ಮೇಲೆ ಅವಲಂಬಿತರಾಗಿದ್ದರು. ಕೋವಿಡ್ ಸಮಸ್ಯೆ ಶುರುವಾದ ನಂತರ ಕಿಮ್ಸ್ ಗೆ ಆಕ್ಸಿಜನ್ ಸರಬರಾಜು ನಿಯಮಿತವಾಗಿ ಬೇಕಾಗುತ್ತಿದೆ.

ಆದ್ದರಿಂದ ಇತ್ತೀಚೆಗೆ ಬಹುತೇಕ ಪ್ರತಿದಿನ ಆಕ್ಸಿಜನ್ ಕೊಳ್ಳುತ್ತಿದೆ ಕಿಮ್ಸ್. ಯೂನಿವರ್ಸಲ್ ಗ್ಯಾಸ್ ಏಜೆನ್ಸಿಯಿಂದ ರೋಗಿಗಳಿಗೆ ಬಳಸುವ ಲಿಕ್ವಿಡ್ ಆಕ್ಸಿಜನ್ ಕೊಳ್ಳಲಾಗುತ್ತಿದೆ. ಆದರೆ, ಈಗ ಎಲ್ಲೆಡೆ ಆಕ್ಸಿಜನ್ ಗೆ ಭಾರೀ ಬೇಡಿಕೆ ಇರೋದ್ರಿಂದ ಆ ಕಂಪೆನಿ ಅವಶ್ಯಕತೆ ಇರುವಷ್ಟು ಆಕ್ಸಿಜನ್ ನೀಡಲಿಲ್ಲ. ಕೇವಲ ಕಾಲು ಭಾಗದಷ್ಟು ಮಾತ್ರ ಆಕ್ಸಿಜನ್ ನೀಡಿ ತೆರಳಿದೆ. ಈ ಪ್ರಮಾಣ ಕಿಮ್ಸ್ ನಲ್ಲಿ ಆಗಲೇ ವೆಂಟಿಲೇಟರ್ ಮತ್ತು ಆಕ್ಸಿಜನ್ ಸಪ್ಲೈ ಮೇಲಿದ್ದ ರೋಗಿಗಳಿಗೆ ಹೆಚ್ಚು ಸಮಯದವರೆಗೆ ಸಾಲುತ್ತಿರಲಿಲ್ಲ.

ನಂತರ ಧಿಡೀರನೆ ಅನಾಹುತವಾಗುವುದು ಬೇಡ ಎಂದು ಕಿಮ್ಸ್ ಆಡಳಿತ ಕೂಡಲೇ ಎಚ್ಚೆತ್ತುಕೊಂಡಿದೆ.ನಿನ್ನೆ(ಸೋಮವಾರ) ಸಂಜೆ 5.30ರ ವೇಳೆಗೆ ತಮ್ಮ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅವಶ್ಯಕವಾದಷ್ಟು ಆಕ್ಸಿಜನ್ ಇಲ್ಲ, ಇದರಿಂದ ರೋಗಿಗಳಿಗೆ ಪ್ರಾಣಾಪಾಯ ಉಂಟಾಗಬಹುದು ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಕಿಮ್ಸ್ ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಕೂಡಲೇ ಕಾರ್ಯಪ್ರವೃತ್ತವಾದ ಇಲಾಖೆ ಕಿಮ್ಸ್ ಬಾಗಿಲಿಗೆ ಸಾಲು ಸಾಲು ವೆಂಟಿಲೇಟರ್‌ ಆಂಬ್ಯುಲೆನ್ಸ್ ಗಳನ್ನು ಕಳಿಸಿದೆ. ಜೊತೆಗೆ ವಿಕ್ಟೋರಿಯಾ ಮತ್ತು ಬೌರಿಂಗ್ ಆಸ್ಪತ್ರೆಗೆ ಮಾಹಿತಿ ನೀಡಿ ಅಲ್ಲಿಗೆ ರೋಗಿಗಳನ್ನು ರವಾನೆ ಮಾಡಲು ವ್ಯವಸ್ಥೆ ಮಾಡಿದೆ. ಇದರೊಂದಿಗೆ ಕಿಮ್ಸ್ ಗೂ ವಿಕ್ಟೋರಿಯಾ ಆಸ್ಪತ್ರೆಯಿಂದ ಆಕ್ಸಿಜನ್ ಸಿಲಿಂಡರ್ ಗಳನ್ನು ಕಳಿಸಲಾಗಿದೆ. ಬೇರೆ ಆಕ್ಸಿಜನ್ ವಿತರಕರ ಜೊತೆ ಮಾತನಾಡಿ ಒಂದು ಟ್ಯಾಂಕರ್ ಲಿಕ್ವಿಡ್ ಆಕ್ಸಿಜನ್ ಕಳಿಸುವ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ : ಪಿಎಂ ಕೇರ್ಸ್‌ ಕುರಿತ ರಾಹುಲ್ ಗಾಂಧಿ ಪ್ರಶ್ನೆ; ಕಿಡಿಕಾರಿದ ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌

ಇದಲ್ಲದೇ ಹೀಗೆ ತುರ್ತು ಸಂದರ್ಭದಲ್ಲಿ ಸಮಸ್ಯೆ ಉಂಟುಮಾಡಿದ ಯೂನಿವರ್ಸಲ್ ಗ್ಯಾಸ್ ಏಜೆನ್ಸಿಯನ್ನು ಡ್ರಗ್ ಕಂಟ್ರೋಲರ್ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗಾಗಿ ಆ ಸಂಸ್ಥೆಯೂ ಕೂಡಲೇ ಒಂದು ಟ್ಯಾಂಕರ್ ಲಿಕ್ವಿಡ್ ಆಕ್ಸಿಜನ್ ಕಳಿಸಿದೆ. ಇಷ್ಟೆಲ್ಲಾ ಆಗುವಷ್ಟರಲ್ಲಿ 23 ಕೋವಿಡ್ ರೋಗಿಗಳನ್ನು ವಿಕ್ಟೋರಿಯಾ ಮತ್ತು ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.‌

ಉಳಿದ 90 ಕೋವಿಡ್ ರೋಗಿಗಳು ಕಿಮ್ಸ್ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ 90 ಜನ ಕೂಡಾ ನಿರಂತರ ಆಕ್ಸಿಜನ್ ಅವಶ್ಯಕತೆ ಇರುವ ರೋಗಿಗಳು. ಇದಕ್ಕೆಲ್ಲಾ ಕಾರಣ ಕೋವಿಡ್ ನಿಂದಾಗಿ ಹೆಚ್ಚಿರುವ ಆಕ್ಸಿಜನ್ ಬೇಡಿಕೆ. ಕೋವಿಡ್ ನಂತರ ಪ್ರತಿದಿನ ಆಕ್ಸಿಜನ್ ಸಪ್ಲೈ ಅವಶ್ಯಕತೆ ಇದೆ.‌ ಇದರಿಂದಾಗಿ ಆಕ್ಸಿಜನ್ ಸರಬರಾಜು ಮಾಡುವವರಿಗೂ ಒತ್ತಡವಿದೆ. ಇದಕ್ಕಾಗಿ ಬದಲಿ ಮಾರ್ಗಗಳನ್ನು ಸರ್ಕಾರ ತುರ್ತಾಗಿ ಕಂಡುಕೊಳ್ಳಲಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
Published by:MAshok Kumar
First published: